# Tags
#PROBLEMS

ಸಾಲಿಗ್ರಾಮ: ಹೆದ್ದಾರಿ ನಿರ್ವಹಣೆ ನಿರ್ಲಕ್ಷ್ಯ ವಿವಿಧ ಬೇಡಿಕೆಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ (Saligrama :  Massive protest against negilegence of high way maintaince)

ಸಾಲಿಗ್ರಾಮ: ಹೆದ್ದಾರಿ ನಿರ್ವಹಣೆ ನಿರ್ಲಕ್ಷ್ಯ ವಿವಿಧ ಬೇಡಿಕೆಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

  (Saligrama) ಸಾಲಿಗ್ರಾಮ : ಕುಂದಾಪುರದಿಂದ ಹೆಜಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಅಸರ್ಮಕ ನಿರ್ವಹಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಗುರುವಾರ ಸಾಲಿಗ್ರಾಮ ಚಿತ್ರಪಾಡಿ ಮಾರಿಗುಡಿ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಪ್ರತಿಭಟಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಕಳೆದ ಸಾಕಷ್ಟು ವರ್ಷಗಳಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿ ಸೇರಿದಂತೆ ಹೆದ್ದಾರಿ ಅಸರ್ಪಕ ಕಾಮಗಾರಿಯ ವಿರುದ್ಧ ಪ್ರತಿಭಟಿಸುತ್ತಾ ಬಂದಿದ್ದೇವೆ. ಆದರೆ ಈ ಹಿಂದೆ ಇದ್ದ ನವಯುಗ ಕಂಪನಿ ಸ್ಪಂದಿಸಿ, ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಕೂಡಾ ಮಾಡಿದೆ. ಆದರೆ ಇತ್ತೀಚೆಗೆ  ಹೆದ್ದಾರಿ ನಿರ್ವಹಣೆ ಗುತ್ತಿಗೆ ಪಡೆದ ಕೆ. ಕೆ ಆರ್ ಕಂಪನಿ ರಸ್ತೆ ನಿರ್ವಣೆಯಲ್ಲಿ ಎಡವಿದೆ. ಅಲ್ಲದೆ ಉಡಾಫೆ ಉತ್ತರ ನೀಡುತ್ತಿದೆ.

 ಹೆದ್ದಾರಿ ಸಮರ್ಪಕ ಇಲ್ಲದೆ, ಸಾಕಷ್ಟು ಸಾವುನೋವು ಸಂಭವಿಸುತ್ತಿದೆ. ಸಮರ್ಪಕ ದಾರಿ ದೀಪಗಳು, ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ಸಾಕಷ್ಟು ಸಮಸ್ಯೆಗಳಿದ್ದರೂ ನಿರ್ಲಕ್ಷ ಧೋರಣೆಯನ್ನು ಹೆದ್ದಾರಿ ಗುತ್ತಿಗೆದಾರ ಅನುಸರಿಸುತ್ತಿದ್ದಾರೆ. ಇದೇ ಧೋರಣೆ ಅನುಸರಿಸಿದರೆ ಟೋಲ್‌ಗೆ ಸಂಚಕಾರ ತಂದೊಡ್ಡಲಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಡಿದ್ದಾರೆ.

  ರಸ್ತೆ ಅವ್ಯವಸ್ಥೆ ಗೊತ್ತಿದ್ದರೂ ಉಡುಪಿ ಜಿಲ್ಲಾಧಿಕಾರಿ ಕೈಕಟ್ಟಿ ಕುಳಿತಿದ್ದಾರೆ. ಜಿಲ್ಲೆಯ ಜನ ಸಾಮಾನ್ಯರ ಸಮಸ್ಯೆಯ ಬಗ್ಗೆ ನ್ಯಾಯ ಕೊಡಿಸಬೇಕಾದ ಅಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಉತ್ತರಿಸುವವರು ಯಾರು ಎಂದು ದಿನೇಶ್ ಗಾಣಿಗ ಉಡುಪಿ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಕೆ.ಕೆ ಆರ್ ಕಂಪನಿ, ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರ  ಶವ ಅಣಕು ಪ್ರದರ್ಶನ

