# Tags
#fastival #ಜೀವನಶೈಲಿ

30 ನೇ ವರ್ಷದ “ಆಳ್ವಾಸ್ ವಿರಾಸತ್‌”ಗೆ ಅದ್ಧೂರಿಯ ಚಾಲನೆ (A grand drive for the 30th “Alvas Virasath”)   

30 ನೇ ವರ್ಷದಆಳ್ವಾಸ್ ವಿರಾಸತ್‌”ಗೆ ಅದ್ಧೂರಿಯ ಚಾಲನೆ  

ವಿಶ್ವವನ್ನೇ ಹೃದಯದಲ್ಲಿ ತುಂಬುವ “ವಿರಾಸತ್” : ಹೆಗ್ಗಡೆ

(Moodabidri, Vidyagiri) ವಿದ್ಯಾಗಿರಿ (ಮೂಡುಬಿದಿರೆ): ವಿಶ್ವವನ್ನೇ ಹೃದಯದಲ್ಲಿ ತುಂಬುವ ಹಬ್ಬವೇ “ವಿರಾಸತ್” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಡಿ.೧೧ ರಿಂದ ಡಿ. ೧೫ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ “೩೦ನೇ ವರ್ಷದ ಆಳ್ವಾಸ್ ವಿರಾಸತ್” ಅನ್ನು ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

 ಮುಸ್ಸಂಜೆಯಲ್ಲಿ ಪ್ರಕೃತಿ ರಮಣೀಯ ವಿಶಾಲ ಸಭಾಂಗಣದಲ್ಲಿ ತುಂಬಿದ  ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಸಾಹಿತ್ಯ ಮತ್ತು ಸಂಸ್ಕೃತಿ ಜೊತೆಯಾಗಿ ಮೇಳೈಸಿದ ಕಾರ್ಯಕ್ರಮ. ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಎಲ್ಲರಿಗೂ ಸಂತೋಷ ನೀಡುವ ವ್ಯಕ್ತಿತ್ವವೇ ಆಳ್ವ ಎಂದು ಬಣ್ಣಿಸಿದರು.

 ಒಳ್ಳೆಯದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ. ಆ ಹಾದಿಯಲ್ಲಿ ಸಮಾಜ, ದೇಶ ಬೆಳೆಯಬೇಕು. ನಾವೂ ಪ್ರಕೃತಿಯನ್ನು, ಹೃದಯವನ್ನು ಅರಳಿಸಬೇಕು ಎಂದರು.

ಆಳ್ವಾಸ್ ಕೃಷಿ ಮೇಳ ಕಂಡು ನೀವೂ ಸಣ್ಣಕೈತೋಟ ಮಾಡಿ. ಮಣ್ಣು, ಪರಿಸರ ಪ್ರೀತಿಸಿ ಎಂದು ಸಲಹೆ ನೀಡಿದರು.

  ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ.ಜಿ.ಆರ್. ಗ್ರೂಪ್‌ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಆಳ್ವರ ದೃಷ್ಟಿಯೇ ಕ್ರಿಯೆಯಾಗಿ ಇಲ್ಲಿ ರೂಪುಗೊಂಡಿದೆ ಎಂದರು.

ನಾನು ಅವರನ್ನು ನಾಲ್ಕು ದಶಕಗಳಿಂದ ಕಂಡಿದ್ದೇನೆ. ಅವರ ಪ್ರಯೋಗ ಇಂದು ನಾಡಿಗೆ ಕೊಡುಗೆ ನೀಡಿದೆ.   ಆಳ್ವಾಸ್ ಆವರಣವು ಚಂದಮಾಮದ ಅಮರಾವತಿ ಹಾಗೂ ಇಂದ್ರ ನಗರಿಯನ್ನು ನೆನಪಿಸುತ್ತದೆ. ಹೊಸ ಲೋಕವೇ ಇಲ್ಲಿ ಸೃಷ್ಟಿಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಅಂದು ಊರಿಗೆ ಸೀಮಿತವಾಗಿದ್ದ ವಿರಾಸತ್‌ ಇಂದು ರಾಷ್ಟ್ರೀಯ ಹಬ್ಬವಾಗಿದೆ. ಇಂದು ದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 52 ಕೋಟಿ ಇದೆ. ಯುವ ಸಂಪತ್ತು ಬಗ್ಗೆ ನಾವು ಯೋಚಿಸಬೇಕು ಎಂದರು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಕ್ರೀಡೆ, ಸಾಂಸ್ಕೃತಿಕ ತರಬೇತಿ ನೀಡುತ್ತಿದ್ದೇವೆ. ಮಂಗಳೂರು ವಿಶ್ವವಿದ್ಯಾನಿಲಯದ 49 ಅಥ್ಲೆಟಿಕ್‌ ದಾಖಲೆ ಆಳ್ವಾಸ್ ಹೆಸರಿನಲ್ಲಿದೆ ಎಂದು ಸಂತಸ ಹಂಚಿಕೊಂಡರು.

