# Tags
#ಅಪರಾಧ

ಹನಿಟ್ರ್ಯಾಪ್‌ ಪ್ರಕರಣ : ಉಚ್ಚಿಲದ ಯುವಕ, ಎರ್ಮಾಳಿನ  ಮಹಿಳೆ ಸಹಿತ ನಾಲ್ವರು ಸಿಸಿಬಿ ಪೊಲೀಸ್ ವಶಕ್ಕೆ(Honeytrap case : Youth of Uchila along with woman of yermal, Four arrested by CCB Police)

ಹನಿಟ್ರ್ಯಾಪ್‌ ಪ್ರಕರಣ : ಉಚ್ಚಿಲದ ಯುವಕ, ಎರ್ಮಾಳಿನ  ಮಹಿಳೆ ಸಹಿತ ನಾಲ್ವರು ಸಿಸಿಬಿ ಪೊಲೀಸ್ ವಶಕ್ಕೆ

(Padubidri) ಪಡುಬಿದ್ರಿ : ಬೆಂಗಳೂರಿನಲ್ಲಿ ನಡೆದ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿ ಉಚ್ಚಿಲ ಸುಭಾಷ್ ರಸ್ತೆಯ ಅಭಿಷೇಕ್ ಮತ್ತು ಎರ್ಮಾಳಿನ ತಬಸ್ಸುಂ ಬೇಗಂರವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು  ಪಡುಬಿದ್ರಿ ಪೊಲೀಸರ ಸಹಾಯದಿಂದ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಖಾಸಗಿ ವಿಡಿಯೋ ಇದೆ ಎಂದು ಬೆಂಗಳೂರಿನಲ್ಲಿ ಪ್ರೊಫೆಸರ್ ಒಬ್ಬರಿಗೆ ಬ್ಲಾಕ್ ಮೇಲ್ ಮಾಡಿ 2.5 ಕೋಟಿ ರೂ. ಹಣ ಪಡೆದ ಎರ್ಮಾಳು ಗ್ರಾಮದ ತಬಸ್ಸುಂ ಬೇಗಂ, ಉಚ್ಚಿಲ ಸುಭಾಷ್ ರಸ್ತೆಯ ಅಭಿಷೇಕ್, ಬೆಂಗಳೂರಿನ ಅಜೀಮ್ ಮತ್ತು ಆನಂದ್‌ ಎಂಬ ನಾಲ್ವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ.

  ಬೆಂಗಳೂರಿನ ಆರ್ ಟಿ ನಗರದ ಜಿಮ್‌ಗೆ ಬರುತ್ತಿದ್ದ 48 ವರ್ಷದ ಪ್ರೊಫೆಸರ್‌ರವರನ್ನು ಗಾಳಕ್ಕೆ ಹಾಕಿಕೊಂಡ ತಂಡ, ಅವರಿಗೆ ವಾಟ್ಸಾಪ್‌ ಮೂಲಕ ಅಶ್ಲೀಲ ಫೊಟೋ ಕಳುಹಿಸಿ, ಅವರಿಂದ 2021ರಿಂದ ನಿರಂತರವಾಗಿ ಈಗಾಗಲೇ 2.5 ಕೋಟಿ ರೂಪಾಯಿ ಹಣವನ್ನು  ವಸೂಲಾತಿ ಮಾಡಿದ್ದರು.

ಇವರ ಟಾರ್ಚರ್‌ ತಡೆಯಲಾಗದೆ ಪ್ರೊಫೆಸರ್ ಬೆಂಗಳೂರು ಸಿಸಿಬಿಗೆ ದೂರು ನೀಡಿದ್ದರು. ಪ್ರೊಫೆಸರ್ ನೀಡಿದ ದೂರಿನನ್ವಯ ಈ ನಾಲ್ವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2