ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಯೋಜನೆಯಲ್ಲಿ ಜಲಾನಯನ ತರಬೇತಿ (Watershed training in Sri Kshethra Dharmastala Village development project planing)
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಯೋಜನೆಯಲ್ಲಿ ಜಲಾನಯನ ತರಬೇತಿ
(Adamaru) ಅದಮಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಅದಮಾರು ಕಾರ್ಯಕ್ಷೇತ್ರದ ಅದಮಾರು ಯುವಕ ಮಂಡಲದ ಸಭಾಭವನದಲ್ಲಿ ಜಲಾನಯನ ತರಬೇತಿ ಕಾರ್ಯಕ್ರಮ ನೆರವೇರಿತು.
ಈ ತರಬೇತಿಯನ್ನು ಪ್ರಗತಿಪರ ಕೃಷಿಕರಾದ ದೀಪಕ್ ಬೈಲೂರು ಉದ್ಘಾಟಿಸಿ ಮಾಹಿತಿ ನೀಡಿದರು.
ಮಳೆನೀರು ಕೊಯ್ಲು ವ್ಯವಸ್ಥೆಯು ಅಂತರ್ಜಲ ವೃದ್ಧಿ ಮಾಡುತ್ತದೆ ಮತ್ತು ಭೂಮಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಅಂತರ್ಜಲವನ್ನು ಮರುಪೂರಣ ಮಾಡುತ್ತದೆ. ಕಡಿಮೆ ಮಳೆ ಬಿದ್ದರೂ ಸಹ ಮಳೆನೀರು ಕೊಯ್ಲು ವ್ಯವಸ್ಥೆಯು ಸುಸ್ಥಿರ ಅಂತರ್ಜಲ ಸಿಗುವಂತೆ ಮಾಡುತ್ತದೆ.
ಈ ನೀರನ್ನು ಶೋಧಿಸಿ, ಮಳೆ ನೀರು ಸಂಗ್ರಹಕ್ಕೆಂದು ನಿರ್ಮಿಸಲಾಗಿರುವ ಟ್ಯಾಂಕುಗಳನ್ನು ಶೇಖರಿಸಿಟ್ಟುಕೊಳ್ಳಬೇಕು. ಇಳಿಜಾರು ಮಾಡುಗಳಿರುವ ಮನೆಗಳಲ್ಲಿ ತಾರಸಿಗೆ ಪೈಪ್ ಒಂದನ್ನು ವ್ಯವಸ್ಥೆ ಮಾಡಿ ಅದು ಮಳೆ ನೀರು ಸಂಗ್ರಹ ತೊಟ್ಟಿಗೆ ಬೀಳುವಂತೆ ಮಾಡಬೇಕು ಎಂದು ತಿಳಿಸಿದರು.
ತರಬೇತಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಯತೀನ್, ವಲಯದ ಮೇಲ್ವಿಚಾರಕರಾದ ಶ್ರೀಮತಿ ಸರಿತಾ, ಕೃಷಿ ಮೇಲ್ವಿಚಾರಕರಾದ ದೇವೇಂದ್ರ, ಸೇವಾ ಪ್ರತಿನಿಧಿ ಶ್ರೀಮತಿ ಪಾರ್ವತಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.