ಮುಂಬಯಿಯ ವಿ.ಕೆ. ಸುವರ್ಣ ಪಡುಬಿದ್ರಿ ಕಟ್ಕೆರೆ ಸಂಜೀವ ಶೆಟ್ಟಿ ಪ್ರಶಸ್ತಿಗೆ ಆಯ್ಕೆ ; ಡಿ.4 ರಂದು ಪ್ರಶಸ್ತಿ ಪ್ರದಾನ (VK Suvarna chosen by Katkere Sanjiva Shetty award : Award presentation on Dec 4)
ಮುಂಬಯಿಯ ವಿ.ಕೆ. ಸುವರ್ಣ ಪಡುಬಿದ್ರಿ ಕಟ್ಕೆರೆ ಸಂಜೀವ ಶೆಟ್ಟಿ ಪ್ರಶಸ್ತಿಗೆ ಆಯ್ಕೆ ; ಡಿ.4 ರಂದು ಪ್ರಶಸ್ತಿ ಪ್ರದಾನ
(Mumbai) ಮುಂಬಯಿ, ಡಿ 2 : ಗೋರೆಗಾಂವ್ ಕರ್ನಾಟಕ ಸಂಘವು 66 ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸಿದವರಿಗಾಗಿ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದ ದಿವಂಗತ ಕರೆ ಸಂಜೀವ ಶೆಟ್ಟಿಯವರ ಧರ್ಮ ಪತ್ನಿ ಮತ್ತು ಮಕ್ಕಳು ಸ್ಥಾಪಿಸಿದ ದತ್ತಿ ನಿಧಿ ಮತ್ತು ಸಮಾಜ ಸೇವಕ ಪ್ರಶಸ್ತಿಗೆ ಈ ಬಾರಿ ನವಿ ಮುಂಬೈಯ ಶ್ರೇಷ್ಠ ಸಮಾಜ ಸೇವಕ ವಿ. ಕೆ ಸುವರ್ಣರವರು ಆಯ್ಕೆ ಆಗಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಡಿಸೆಂಬರ್ 4ರಂದು ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಹಾಲ್ ಆರೇರೋಡ್ ಪಶ್ಚಿಮ ಇಲ್ಲಿ ನೆರವೇರಲಿದೆ.
ನವಿ ಮುಂಬೈಯ ಶ್ರೇಷ್ಠ ಸಮಾಜ ಸೇವಕರಾದ ವಿ. ಕೆ ಸುವರ್ಣರು ಆಯ್ಕೆ ಆಗಿರುವುದು ಪ್ರಶಸ್ತಿಗೆ ಗೌರವ ಹೆಚ್ಚಿದೆ.
ವಿ.ಕೆ ಸುವರ್ಣರು ಮೂಲತಃ ಪಡುಬಿದ್ರಿಯ ನಡ್ಸಾಲಿನಲ್ಲಿ 1955ರಲ್ಲಿ ಜನಿಸಿ ಹುಟ್ಟೂರಿನಲ್ಲಿ ಹೈಸ್ಕೂಲು ಮುಗಿಸಿದ್ದಾರೆ. ಮೂಲ್ಕಿಯ ವಿಜಯ ಕಾಲೇಜು ಪದವಿ ಪಡೆದು, ಉದ್ಯೋಗಾರ್ತಿಯಾಗಿ ಮುಂಬೈಗೆ ತೆರಳಿದ್ದಾರೆ. ವೃತ್ತಿಯ ಜೊತೆಗೆ ಪ್ರವೃತ್ತಿಯಾದ ನಾಟಕ ಕಲೆಯನ್ನು ಮುಂದುವರಿಸುತ್ತಾ, ಸಮಾಜ ಸೇವೆಯತ್ತ ಗಮನ ಹರಿಸಿದರು. ಸಮಾನ ಮನಸ್ಕ ಸಹೋದ್ಯೋಗಿಗಳು ಹಾಗೂ ಸ್ನೇಹಿತರನ್ನು ಸೇರಿಸಿಕೊಂಡು ಸುವರ್ಣ ಜ್ಯೋತಿ ರಂಗ ಭೂಮಿ, ಫೈನ್ ಆರ್ಟ್ಸ್ ಶ್ರೀ ಶನೀಶ್ವರ ಮಂದಿರ, ಶ್ರೀ ಅಯ್ಯಪ್ಪ ಭಕ್ತ ಚಾರಿಟೇಬಲ್ ಟ್ರಸ್ಟ್ ಮುಂತಾದ ಧಾರ್ಮಿಕ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ಅರ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಉತ್ತಮ ನಾಟಕಕಾರರಾದ ವಿಕೆ, ಸಮಾಜ ಸೇವೆಗೆ ಮೊದಲ ಆದ್ಯತೆ ನೀಡುವ ಸಲುವಾಗಿ ಮುಂಬೈಯಲ್ಲಿ ಹಲವು ಉನ್ನತ ಮಟ್ಟದ ಸಂಘ ಸಂಸ್ಥೆಯಲ್ಲಿ ಭಾಗವಹಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದರು.
ತಾವು ಮಾಡಿದ ಯಾವುದೇ ಸೇವಾ ಕಾರ್ಯಕ್ಕೆ ಪ್ರಚಾರ ಬಯಸುವುದಿಲ್ಲವಾದರೂ ಇವರಿಗೆ ಹತ್ತು ಹಲವಉ ಪ್ರಶಸ್ತಿ ಲಭಿಸಿದೆ. ಇವುಗಳಲ್ಲಿ ಮುಖ್ಯವಾಗಿ ಕನ್ನಡ ಸೇವಾ ಸಂಘ ಪೊವಾಯಿ, ಚಾರ್ಕೋಪ್ ಕನ್ನಡ ಬಳಗ, ಸರ್ವ ಕಲ್ಚರಲ್ ಅಕಾಡೆಮಿ ಬೆಂಗಳೂರು, ಆರ್ಯಭಟ ಅಕಾಡೆಮಿ ಬೆಂಗಳೂರು, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಸಾಣೂರು- ಕಾರ್ಕಳ ಕರ್ನಾಟಕ ಸಮಾಜ ರತ್ನ ಪ್ರಶಸ್ತಿ, ವಿ.ಕೆ. ಸುವರ್ಣ ಅಭಿಮಾನಿ ಬಳಗದ ರಂಗದ ಮಾಣಿಕ್ಯ ಪ್ರಶಸ್ತಿ, ಮಧುರ ತರಂಗ ಮಂಗಳೂರು ಇವರಿಂದ ರಂಗಭೂಮಿ ಭಾರ್ಗವ ಪ್ರಶಸ್ತಿ, ಇವರ ಮುಡಿಗೆ ಸೇರಿಕೊಂಡಿವೆ .
ಖಾರ್ಘರ್ ಕರ್ನಾಟಕ ಸಂಘ, ರಂಗಭೂಮಿ ಫೈನ್ ಆರ್ಟ್ಸ್, ನವಿ ಮುಂಬೈ ಕನ್ನಡ ಸಂಘದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಬಿಲ್ಲವರ ಎಸೋಸಿಯೇಷನ್‌ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.
ವಿಕೆ ಸುವರ್ಣರವರಿಂದ ಇನ್ನಷ್ಟು ಸಮಾಜ ಸೇವೆ ಸಮಾಜಕ್ಕೆ ಸಿಗುವಂತಾಗಲಿ ಎನ್ನುವುದು “ಈ MEDIA ಕನ್ನಡ”ದ ಹಾರೈಕೆ.