# Tags
#ನಿಧನ

ಮುಂಬೈ : ಭಾಗವತಿಕೆ ಮಾಡುತ್ತಿದ್ದಾಗಲೇ ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು (Mumbai : Bhagavath Kukkehalli Vittal Prabhu passes away)

 ಮುಂಬೈ : ಭಾಗವತಿಕೆ ಮಾಡುತ್ತಿದ್ದಾಗಲೇ ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

(Mumbai) ಮುಂಬೈ: ನಗರದಲ್ಲಿ ಯಕ್ಷಗಾನ ಸೇವೆ ಮಾಡುತ್ತಿದ್ದ ಕುಕ್ಕೆಹಳ್ಳಿ ವಿಟ್ಠಲ ಪ್ರಭು ಅವರು  ಯಕ್ಷಗಾನ ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು ಬಂದು ಕೆಲವೇ ಕ್ಷಣಗಳಲ್ಲೇ ಅಸುನೀಗಿದ್ದಾರೆ.

ಮುಂಬೈ ದಹಿಸರ್ ಕಾಶಿಮಠದಲ್ಲಿ ಕುಕ್ಕೆಹಳ್ಳಿ ವಿಟ್ಠಲ ಪ್ರಭು ಅವರ ನಿರ್ದೇಶನದಲ್ಲಿ ಯಕ್ಷಗಾನ ನಡೆಯುತ್ತಿತ್ತು. ಭಾಗವತಿಕೆ ನಡೆಸುತ್ತಿದ್ದ ವೇಳೆ ಎದೆ ನೋವು ಖಾಣಿಸಿಕೊಂಡಾಗ, ಭಾಗವತಿಕೆಯನ್ನು ಮತ್ತೊಬ್ಬ ಬೇರೊಬ್ಬ ಭಾಗವತರಿಗೊಪ್ಪಿಸಿ ಕ್ಷಣಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ.

 ವಿಟ್ಠಲ್‌ ಪ್ರಭು ಅವರು ಯಕ್ಷಗಾನವನ್ನು ಮುಂಬೈಯಲ್ಲಿ ಪರಿಚಯಿಸಲು ತನ್ನದೇ ಒಂದು ತಂಡವನ್ನು ಕಟ್ಟಿಕೊಂಡು, ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುತ್ತಿದ್ದರು.

 ವಿಟ್ಠಲ್‌ ಪ್ರಭುರವರು ಭಾಗವತಿಗೆ, ಪಾತ್ರ, ತಾಳಮದ್ದಲೆ, ಯಕ್ಷಗಾನ ನಿರ್ದೇಶನ, ಮರಾಠಿ ಹಾಗೂ ಕೊಂಕಣಿ ಭಾಷೆಯಲ್ಲಿ ಯಕ್ಷಗಾನವನ್ನು ಪ್ರಚುರ ಪಡಿಸಿ ಕಲಾ ಸೇವೆ ಸಲ್ಲಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2