# Tags
#social service

ಹೆಜಮಾಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಆಯೋಜನೆಯ ಟೈಲರಿಂಗ್ ಶಿಬಿರದ ಸಮಾರೋಪ (Sri Kshethra Dharmasthala Gramabhivruddi Yojane, Hejamadi Tailoring Camp Closing  Ceremony)

ಹೆಜಮಾಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಆಯೋಜನೆಯ ಟೈಲರಿಂಗ್ ಶಿಬಿರದ ಸಮಾರೋಪ

(Hejamady)ಹೆಜಮಾಡಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ಕಾಪು ತಾಲೂಕು ಜ್ಞಾನವಿಕಾಸ ಕೇಂದ್ರದ ಅಧೀನದಲ್ಲಿ ಹೆಜಮಾಡಿಯ ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ನಡೆದ ಟೈಲರಿಂಗ್ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಮಟ್ಟು ಮೊಗವೀರ ಸಭಾಧ್ಯಕ್ಷೆ  ಶ್ರೀಮತಿ ನೂತನ್ ಪುತ್ರನ್ ಉದ್ಘಾಟಿಸಿದರು.

ಅವರು ಮಾತನಾಡಿ, ಮಹಿಳಾ ಜ್ಞಾನವಿಕಾಸ ಕೇಂದ್ರದ ಆಯೋಜನೆಯಲ್ಲಿ ಮೂರು ತಿಂಗಳ ಕಾಲ  ಉಚಿತವಾಗಿ ಜರಗಿದ ಹೊಲಿಗೆ ತರಬೇತಿಯನ್ನು ಕಲ್ಪಿಸಿಕೊಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಗೆ ಅಭಿಂದಿಸಿದರು.

 ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್ ಹೇಜಮಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

 ಕಾರ್ಯಕ್ರಮದಲ್ಲಿ ಟೈಲರಿಂಗ್ ಶಿಕ್ಷಕಿ ಶ್ರೀಮತಿ  ಚಂದ್ರಿಕಾ, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಮೋಹನ್ ಸುವರ್ಣ, ವಲಯದ ಮೇಲ್ವಿಚಾರಕಿ ಶ್ರೀಮತಿ ಸರಿತಾ, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪವಿತ್ರಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ತಾರಾ,  ಟೈಲರಿಂಗ್ ತರಬೇತಿ ಪಡೆದ  30 ಜನ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2