ಪ್ರತಿಭಟನಾ ಸಭೆಯಲ್ಲಿ ಹೆದ್ದಾರಿ ನಿರ್ವಹಣೆಗೈಯುವ ಕೆ.ಕೆ ಆರ್ ಕಂಪನಿ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಅಣಕು ಶವಗಳನ್ನು ಇರಿಸಿ ಶವದಹನ ನಡೆಸಲಾಯಿತು.  

 ಒಂದು ತಿಂಗಳ ಗಡುವು

ರಸ್ತೆ ಹೊಂಡಗುಂಡಿಗಳಿಗೆ ಮುಕ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟ ಟೋಲ್ ನೀಡದೆ  ಸಂಚರಿಸುವ ಪ್ರತಿಭಟನೆಯಾಗಲಿದೆ ಎಂದು ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಎಚ್ಚರಿಸಿದರು.

 ಮರಣ ಡೋಲು ಬಾರಿಸಿ ಪ್ರತಿಭಟನೆ

ಪ್ರತಿಭಟನಾ ಸಭೆಯಲ್ಲಿ ವಿಶಿಷ್ಟತೆಯ ಭಾಗವಾಗಿ ಮರಣ ಡೋಲು ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ್ ನಾಯರಿ  ತಮ್ಮ ಬೇಡಿಕೆಯ ಪತ್ರವನ್ನು ಬ್ರಹ್ಮಾವರದ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆಯವರಿಗೆ ಹಸ್ತಾಂತರಿಸಿದರು.

 ಕೆ.ಕೆ ಆರ್ ಕಂಪನಿಯ ಉಸ್ತುವಾರಿ ತಿಮ್ಮಯ್ಯ , ಬ್ರಹ್ಮಾವರ ಸರ್ಕಲ್ ದಿವಾಕರ್, ಠಾಣಾಧಿಕಾರಿ ತೇಜಸ್ವಿ, ಕೋಟ ಠಾಣಾಧಿಕಾರಿ ರಾಘವೇಂದ್ರ ಮತ್ತಿತರರ ಅಧಿಕಾರಿಗಳು ಉಪಸ್ಥಿತರದ್ದರು.

ಹೆದ್ದಾರಿ ಜಾಗೃತಿ  ಸಮಿತಿಯ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಪ್ರಮುಖರಾದ ಐರೋಡಿ ವಿಠ್ಠಲ ಪೂಜಾರಿ, ಪ್ರಶಾಂತ್ ಶೆಟ್ಟಿ, ಜಯಕರ್ನಾಟಕ ಸತೀಶ್ ಪೂಜಾರಿ, ರಾಜೇಶ್ ಕಾವೇರಿ, ಭೋಜ ಪೂಜಾರಿ, ಋಶಿರಾಜ್ ಸಾಸ್ತಾನ, ಚಂದ್ರಶೇಖರ್ ಮೆಂಡನ್, ನಾಗರಾಜ್ ಗಾಣಿಗ, ರಾಜೇಂದ್ರ ಸುವರ್ಣ, ಮಹಾಬಲ ಪೂಜಾರಿ, ರಾಜೇಶ್ ಸಾಸ್ತಾನ, ಅಚ್ಯುತ ಪೂಜಾರಿ, ಸುಲತಾ ಹೆಗ್ಡೆ, ಗಣೇಶ್ ಪೂಜಾರಿ, ಲೀಲಾವತಿ ಗಂಗಾಧರ್, ಫಾದರ್ ರೆವರೆಂಡ್ ಡಿಸಿಲ್ವ,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು

 ಮಾಜಿ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ  ಸಭೆಯನ್ನು ನಿರ್ವಹಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2