ಸವಿರುಚಿ ಗೆಣಸಲೆ : “ಕಾಯಿ ಗೆಣಸಲೆ” ಮಾಡುವ ರೀತಿ (Saviruchi – How to make “Genasele”)
ಸವಿರುಚಿ ಗೆಣಸಲೆ : “ಕಾಯಿ ಗೆಣಸಲೆ” ಮಾಡುವ ರೀತಿ
ಬಾಳೆ ಎಲೆಯಲ್ಲಿ ಗೆಣಸಲೆ ಮಾಡುವ ಬಗ್ಗೆ ಪುತ್ತೂರಿನ ಸೌಮ್ಯ ಪೆರ್ನಾಜೆಯವರ ಲೇಖನ (9480240643)
ಪುತ್ತೂರು: ಗೆಣಸಲೆ ರುಚಿ ತಿಂದವನಿಗೆ ಗೊತ್ತು ಅದರ ರುಚಿ. ಬಾಳೆ ಎಲೆಯಲ್ಲಿ ಮಾಡುವ ಈ ತಿಂಡಿಗೆ, ಈಗಿನ ಪಿಜ್ಜಾ – ಬರ್ಗರ್ ಏನು ಅಲ್ಲ. ಬಾಳೆಲೆಯ ಊಟದಲ್ಲಿರುವ ರುಚಿಯೇ ಬೇರೆ. ಬಾಳೆಎಲೆಯಲ್ಲಿ ಮಾಡುವ ಕಡುಬು, ಗಟ್ಟಿ, ಪತ್ರೊಡೆ, ಮೂಡೇ ಇಡ್ಲಿ, ಒಂದಿಲ್ಲೊಂದು ವೈವಿಧ್ಯ ತಿಂಡಿಗಳು ಇದು ಬಲು ಫೇವರೆಟ್. ಹಳ್ಳಿಯ ಸವಿರುಚಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ. ಬಾಳೆ ಎಲೆ ಮತ್ತು ಅರಿಶಿನ ಎಲೆಯಲ್ಲಿಯೂ ಗೆಣಸಲೆ ಮಾಡುತ್ತಾರೆ.
ಗೆಣಸೆಲೆ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು :- ಬೆಳ್ತಿಗೆ ಅಕ್ಕಿ 1 ಕಪ್, ಹಲಸಿನ ಹಣ್ಣಿನ ತುಣುಕುಗಳು 1 ಕಪ್ ಅಥವಾ ತೆಂಗಿನಕಾಯಿ ತುರಿ 1 ಕಪ್ , ಬೆಲ್ಲ 1 ಕಪ್, ಏಲಕ್ಕಿ, ಉಪ್ಪು ರುಚಿಗೆ ತಕ್ಕಷ್ಟು, ಬೇಕಿದ್ದರೆ ಕಾಳುಮೆಣಸು,
ತಯಾರಿಸುವ ವಿಧಾನ :- ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ನೆನೆಸಿ, ರುಬ್ಬಬೇಕು. ಬಾಳೆಎಲೆಯನ್ನು ಬಾಡಿಸಿ ಅದರಲ್ಲಿ ಅಕ್ಕಿ ಹಿಟ್ಟನ್ನು ದೋಸೆಯ ಆಕಾರದಲ್ಲಿ ಹರಡಬೇಕು. ನಂತರ ಹಲಸಿನ ಹಣ್ಣನ್ನು ಸಣ್ಣ ತುಣುಕುಗಳನ್ನಾಗಿ ಮಾಡಿ, ತೆಂಗಿನಕಾಯಿ ಏಲಕ್ಕಿ, ತುರಿ ಬೆಲ್ಲ ಪಾಕ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆಯಂತೆ ಹರಡಬೇಕು.
ಅರ್ಧಭಾಗಕ್ಕೆ ಸ್ವಲ್ಪ ಸ್ವಲ್ಪ ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿದಾಗ ಗೆಣಸೆಲೆ ರೆಡಿ.
ಒಂದು ಚಮಚ ಹಸುವಿನ ತುಪ್ಪ ಹಾಕಿ ಸವಿದರೆ, ಇದು ಸೂಪರ್.