# Tags
#ಸಂಘ, ಸಂಸ್ಥೆಗಳು

ಮೂಳೂರು ನಾರಾಯಣ ಗುರು ಸಂಘದ ರುದ್ರಭೂಮಿಗೆ ಧರ್ಮಸ್ಥಳ ಯೋಜನೆಯಿಂದ ಸಹಕಾರ (Cooperation from Dharmasthala to Rudhrabhoomi of Mooluru Billawa Sangha)

  ಮೂಳೂರು ನಾರಾಯಣ ಗುರು ಸಂಘದ ರುದ್ರಭೂಮಿಗೆ ಧರ್ಮಸ್ಥಳ ಯೋಜನೆಯಿಂದ ಸಹಕಾರ

 (Mooluru) ಮೂಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಹಿಂದೂ ರುದ್ರ ಭೂಮಿ ಅಭಿವೃದ್ಧಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆದೇಶದಂತೆ ಸಿಲಿಕಾನ್ ಚೇಂಬರ್ ನಿರ್ಮಾಣಕ್ಕಾಗಿ 1,52,000 ರೂ ಮಂಜೂರು ಮಾಡಲಾಗಿದೆ.

ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ  ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಹಾಗೂ ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. 

   ಈ ಸಂದರ್ಭ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮುಳೂರು ಇದರ ಅಧ್ಯಕ್ಷ ಪ್ರಕಾಶ್  ವಿ ಅಂಚನ್,    ಉಪಾಧ್ಯಕ್ಷ ವಾಸು ಎಸ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಅಮೀನ್, ರಮೇಶ್ ಪೂಜಾರಿ, ಮಹಾಲಿಂಗ ಅಂಚನ್, ಧೀರೇಶ್ ಮೂಳೂರು, ಚಂದ್ರಪ್ಪ ಕುಕ್ಯಾನ್‌, ಸಂಜೀವ ಅಮೀನ್, ಸುಧೀರ್ ಎಂ,  ವಿಜಯ ಆರ್ ಕೋಟ್ಯಾನ್‌, ಒಕ್ಕೂಟದ ಅಧ್ಯಕ್ಷರಾದ ಸುಲೋಚನ ಬಂಗೇರ, ಮೇಲ್ವಿಚಾರಕಿ ಶ್ರೀಮತಿ ವಿಜಯ,  ಸೇವಾ ಪ್ರತಿನಿಧಿ ಸುಮನಾ ಟಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2