ಮಜೂರು ಗ್ರಾಪಂನಲ್ಲಿ ಆರೋಗ್ಯದ ಕುರಿತಾದ ತರಬೇತಿ ಕಾರ್ಯಕ್ರಮ (Health Program at Majuru Grama Panchayath)
ಮಜೂರು ಗ್ರಾಪಂನಲ್ಲಿ ಆರೋಗ್ಯದ ಕುರಿತಾದ ತರಬೇತಿ ಕಾರ್ಯಕ್ರಮ
(Majuru) ಮಜೂರು: ಮಜೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಆರೋಗ್ಯ ಕಾರ್ಯಪಡೆ ಸದಸ್ಯರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮವನ್ನು ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರುರವರು ಉದ್ಘಾಟಿಸಿದರು.
ಶ್ರೀಮತಿ ಚಂದ್ರಕಲಾ, BHEO ರವರು ಆರೋಗ್ಯದ ಕುರಿತಾಗಿ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿಲಾಸಿನಿ, ಸದಸ್ಯರಾದ ಶ್ರೀಮತಿ ಸಹನಾ ತಂತ್ರಿ, ಶ್ರೀಮತಿ ಜ್ಯೋತಿ, ಕು. ವನಿತಾ, ಸಂದೀಪ್, ಮಧುಸೂಧನ್, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಪೂರ್ಣಿಮ, ಕ್ಷಯ ರೋಗ ಮೇಲ್ವಿಚಾರಕ ಕೃಷ್ಣ ಕಾಪು, ಕಾಪು ಸಮುದಾಯ ಆರೋಗ್ಯ ಅಧಿಕಾರಿ ಡಯಾನ, ಅಂಗನವಾಡಿ ಕಾರ್ಯಕರ್ತೆಯರಾದ ರಮ್ಯ, ಆಶಾ ಕಾರ್ಯಕರ್ತೆ ಪೂಜಾಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿ ಪ್ರಸಾದ್ ಭಂಡಾರಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.