ಸರ್ವಿಸ್ ರಸ್ತೆಯಲ್ಲಿರುವ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಿ : ಕಿರಣ್ ಕುಮಾರ್ (Clear the vehicals on the service road and allow smooth trafic : Kirankumar Udyavara)
ಸರ್ವಿಸ್ ರಸ್ತೆಯಲ್ಲಿರುವ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಿ : ಕಿರಣ್ ಕುಮಾರ್
(Udupi) ಉಡುಪಿ: ಸರ್ವಿಸ್ ರಸ್ತೆಯಲ್ಲಿರುವ ವಾಹನ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸಮಾಜ ಸೇವಕ ಕಿರಣ್ ಕುಮಾರ್ ಉದ್ಯಾವರರವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸಿ ಅಂಬಲ್ಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಕೆಲಸವು ಪ್ರಾರಂಭ ಗೊಂಡಿದೆ. ಅಲ್ಲದೆ ಈ ಕೆಲಸವು ಸಂಪೂರ್ಣ ಗೊಳ್ಳಲು ಸರಿ ಸುಮಾರು ಎರಡು ವರ್ಷ ತಗಲಬಹುದೆಂದು ಅಂದಾಜಿಸಲಾಗಿದೆ. ಈಗಾಗಲೇ ಹೆದ್ದಾರಿಯಲ್ಲಿ ವಾಹನ ದಟ್ಟನೇ ಜಾಸ್ತಿಯಾಗಿದ್ದು, ಮುಂಬರುವ ಏಪ್ರಿಲ್ – ಮೇ ತಿಂಗಳಿನಲ್ಲಿ ಇನ್ನಟು ಹೆಚ್ಚಾಗುವ ಸಾಧ್ಯತೆ ಇದೆ.
ಈಗಾಗಲೇ ಹೆದ್ದಾರಿ ಕಾಮಗಾರಿ ಪ್ರಾರಂಭ ಆಗಿದ್ದರಿಂದ ವಾಹನಗಳು ಕಿನ್ನಿಮುಲ್ಕಿಯಿಂದ ಮುಂದೆ ಬರುವಾಗ ರಾಷ್ಟ್ರೀಯ ಹೆದ್ದಾರಿ ಪಥ ಬದಲಾಯಿಸಿ ಸರ್ವಿಸ್ ರಸ್ತೆಗೆ ಹೋಗಲು ಅನುವು ಮಾಡಿ ಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ವಾಹನಗಳು ಕಿದಿಯೂರ್ – ಅಂಬಲ್ಪಡಿಯಿಂದ ಬರುವ ವಾಹನಗಳು ಕೂಡಾ ಸರ್ವಿಸ್ ರಸ್ತೆಯನ್ನೇ ಬಳಸಬೇಕಾಗಿದೆ. ಮುಂದೆ ಕರಾವಳಿಯಿಂದ ಮಂಗಳೂರು ಕಡೆಗೆ ಸಾಗುವ ವಾಹನಗಳು ಹಾಗೂ ಉಡುಪಿ ನಗರದ ವಾಹನಗಳು ಇನ್ನೊಂದು ಬದಿಯ ಸರ್ವಿಸ್ ರಸ್ತೆಯನ್ನು ಅವಲಂಬಿಸಬೇಕಾಗಿದೆ.
ಕಿನ್ನಿ ಮುಲ್ಕಿಯಿಂದ ಕರಾವಳಿ ಜಂಕ್ಷನ್‌ವರೆಗೆ ಹೆದ್ದಾರಿಯ ಇಕ್ಕಡೆಗಳಲ್ಲಿ ಇರುವ ಸರ್ವೀಸ್ ರಸ್ತೆ ಯಲ್ಲಿ ಯಾವುದೇ ದ್ವಿಚಕ್ರ, ತ್ರಿಚಕ್ರ, ಇನ್ನಿತರ ಘನ ಹಾಗೂ ಮಧ್ಯಮ ಗಾತ್ರದ ಯಾವುದೇ ವಾಹನವನ್ನು ನಿಲ್ಲಿಸದಂತೆ ಕ್ರಮ ಕೈ ಗೊಳ್ಳಬೇಕು.ಇದರಿಂದ ಮುಂದೆ ರಸ್ತೆಯಲ್ಲಿ ಬ್ಲಾಕ್ ಆಗದೇ ಆಂಬುಲೆನ್ಸ್, ಶಾಲಾ ವಾಹನ, ಅಲ್ಲದೆ ಇನ್ನಿತರ ಅಗತ್ಯ ವಸ್ತುಗಳ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ವಾಗುತ್ತದೆ. ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನ ನಿಲ್ಲಿಸದ ಹಾಗೆ ನೋಡಿಕೊಳ್ಳಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಯನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸಮಾಜ ಸೇವಕ ಕಿರಣ್ ಕುಮಾರ್ ಉದ್ಯಾವರರವರು
ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಹಾಗೂ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ವಿನಂತಿಸಿದ್ದಾರೆ.