ಹೆಬ್ರಿ : ಅಪರಿಚಿತ ಶವದ ಗುರುತು ಪತ್ತೆ (Hebri : Identification of an unknown dead body)
ಹೆಬ್ರಿ : ಅಪರಿಚಿತ ಶವದ ಗುರುತು ಪತ್ತೆ
ಹೆಬ್ರಿ, ಡಿ. 2 : ಹೆಬ್ರಿ ಕೆಳಪೇಟೆ ಮೂರು ರಸ್ತೆ ಬಳಿ ಭೋಗಿ ಹಾಡಿಯಲ್ಲಿರುವ ಕಸದ ರಾಶಿಯಲ್ಲಿ ನ. 30 ರಂದು ಕೊಳೆತ ಸ್ಥಿತಿಯಲ್ಲಿ ಕಾಣಿಸಿಕೊಂಡ ಅಪರಿಚಿತ ಶವದ ಗುರುತು ಪತ್ತೆಯಾಗಿದೆ.
ಮೂಲತ ಹೆಬ್ರಿ ಸಂತೆಕಟ್ಟೆ ನಿವಾಸಿ ರಾಜೀವ ಪಾಣರ (54) ಗುರುತಿಸಲಾಗಿದೆ.
ಬೆಳಂಜೆಯ ಬಾಡಿಗೆ ಮನೆ ಒಂದರಲ್ಲಿ ವಾಸವಿರುವ ವಿಪರೀತ ಮಧ್ಯಪಾನ ಚಟ ಹೊಂದಿದ್ದರು ಎನ್ನಲಾಗುತ್ತಿದೆ.
ಅವರು ಮನೆ ಕಡೆ ಹೋಗದೆ ಬಸ್ ತಂಗುದಾಣದ ಬಳಿ ಇರುತ್ತಿದ್ದರು ಎನ್ನಲಾಗುತ್ತಿದೆ. ಮೂರು ದಿನಗಳ ಹಿಂದೆ ಭೋಗಿ ಹಾಡಿಯ ಮರದ ಬಳಿ ಕೂತಿದ್ದ ವ್ಯಕ್ತಿಯನ್ನು ಈ ಭಾಗದಲ್ಲಿ ಸಂಚರಿಸುತ್ತಿದ್ದ ಶಾಲಾ ವಿದ್ಯಾರ್ಥಿಗಳು ನೋಡಿದ್ದಾರೆ ಎನ್ನಲಾಗುತ್ತಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿದ್ದಾರೋ ಎಂದು ತನಿಖೆಯಿಂದ ತಿಳಿಯಬೇಕಾಗಿದೆ.