ಹೆಜಮಾಡಿ: ವಿಷದ ಹಾವು ಕಚ್ಚಿ ಕೃಷಿಕ ಜಯಕರ ಬಂಗೇರ ಸಾವು (Hejamadi : Death of farmer Jayakara Bangera after being bitten by a poisonous snake)
ಹೆಜಮಾಡಿ: ವಿಷದ ಹಾವು ಕಚ್ಚಿ ಕೃಷಿಕ ಜಯಕರ ಬಂಗೇರ ಸಾವು
(Hejamady) ಹೆಜಮಾಡಿ : ನ. 21: ಹೆಜಮಾಡಿ ಗ್ರಾಮದ ಎಸ್‌ಎಸ್ ರಸ್ತೆ ನಿವಾಸಿ, ಕೃಷಿಕ ಜಯಕರ ಬಂಗೇರ (66) ಅವರು ಬುಧವಾರ ಸಂಜೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಯಾವುದೋ ವಿಷದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.
ಜಯಕರ ಬಂಗೇರ ಅವರನ್ನು ಚಿಕಿತ್ಸೆಗಾಗಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.