ಬೆಳಪುವಿನಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಧರ್ಮಸ್ಥಳ ಕ್ಷೇತ್ರದಿಂದ ಸಹಾಯ ಹಸ್ತ(A helping hand from Sri Kshethra Dharmastala to a woman who was suffering from illness in Belapu)
ಬೆಳಪುವಿನಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಧರ್ಮಸ್ಥಳ ಕ್ಷೇತ್ರದಿಂದ ಸಹಾಯ ಹಸ್ತ
(Kaup) ಕಾಪು : ಕಾಪು ತಾಲೂಕು ಉಚ್ಚಿಲ ವಲಯದ ಬೆಳಪು ಪಕೀರಣಕಟ್ಟೆ ಎಂಬಲ್ಲಿ ಶ್ರೀಮತಿ ರಝಿಯಾ ಎಂಬವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ತುರ್ತು ಸಹಾಯ ನಿಧಿಯಿಂದ ಮಂಜೂರಾದ 20 ಸಾವಿರ ರೂ. ಮೊತ್ತ ವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ಯಾಸಿನ್, ಜನಜಾಗೃತಿ ವೇದಿಕೆಯ ಸದಸ್ಯರಾದ ಮೊಹಮ್ಮದ್ ಫಾರೂಕ್, ವಲಯ ಮೇಲ್ವಿಚಾರಕರಾದ ಶ್ರೀಮತಿ ವಿಜಯ, ಸೇವಾ ಪ್ರತಿನಿಧಿ ಶ್ರೀಮತಿ ಸುಜಾತ, ಕಾಪು ಪುರಸಭಾ ಸದಸ್ಯ ನೂರುದ್ದೀನ್, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.