ಬೆಳಪು ವ್ಯವಸಾಯ ಸಹಕಾರಿ ಸಂಘ : ಆಡಳಿತ ಮಂಡಳಿಗೆ ಡಾ. ದೇವಿಪ್ರಸಾದ್ ಶೆಟ್ಟಿಯವರ ತಂಡ ಅವಿರೋಧ ಆಯ್ಕೆ (Dr. Deviprasad Shettyʼs Team is the undisputed choice)
ಬೆಳಪು ವ್ಯವಸಾಯ ಸಹಕಾರಿ ಸಂಘ : ಆಡಳಿತ ಮಂಡಳಿಗೆ ಡಾ. ದೇವಿಪ್ರಸಾದ್ ಶೆಟ್ಟಿಯವರ ತಂಡ ಅವಿರೋಧ ಆಯ್ಕೆ
(Belapu) ಬೆಳಪು: ಬೆಳಪು ವ್ಯವಸಾಯ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಾ. ದೇವಿಪ್ರಸಾದ್ ಶೆಟ್ಟಿಯವರ ತಂಡ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಕರ್ನಾಟಕ ಸರಕಾರದ ನಿಯಮದಂತೆ ಸಹಕಾರಿ ಸಂಘಗಳ ಚುನಾವಣಿಗೆ ಆದೇಶವಾಗಿದ್ದು, ಪ್ರತಿಷ್ಠಿತ ಬೆಳಪು ವ್ಯವಸಾಯ ಸಹಕಾರಿ ಸಂಘದ ಚುನಾವಣೆಗೆ ನಿರ್ದೇಶಕರುಗಳ ಪೈಕಿ 12 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ತಂಡ ಆವಿರೋಧವಾಗಿ ಆಯ್ಕೆಯಾಗಿದೆಯೆಂದು ಚುನಾವಣಾಧಿಕಾರಿ ಕೆ. ಆರ್. ರೋಹಿತ್ ಪ್ರಕಟಿಸಿದ್ದಾರೆ.
ಈ ಸಂದರ್ಭ ಬೆಳಪು ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಸುಲೋಚನಾ ಉಪಸ್ಥಿತರಿದ್ದರು.
ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಕಳೆದ 35 ವರ್ಷಗಳಿಂದ 8 ನೇ ಅವಧಿಗೆ ಸತತವಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿರುವುದು ಪ್ರಾಥಮಿಕ ಸಹಕಾರಿ ವ್ಯವಸ್ಥೆಯಲ್ಲಿ ಇತಿಹಾಸವಾಗಿದೆ.
2024-25 ರಿಂದ ಮುಂದಿನ 5 ವರ್ಷಕ್ಕೆ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಪಾಂಡು ಶೆಟ್ಟಿ, ಆಲಿಯಬ್ಬ, ಗೋಪಾಲ ಪೂಜಾರಿ, ಸಾಧು ಶೆಟ್ಟಿ, ಮೀನ ಪೂಜಾರ್ತಿ, ಸುಂದರಿ, ವಿಮಲ ಆಂಚನ್, ಅನಿತ, ಪಾಂಡು ಎಮ್ ಶೇರಿಗಾರ, ಸೈಮನ್ ಡಿಸೋಜ, ದ್ಯುಮಣಿ ಆರ್ ಭಟ್‌ರವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಬೆಳಪು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.