ಲಿಯೋ ಸಿಂಕ್ 2024 ನೃತ್ಯ ಸ್ಪರ್ಧೆ, ವಿದ್ಯಾರ್ಥಿ ವೇತನ ವಿತರಣೆ (Leo sink 2024 Dance Competition, Scolorship Distribution)
ಲಿಯೋ ಸಿಂಕ್ 2024 ನೃತ್ಯ ಸ್ಪರ್ಧೆ, ವಿದ್ಯಾರ್ಥಿ ವೇತನ ವಿತರಣೆ
(Mangaluru) ಮಂಗಳೂರು : ಯುವ ಶಕ್ತಿ ಸದುದ್ದೇಶದಿಂದ ಒಂದಾಗಿ ಕೆಲಸ ಮಾಡಿದಾಗ ಯಾವುದೇ ಕಾರ್ಯವು ಅಸಾಧ್ಯವಲ್ಲ ಎಂದು ಲಯನ್ಸ್ ಸಂಸ್ಥೆಯ ಪೂರ್ವ ಅಂತಾರಾಷ್ಟ್ರೀಯ ನಿರ್ದೇಶಕ ವಿ ವಿ ಕೃಷ್ಣ ರೆಡ್ಡಿ ಹೇಳಿದರು.
ಅವರು ಪುರಭವನದಲ್ಲಿ ನಡೆದ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ಲಯನ್ಸ್ ಜಿಲ್ಲೆ 317 ಡಿ ಯ ಲಿಯೋ ಜಿಲ್ಲೆಯ ವತಿಯಿಂದ ಆಯೋಜಿಸಲ್ಪಟ್ಟ ನೃತ್ಯ ಸ್ಪರ್ಧೆ ಲಿಯೋ ಸಿಂಕ್ 2024 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ ಎಂ, ಲಿಯೋ ತಂಡದ ಪ್ರಯತ್ನವನ್ನು ಹಾಗೂ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಕರ್ನಾಟಕದ ವಿವಿಧ ಭಾಗಗಳು ಹಾಗೂ ಕಾಸರಗೋಡಿನಿಂದ ಆಗಮಿಸಿದ ತಂಡಗಳು ಸೇರಿ ಹನ್ನೊಂದು ಆಯ್ದ ತಂಡಗಳು ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿದ್ದವು.
ಸ್ಪರ್ಧಾ ಕಾರ್ಯಕ್ರಮವು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆಯ ಉದ್ದೇಶವನ್ನು ಹೊಂದಿದ್ದು, ಮುಖ್ಯ ಅತಿಥಿ ವಿ ವಿ ಕೃಷ್ಣ ರೆಡ್ಡಿ ಕಾರ್ಯಕ್ರಮದ ಸಂಧರ್ಭದಲ್ಲಿಯೇ ಘೋಷಿಸಿದ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೂ ಸೇರಿದಂತೆ 35 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರದಂತೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿಕಟ ಪೂರ್ವ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜಾ ಹಾಗೂ ಲಿಯೋ ಸಂಯೋಜಕರಾದ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಥಮ ಉಪ ಜಿಲ್ಲಾ ಗವರ್ನರ್ ಕುಡಿಪಿ ಅರವಿಂದ್ ಶೆಣೈ, ಸಂಪುಟ ಕಾರ್ಯದರ್ಶಿ ಗೀತಾ ರಾವ್, ಮಲ್ಟಿಪಲ್ ಲಿಯೋ ಅಧ್ಯಕ್ಷೆ ಸಿಯಾ ಸುಶೀಲ್, ಸುಮಿತ್ರಾ ಶೆಟ್ಟಿ, ಮೋಹನ್ ಕೊಪ್ಪಲ್, ವಿನೂತನ್ ಕಲಿವೀರ್, ರಿಶಾಲ್ ಡಿಸೋಜ, ಲೆಸ್ಟರ್ ವಿನಾಲ್ ಲಸ್ರಾಡೋ, ಶಮಂತ್ ಅಂಚನ್ ಹಾಗೂ ಇತರ ಪಧಾಧಿಕಾರಿಗಳು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲಿಯೋ ಅಧ್ಯಕ್ಷೆ ಲಿಯೋ ಲಯನ್ ಸಮೀಕ್ಷಾ ರಿಯಾ ಸ್ವಾಗತಿಸಿದರು.
ಪ್ರಸನ್ನ ಪೈ ಪ್ರಾರ್ಥನೆ ಸಲ್ಲಿಸಿದರು. ಅಪೇಕ್ಷಾ ನೇಹಾ ಧನ್ಯವಾದ ವಂದಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.