ಮಂಗಳೂರು – ಮೂಡಬಿದ್ರಿ – ಕಾರ್ಕಳ ಮಾರ್ಗದಲ್ಲಿ 4 ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿʼ ಸೋಜಾ ಸ್ವಾಗತ (MLC Ivan Dʼsouza welcomed the start of 4 KSRTC Bus service Mangaluru-Moodabidri-Karkala)
ಮಂಗಳೂರು – ಮೂಡಬಿದ್ರಿ – ಕಾರ್ಕಳ ಮಾರ್ಗದಲ್ಲಿ 4 ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿʼ ಸೋಜಾ ಸ್ವಾಗತ
(Mangaluru) ಮಂಗಳೂರು: ಮಂಗಳೂರು – ಮೂಡಬಿದ್ರಿ -ಕಾರ್ಕಳ ಮಾರ್ಗದಲ್ಲಿ ಶಕ್ತಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ಬಸ್ ಸಂಚಾರ ಇಲ್ಲದೇ ತೊಂದರೆ ಉಂಟಾಗಿದ್ದ ಬಗ್ಗೆ ವಿಧಾನ ಪರಿಷತ್ ಶಾಸಕ ಐವನ್ ಡಿ’ ಸೋಜಾರವರುಕಳೆದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ, ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮತ್ತು ಗಮನ ಸೆಳೆಯುವ ಪ್ರಶ್ನೆ ಹಾಕುವ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೋಮವಾರ ಪ್ರಾದೇಶಿಕ ಆಯುಕ್ತರು 4 ಬಸ್ಸಿನ ಪರ್ಮಿಟ್‌ಗಳನ್ನು ನೀಡಿ, ಬಸ್ ಪ್ರಾಂಭಿಸುವುದಾಗಿ ತಿಳಿಸಿದ್ದಾರೆ.
ಬಸ್ ಮತ್ತು ಚಾಲಕರ ಲಭ್ಯತೆ ಇಲ್ಲದ ಕಾರಣಕ್ಕಾಗಿ ಮುಂದಿನ ಶುಕ್ರವಾರ ಬೆಳಿಗ್ಗೆಯಿಂದ 4 ಬಸ್ ಸಂಚಾರ ಪ್ರಾರಂಭಿಸಲಾಗುವುದು ಮತ್ತು ಹೆಚ್ಚಿನ ಬಸ್ ಗಳನ್ನು ಮಂಗಳೂರು ನಗರದಲ್ಲಿ ಮೂಡಬಿದ್ರೆ – ಕಾರ್ಕಳ ಮಾರ್ಗದಲ್ಲಿ ಸಂಚರಿಸಲಾಗುವುದು ಎಂದು ಸಾರಿಗೆ ಇಲಾಖೆ ಅನುಮತಿ ನೀಡಲಾಗಿದೆ ಎಂದು ವಿಧಾನ ಪರಿಷತ್ತಿನ ಶಾಸಕ ಐವನ್ ಡಿ’ ಸೋಜಾರವರು ತಿಳಿಸಿದ್ದಾರೆ.
ಐವನ್ ಡಿ’ ಸೋಜಾರವರು ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಬಸ್ ಸಂಚಾರ ಕಲ್ಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.