ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ : ಹಳೆಯಂಗಡಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ (Congress win in by election : victory by Haleyangadi Congress workers)
ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ : ಹಳೆಯಂಗಡಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ
(Haleyangadi) ಹಳೆಯಂಗಡಿ: ರಾಜ್ಯದ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ್ದು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಹಳೆಯಂಗಡಿ ಜಂಕ್ಷನ್ ಬಳಿ ನಡೆಯಿತು.
ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಕಾಂಗ್ರೆಸ್ ನಾಯಕರಾದ ಆಲ್ವಿನ್ ಪಕ್ಷಿಕೆರೆ, ಗೋಪಿನಾಥ ಬಡಂಗ, ಯೋಗೀಶ್ ಕೋಟ್ಯಾನ್, ಪುತ್ತುಭಾವ, ಬಾಲಚಂದ್ರ ಕಾಮತ್, ಅನಿಲ್ ಪೂಜಾರಿ ಸಸಿಹಿತ್ಲು, ಅಬ್ದುಲ್ ಅಜೀಜ್, ಬಶೀರ್ ಕುಳಾಯಿ, ರಕ್ಷಿತ್ ಕೊಳಚಿಕಂಬಳ, ಜಲಜ, ನೀತು ನಿರಂಜಲ, ಭೀಮಶಂಕರ್ ಆರ್ ಕೆ, ಸುಭಾಷ್ ಚಂದ್ರ ಕೆ ಎಸ್ ರಾವ್ ನಗರ, ಸುಚಿತ್ರ ಪ್ರಸನ್ನ ಕುಮಾರ್, ಸಂತೋಷ್ ಕೊಪ್ಪಳ, ಎಚ್ ಹಮೀದ್, ಧರ್ಮಾನಂದ ಶೆಟ್ಟಿಗಾರ, ಸೋನಿ ಹಳೆಯಂಗಡಿ, ಪ್ರಮೋದ್ ಸಸಿಹಿತ್ಲು, ವಾಹಿದ್ ತೋಕೂರು, ವಾಮನ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.