# Tags
#ಅಪಘಾತ

ಹೆಬ್ರಿ, ಬೆಳ್ಳೆ ; ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು (Hebri, Belle : Two boys who had gonefor a swim fell in to the water)

ಹೆಬ್ರಿ, ಬೆಳ್ಳೆ ; ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

(Hebri) ಹೆಬ್ರಿ: ಹೆಬ್ರಿ ತಾಲೂಕಿನ ಗೋಳಿಯಂಗಡಿ ಸಮೀಪ ಬೆಳ್ಳೆ ಗ್ರಾಮದ ಗುಮ್ಮಹೊಲ ಎಂಬಲ್ಲಿ ಭಾನುವಾರ ಮಧ್ಯಾಹ್ನ ಸ್ನಾನಕ್ಕೆಂದು ನೀರಿಗಿಳಿದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ.

ಗುಮ್ಮೋಲ ಹರ್ಗಗುಂಡಿ ರಾಮ ನಾಯ್ಕ ಅವರ ಪುತ್ರ ಜಯಂತ್ ನಾಯ್ಕ (19) ಹಾಗೂ ಗೋಳಿಯಂಗಡಿ ಶ್ರೀದುರ್ಗಾ ಜುವೆಲ್ಲ‌ರ್ಸ್ ಮಾಲೀಕ ಶ್ರೀಧರ ಆಚಾರ್ಯ ಅವರ ಪುತ್ರ ಶ್ರೀಶ ಆಚಾರ್ಯ (14) ಮೃತಪಟ್ಟ ದುರ್ದೈವಿಗಳು.

 ಮಧ್ಯಾಹ್ನ 1 ಗಂಟೆ ಸುಮಾರಿಗೆ ಗುಮ್ಮೋಲ ಸಮೀಪದ ಸೀತಾನದಿ ಒಳ್ಳೆಹೊಂಡ ಕಿಂಡಿ ಅಣೆಕಟ್ಟಿನ ಬಳಿ ಸ್ನಾನಕ್ಕೆಂದು ತೆರಳಿದ್ದರು. ಶ್ರೀಶ ಆಚಾರ್ಯ ಕಲ್ಲಿನ ಮೇಲಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮುಳುಗುವುದನ್ನು ಗಮನಿಸಿದ ಜಯಂತ್ ನಾಯ್ಕ ಆತನನ್ನು ರಕ್ಷಿಸಲು ಮುಂದಾಗಿ ನೀರಿಗೆ ಧುಮುಕಿದ್ದಾನೆ.

 ಹೊಳೆಯ ದಡದಲ್ಲಿದ್ದ ಇಬ್ಬರು ಬಾಲಕರು ಸ್ಥಳದಿಂದ ಓಡಿ ಹೋಗಿ ಸಮೀಪದ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳೀಯರು ಕೂಡಲೆ ಸ್ಥಳಕ್ಕೆ ಧಾವಿಸಿದ್ದು, ನಾಗರಾಜ ನಾಯ್ಕ ಅಲ್ವಾಡಿ ಹಾಗೂ ಚೋಣ ಎಂಬವರು ನೀರಿಗಿಳಿದು ನೀರಿನಲ್ಲಿ ಮುಳುಗಿದ ಇಬ್ಬರನ್ನೂ ಮೇಲಕ್ಕೆ ಎತ್ತಿ ತಂದು ಪ್ರಾಣ ರಕ್ಷಿಸಲು ಪ್ರಯತ್ನಿಸಿದರು. ಅಷ್ಟರಲ್ಲಿಯೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು.

 ಮೃತ ಜಯಂತ್ ನಾಯ್ಕ ಗುಮ್ಮೋಲ ಯಕ್ಷಗಾನ ಕಲಾವಿದರಾಗಿದ್ದು, ಈ ವರ್ಷ ಯಕ್ಷಗಾನ ಮೇಳಕ್ಕೆ ಹೋಗದೇ ಊರಿನಲ್ಲಿ ಕೆಲಸ ಮಾಡಿಕೊಂಡಿದ್ದರು.

 ಶ್ರೀಶ ಆಚಾರ್ಯ ಬೆಳ್ವೆ ಹೆಬ್ರಿ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸರಳ ಸ್ವಾಭಾವದ ಈತ ಪರಿಸರದ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ.

 ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಡಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿದ್ದು ಮೃತ ಮಕ್ಕಳ ಕಟುಂಬಕ್ಕೆ ಸಾಂತ್ವನ ಹೇಳಿದರು.

ಮೃತರಾದ ಶ್ರೀಶ ಆಚಾರ್ಯ ಮತ್ತು ಜಯಂತ ನಾಯ್ಕರವರು ಸ್ಥಳೀಯ ಭಜನಾ ಮಂಡಳಿಯ  ತಂಡದಲ್ಲಿ ಸ್ನೇಹಿತರಾಗಿದ್ದರು. ಮೃತ ಜಯಂತ್ ನಾಯ್ಕಗೆ ತಂದೆ, ತಾಯಿ, ತಂಗಿ ಇದ್ದಾರೆ. ಶ್ರೀಶ ಆಚಾರ್ಯನಿಗೆ  ತಂದೆ, ತಾಯಿ, ಅಕ್ಕ ಇದ್ದಾರೆ.

  ಶಂಕರನಾರಾಯಣ ಠಾಣೆಯ ಉಪನಿರೀಕ್ಷಕ  ನಾಸೀರ್ ಹುಸೇನ್, ಎಸ್ಐ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಘಟನಾ ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಇಬ್ಬರ ಮಹಜರು ನಡೆಸಿದರು. ‌

ಬೆಳ್ಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2