ಶಿಕ್ಷಕರು ನೈತಿಕ ಪಾಠ ಕಲಿಯಬೇಕಿದೆ ; ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ (Teachers need to learn moral lessons : Koodligi MLA Dr. NT Shrinivas)
ಶಿಕ್ಷಕರು ನೈತಿಕ ಪಾಠ ಕಲಿಯಬೇಕಿದೆ ; ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್
(Vijayanagara Koodligi) ವಿಜಯನಗ̧ರ ಕೂಡ್ಲಿಗಿ: ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವ ಶಿಕ್ಷಕರು ಮೊದಲು ನೈತಿಕ ಪಾಠ ಕಲಿಯಬೇಕಿದೆ ಎಂದುಕೂಡ್ಲಿಗಿ ಕ್ಷೇತ್ರದ ಶಾಕರಾದ ಡಾ. ಎನ್.ಟಿ. ಶ್ರೀನಿವಾಸ್ ಶಿಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವ ಸಮಿತಿ ಆಯೋಜಿಸಿದ್ದ. ಸಮನ್ವಯ ಸಮಿತಿ ಕಾರ್ಯಗಾರದಲ್ಲಿ ಹಾಜರಿದ್ದ, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರನ್ನುದ್ಧೇಶಿಸಿ ತಿಳುವಳಿಕೆಯ ಮಾತನಾಡಿದರು.
ಸಾರ್ವಜನಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸುವಾಗ, ತುಂಬಾ ಜವಾಬ್ದಾರಿಯಿಂದಿರಬೇಕಾಗಿದೆ. ನಾವೆಲ್ಲರೂ ಸಾರ್ವಜನಿಕ ಸೇವೆಗೆ ಪ್ರತಿಯಾಗಿ, ಸರ್ಕಾರದಿಂದ ಸಂಬಳದ ರೂಪದಲ್ಲಿ ಜನರ ಹಣವನ್ನು ಹಣ ಪಡೆಯುತ್ತಿದ್ದೇವೆ. ಅದಕ್ಕಾಗಿಯಾದರೂ ನಾವು, ನಿಷ್ಠೆ ಪ್ರಾಮಾಣಿಕತೆಯಿಂದ ಕರ್ಥವ್ಯ ನಿರ್ವಹಿಸಬೇಕಾಗಿದೆ. ಇದನ್ನೆಲ್ಲಾ ಮರೆತ ಕೆಲ ಶಿಕ್ಷಕರು ಕರ್ತವ್ಯದ ಸಮಯದಲ್ಲಿ ತಮ್ಮ ಕರ್ತವ್ಯ ಬಿಟ್ಟು, ಅನ್ಯ ಕೆಲಸಗಳಲ್ಲಿ ಭಾಗಿ ಆದ ಬಗ್ಗೆ ದೂರು ಬಂದಿದ್ದು, ಮುಂದೆ ತಪ್ಪು ಆಗದಂತೆ ಕರ್ತವ್ಯ ನಿರ್ವಹಿಸಿ ಎಂದರು.
ವೇದಿಕೆಯಲ್ಲಿ SDMC ರಾಜ್ಯಾಧ್ಯಕ್ಷರಾದ ಉಮೇಶ ಜಿ ಗಂಗವಾಡಿ, ರಾಜ್ಯ ಉಪಾಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ, ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ, ಕಾರ್ಯದರ್ಶಿ ಜಿ.ಎಸ್. ಪಾರ್ವತಿ. ರಾಜ್ಯ ಖಜಾಂಚಿ ಜ್ಯೋತಿ ರಾಮಶೆಟ್ಟಿ, ನೌಕರರ ಸಂಘದ ಅಧ್ಯಕ್ಷ ಎಸ್. ವೆಂಕಟೇಶ ವೇದಿಕೆಯಲ್ಲಿದ್ದರು.
ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರುಗೌಡ, SDMC ವಿವಿಧ ಜಿಲ್ಲೆಗಳ ಮುಖಂಡರು, ವಿವಿದ ತಾಲೂಕುಗಳ ಮುಖಂಡರು, ತಾಲೂಕಿನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ SDMC ಸಮನ್ವಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.