# Tags
#social service

ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥನ ರಕ್ಷಿಸಿದ ವಿಶು ಶೆಟ್ಟಿ : ಪುನಶ್ಚೇತನ ಕೇಂದ್ರಕ್ಕೆ ದಾಖಲು (By Vishu Shetty resque of the mentaly ill in costody : Admission to a rehabilitation centre)

ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥನ ರಕ್ಷಿಸಿದ ವಿಶು ಶೆಟ್ಟಿ : ಪುನಶ್ಚೇತನ ಕೇಂದ್ರಕ್ಕೆ ದಾಖಲು

(Udupi) ಉಡುಪಿ : ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸಿ, ಹಲ್ಲೆ ನಡೆಸುತ್ತಾ  ಸಾರ್ವಜನಿಕರಿಂದಲೂ ಹಲ್ಲೆಗೆ ಒಳಗಾಗಿ ಅಮಾನವೀಯ ಜೀವನದಲ್ಲಿ ಬಂಧನದಲ್ಲಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿಯವರು ಸ್ಥಳೀಯರ ನೆರವಿನಿಂದ ರಕ್ಷಿಸಿ, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮುಂದಿನ ಆರೈಕೆಗೆ ಕೆಎಂಸಿಯ ಅಂಗಸಂಸ್ಥೆ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರ ಹೊಂಬೆಳಕಿಗೆ ದಾಖಲಿಸಿದ ಘಟನೆ ನಡೆದಿದೆ.

ಈ ಬಗ್ಗೆ ಸಾರ್ವಜನಿಕರು ಇಲಾಖೆಗೆ ಬಹಳಷ್ಟು ದೂರು ನೀಡಿದ್ದರೂ ಪ್ರಯೋಜನ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ವ್ಯಕ್ತಿ ಸುರೇಶ (45) (ಹೆಸರು ಬದಲಾಯಿಸಲಾಗಿದೆ) ಮಾನಸಿಕ ಅಸ್ವಸ್ಥ. ಮನೆ ಮಂದಿಗೆಲ್ಲ ಬದುಕಲು ಬಿಡದೆ, ನೆರೆಹೊರೆ ಸಾರ್ವಜನಿಕ ಕ್ಷೇತ್ರದಲ್ಲಿ ಬೊಬ್ಬೆ, ಸೊತ್ತುಗಳಿಗೆ ಹಾನಿ, ಮಹಿಳೆಯರಿಗೆ ತೊಂದರೆ ಹೀಗೆ ನಿರಂತರವಾಗಿ ಹಿಂಸಿಸುತ್ತಾ ಇದ್ದು, ಇದನ್ನು ತಡೆಯಲಾಗದೆ ಸ್ಥಳೀಯರು ಸೇರಿ ಬಂಧನದಲ್ಲಿರಿಸಿದ್ದರು.

 ಈ ಬಗ್ಗೆ ಮಾಹಿತಿ ಪಡೆದು ವಿಶು ಶೆಟ್ಟಿ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ ಹೊಂಬೆಳಕು ಸಂಸ್ಥೆಯಲ್ಲಿ ದಾಖಲಾತಿಗೆ ವಿನಂತಿಸಿದ್ದರು. ವಿನಂತಿಕೆ ಸ್ಪಂದಿಸಿದ ಸಂಸ್ಥೆಯ ಮುಖ್ಯಸ್ಥರು ಹೊಂಬೆಳಕಿಗೆ ದಾಖಲಿಸಿದ್ದಾರೆ.

 ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಆಶ್ರಯ ನೀಡಿದ “ಹೊಂಬೆಳಕು” ಸಂಸ್ಥೆಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ. ರಕ್ಷಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2