ಬಂಟ್ವಾಳ : ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಂಪನ್ನ(Bantwala: Satya –Dharma Jodu kere Kambala)
ಬಂಟ್ವಾಳ : ಸತ್ಯ–ಧರ್ಮ ಜೋಡುಕರೆ ಬಯಲು ಕಂಬಳ ಸಂಪನ್ನ
(Bantwala)ಬಂಟ್ವಾಳ: ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ನಡೆದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಭಾನುವಾರ ಮಧ್ಯಾಹ್ನ ಸಂಪನ್ನಗೊಂಡಿತು.
ಶನಿವಾರ ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಸಮಾರೋಪಸಮಾರಂಭ ನಡೆಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉಳಿಯಂತಹ ಕುಗ್ರಾಮದಲ್ಲಿ ಶ್ರೀರಾಮನ ನಿಷ್ಠೆ, ಆದರ್ಶವನ್ನು ಮೈಗೋಡಿಸಿಕೊಂಡಿರುವ ರಾಮಾಂಜನೇಯ ಗೆಳೆಯರ ಬಳಗದ ಸದಸ್ಯರು ನಿರಂತರವಾಗಿ 12 ವರ್ಷದಿಂದ ಕಂಬಳ ಕ್ರೀಡೆಯನ್ನು ನಡೆಸುವ ಮೂಲಕ ತುಳುನಾಡಿನ ಜನಪದ ಕ್ರಿಡೆಯನ್ನು ಉಳಿಸಿ, ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಉದ್ಯಮಿಗಳಾದ ಕಿರಣ್ ಕುಮಾರ್ ಡಿ, ಸಂದೇಶ್ ಶೆಟ್ಟಿ, ಮಾಧವ ಮಾವೆ, ಬೂಡ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಜಗನ್ನಾಥ ಬಂಗೇರ ನಿರ್ಮಲ್, ತಾ. ಪಂ. ಮಾಜಿ ಉಪಾಧ್ಯಕ್ಷ ಆನಂದ ಎ. ಶಂಭೂರು, ಉದ್ಯಮಿ ಹೇಮಚಂದ್ರ, ಮೋಹನದಾಸ್ ಕೊಟ್ಟಾರಿ, ಪ್ರಮುಖರಾದ ಸುಕೇಶ್ ಚೌಟ, ಗಣೇಶ್ ರೈ ಮಾಣಿ, ನಂದರಾಮ ರೈ, ಪುರುಷೊತ್ತಮ ಶೆಟ್ಟಿ, ಕಿರಣ್ ಕುಮಾರ್ ಮಂಜಿಲ, ಯಶೋಧರ ಕರ್ಬೆಟ್ಟು, ದಿನೇಶ್ ಬಂಟ್ವಾಳ, ಜಯಪ್ರಕಾಶ್ ಬಂಟ್ವಾಳ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಇದೇ ವೇಳೆ ಹಿರಿಯ ಕಂಬಳ ಒಟಗಾರ ಮಂಜುನಾಥ ಭಂಡಾರಿ ನಕ್ರೆ ಅವರನ್ನುಸನ್ಮಾನಿಸಲಾಯಿತು.
ಕಂಬಳ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸತೀಶ್ಚಂದ್ರ ಸಾಲಿಯಾನ್, ಜೋನ್ ಸಿರಿಲ್ ಡಿಸೋಜ ಹಾಗೂ ಉಪ್ಪಿನಂಗಡಿ ದಂತ ವೈದ್ಯರಾದ ಡಾ. ರಾಜಾರಾಮ ಕೆ.ಬಿ. ಅವರನ್ನು ಅಭಿನಂದಿಸಲಾಯಿತು.
ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ಲತೀಶ್ ಕುಕ್ಕಾಜೆ, ಅಧ್ಯಕ್ಷ ಸುದರ್ಶನ್ ಬಜ, ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ, ಪದಾಧಿಕಾರಿಗಳಾದ ಎನ್.ಧನಂಜಯ ಶೆಟ್ಟಿ ಸರಪಾಡಿ, ಶಾಂತಪ್ಪ ಪೂಜಾರಿ ಹಟದಡ್ಕ, ಸುರೇಶ್ ಮೈರ, ಉಮೇಶ್ ಪೂಜಾರಿ, ಪುರುಷೋತ್ತಮ ಪೂಜಾರಿ ಪಲ್ಕೆ, ರಂಜಿತ್ ಮೈರಾ, ವಸಂತ ಪೂಜಾರಿ ಡೆಚ್ಚಾರು, ಚೇತನ್ ಊರ್ದೊಟ್ಟು ಮೊದಲಾದವರಿದ್ದರು.
ಶಿವಾನಂದ ಮೈರಾ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಶಾಂತ್ ಮೈರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಫಲಿತಾಂಶ:
ಕನೆಹಲಗೆ: ಪ್ರಥಮ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ್ ವಿ ಕೋಟ್ಯಾನ್. ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್, ದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್
ಅಡ್ಡ ಹಲಗೆ:
ಪ್ರಥಮ: ರಾಯಿ ಶೀತಲ ಅಗರಿ ರೂಪ ರಾಜೇಶ್ ಶೆಟ್ಟಿ, ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್: ದ್ವಿತೀಯ: ನಾರಾವಿ ಯುವರಾಜ್ ಜೈನ್
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್,
ಹಗ್ಗ ಹಿರಿಯ: ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಎ” ಓಡಿಸಿದವರು: ಬಂಬ್ರಾಣ ಬೈಲು ವಂದಿತ್ ಶೆಟ್ಟಿ,
ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಬಿ”
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ,
ಹಗ್ಗ ಕಿರಿಯ: ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ , ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ, ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ,
ಓಡಿಸಿದವರು: ಕಾವೂರು ದೋಟ ಸುದರ್ಶನ್,
ನೇಗಿಲು ಹಿರಿಯ: ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ “ಬಿ” ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ, ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ, ನೇಗಿಲು ಕಿರಿಯ:
ಪ್ರಥಮ: ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಎ”
ಓಡಿಸಿದವರು: ನಕ್ರೆ ಪವನ್ ಮಡಿವಾಳ
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಓಡಿಸಿದವರು: ಬಾರಾಡಿ ನತೀಶ್.
ಕೂಟದಲ್ಲಿ ಒಟ್ಟು143 ಜೊತೆ ಕೋಣಗಳು ಭಾಗವಹಿಸಿದ್ದವು.