ಬೆಳ್ತಂಗಡಿ: ವಿದ್ಯುತ್ ಶಾಕಿಗೆ ವಿದ್ಯಾರ್ಥಿ ಬಲಿ (Student dies of electric shock)
ಬೆಳ್ತಂಗಡಿ: ವಿದ್ಯುತ್ ಶಾಕಿಗೆ ವಿದ್ಯಾರ್ಥಿ ಬಲಿ
(Belthangadi) ಬೆಳ್ತಂಗಡಿ: ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ಪೆರೊಡಿತ್ತಾಯನ ಕಟ್ಟೆ ಬಳಿ ಘಟಿಸಿದೆ.
ತೆಂಕ ಕಾರಂದೂರು ಪೆರೋಡಿತ್ತಾಯನ ಕಟ್ಟೆ ಬಳಿಯ ಮನೆಯ ವಿದ್ಯಾರ್ಥಿ ಸ್ಟೀಪನ್ (14) ಮೃತಪಟ್ಟ ಬಾಲಕ. ಈತ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ
ಕ್ರಿಸ್ ಮಸ್ ಪ್ರಯುಕ್ತ ಬುಧವಾರ ಸಂಜೆ ಸಾಂತಕ್ಲಾಸ್ ಬರುವ ಹಿನ್ನೆಲೆಯಲ್ಲಿ ಗೋದಳಿಗೆ ವಿದ್ಯುತ್ ಅಲಂಕಾರ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಅವಘಡ ಸಂಭವಿಸಿದೆ.
ತಕ್ಷಣ ಆತನ ಅಜ್ಜಿ ಹಾಗೂ ದೊಡ್ಡಪ್ಪ ಸ್ಥಳೀಯ ಆಸ್ಪತ್ರೆ ಕರೆದೊಯ್ದಿದ್ದು, ಆಗಲೇ ಸ್ಟೀಫನ್ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಬಾಲಕನ ತಂದೆ ತಾಯಿ ಎರಡು ವರ್ಷದ ಹಿಂದೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಈತ ಅಜ್ಜಿ ಮನೆಯಲ್ಲಿ ಇದ್ದು, 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಘಟನಾ ಸ್ಥಳಕ್ಕೆ ವೇಣೂರು ಠಾಣಾಧಿಕಾರಿ ಶ್ರೀ ಶೈಲ, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಕ್ಲೇಮೆಂಟ್ ಬ್ರಗ್ಸ್ ಘಟನಾ ಭೇಟಿ ನೀಡಿದರು.
ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.