# Tags
#ಸಂಘ, ಸಂಸ್ಥೆಗಳು

ಹದಿನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘದ ಮಹಾಸಭೆ (Annual General Body meeting of Hadinalku patna Mogveera Mahajana sangha)

ಹದಿನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘದ ಮಹಾಸಭೆ

 ಪ್ರತಿಭಾ ಪುರಸ್ಕಾರ, ಗುರಿಕಾರರಿಗೆ ಗೌರವಧನ ವಿತರಣೆ

(Udyawara) ಉದ್ಯಾವರ : ಹದಿನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘ ಪಿತ್ರೋಡಿ ಉದ್ಯಾವರ ಇದರ ಮಹಾಸಭೆ, ದಿ. ಯು. ಸದಿಯ ಸಾಹುಕಾರರ ಸ್ಮರಣಾರ್ಥ 14 ಗ್ರಾಮ ಸಭೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗುರಿಕಾರರಿಗೆ ಗೌರವಧನ ವಿತರಣೆ ಕಾರ್ಯಕ್ರಮ ಭಾನುವಾರ ಹದಿನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘದ ಸಭಾಂಗಣದಲ್ಲಿ ಜರಗಿತು.

 ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.

 ಈ ಸಂದರ್ಭದಲ್ಲಿ ಹದಿನಾಲ್ಕು ಪಟ್ಣ ಮೋಗವೀರ ಮಹಾಜನ ಸಂಘದ ಅಧ್ಯಕ್ಷರಾದ ಕೇಶವ ಎಂ. ಕೋಟ್ಯಾನ್, ಸಾಹುಕಾರ್ ಕ್ಯಾನಿಂಗ್ ಕಂ. ಮಾಲಕರಾದ ಯು. ಗಣೇಶ್, ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಅಶೋಕ್, ಗುರಿಕಾರರಾದ ಸದಾರಾಮ್ ಮೆಂಡನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2