ನಮ್ಮ ಸಂಸ್ಥೆಯಲ್ಲಿ ಪ್ರತಿವರ್ಷ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಸ್ಕೃತಿಕ ತರಬೇತಿ ಪಡೆದು, ರಾಷ್ಟ್ರೀಯ ಮಟ್ಟದಲ್ಲಿಕಾರ್ಯಕ್ರಮ ನೀಡುತ್ತಿದ್ದಾರೆ.   

ವಿರಾಸತ್‌ ಅನ್ನು ಸಮಗ್ರವಾಗಿ ರೂಪಿಸಲಾಗಿದ್ದು, ಪಂಚೇಂದ್ರಿಯಗಳಿಗೆ ಜ್ಞಾನ ನೀಡುವ ಕಾರ್ಯಕ್ರಮವಾಗಿದೆ. ಯುವಕರು, ಹಿರಿಯರು, ವೃದ್ಧರೆಲ್ಲರಿಗೂ ವಿರಾಸತ್ ಮುದ ನೀಡಲಿದೆ ಎಂದರು.

ಆರಂಭದಲ್ಲಿ ಗಿರಿಧರ್‌ ಅವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಮೂಡಿದ‘ಬೆಳಕಾಗಿ ಬಾ’ಹಾಗೂ ಡಾ.ಎನ್.ಕೆ. ಪದ್ಮನಾಭ ವಿರಚಿತ‘ಪರಹಿತಬಯಸೋ’ಪ್ರಾರ್ಥನೆಯನ್ನು ಹಾಡಲಾಯಿತು.

ಆಳ್ವಾಸ್ ವಿರಾಸತ್ 30ನೇ ವರ್ಷದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಹೊರತಂದಿರುವ‘ಆಳ್ವಾಸ್‌ಸಾAಸ್ಕೃತಿಕ ವೈಭವ’ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ, ದಂಪತಿ, ಮಂಗಳೂರು ಪೊಲೀಸ್‌ಆಯುಕ್ತ ಅನುಪಮ್‌ ಅಗರವಾಲ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್‌ ಗೈಡ್ಸ್‌ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆನುವಂಶಿಕ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ, ಶಾರದಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಎಂ.ಬಿ. ಪುರಾಣಿಕ, ಬರೋಡ ಶಶಿ ಕೇಟರಿಂಗ್ ಸರ್ವೀಸಸ್ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ, ಬೆಂಗಳೂರು ಕೆ.ಎಲ್.ಎನ್. ಎಂಜಿನಿಯರಿAಗ್ ಆಡಳಿತ ನಿರ್ದೇಶಕ ಪ್ರಸನ್ನಕುಮಾರ್ ಶೆಟ್ಟಿ, ಬಳ್ಳಾರಿ ಕುಮಾರಸ್ವಾಮಿ ಮಿನರಲ್‌ಎಕ್ಸ್ ಪೋರ್ಟ್‌ನ  ಎಂ. ರವೀಂದ್ರನಾಥ ಆಳ್ವ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕಲ್ಕೂರ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು. ರಾಧಾ, ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯೂಸ್ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಕೆನರಾ ಬ್ಯಾಂಕಿನ ಸುಧಾಕರ್‌ ಕೊಠಾರಿ, ಪ್ರಮುಖವಾದ ಜಯಶ್ರೀ ಅಮರನಾಥ ಶೆಟ್ಟಿ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ತಿಮ್ಮಯ್ಯ ಶೆಟ್ಟಿ, ರಾಮಯ್ಯ ಶೆಟ್ಟಿ, ಪತ್ರಕರ್ತ ಶ್ರೀನಿವಾಸ ಇಂದಾಜೆ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಮಂಗಳೂರು ಭಾರತ್‌ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್.ಎಂ, ಮೂಡುಬಿದಿರೆ ಬಿಮಲ್‌ ಕನ್‌ಸ್ಟ್ರಕ್ಷನ್ ನ ಪ್ರವೀಣ್‌ಕುಮಾರ್ ಉಪಸ್ಥಿತರಿದ್ದರು..     

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೇಳಗಳು:

ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರು ಗುತ್ತುಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾ ಮೇಳಗಳೂ ಮಂಗಳವಾರ ಬೆಳಿಗ್ಗೆ ಉದ್ಘಾಟನೆಗೊಂಡಿದ್ದು, ಡಿ.15ರ ವರೆಗೆ ನಡೆಯಲಿವೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2