# Tags

ಅದಮಾರು ಪಿಪಿಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವ (Adamaru PPC English Medium High Scchool Anniversary)  

ಅದಮಾರು ಪಿಪಿಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವ   (Adamaru) ಅದಮಾರು:  ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಗುರುವಾರ ನೆರವೇರಿತು.   ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿದರು. ಅವರು ತಮ್ಮ ಆಶೀರ್ವಚನದಲ್ಲಿ, ಆಂಗ್ಲ ಮಾಧ್ಯಮವಾದರೂ ಭಾರತೀಯ ಸಂಸ್ಕೃತಿಯನ್ನು ಬಿಡಬಾರದು. ಮಕ್ಕಳ ಜೊತೆ ಹೆತ್ತವರು ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಅವರನ್ನು ಒಂಟಿಯಾಗಿ ಬಿಡಬಾರದು. ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ನಾವು ಒತ್ತು ನೀಡಬೇಕು. ಮೊಬೈಲ್ […]

ಮಣಿಪಾಲ: ಬಿಯರ್ ಬಾಟಲಿಯಿಂದ ಹೊಡೆದು ಹೊಟೇಲ್ ಕಾರ್ಮಿಕನ ಹತ್ಯೆ (Murder at Manipala Anantha kalyana Road)

ಮಣಿಪಾಲ: ಬಿಯರ್ ಬಾಟಲಿಯಿಂದ ಹೊಡೆದು ಹೊಟೇಲ್ ಕಾರ್ಮಿಕನ ಹತ್ಯೆ (Manipala) ಮಣಿಪಾಲ: ಮಣಿಪಾಲದ ಮುಖ್ಯರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆಗೈದ ಘಟನೆ ಇಂದು ಬೆಳಿಗ್ಗೆ ನಡೆದಿದೆ.  ಹತ್ಯೆಯಾದ ವ್ಯಕ್ತಿ ಹೊನ್ನಾವರದ ಕಾಸಕೋಡು ನಿವಾಸಿ ಶ್ರೀಧರ ನಾಯಕ ಎಂದು ಗುರುತಿಸಲಾಗಿದೆ. ಈತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರಲ್ಲಿ ಕುಕ್ ಎಂದು ಪೊಲೀಸರು ತಿಳಿಸಿದ್ದಾರೆ.  ಮೂರರಿಂದ ನಾಲ್ಕು ಜನರಿದ್ದ ತಂಡ ಬೆಳಿಗ್ಗೆ ಆರರ ಸುಮಾರಿಗೆ ಹೊಡೆದಾಟ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಯಾವುದೋ […]

ಇನ್ನಾದಲ್ಲಿ ಅದಾನಿ ವಿದ್ಯುತ್ ಟವರ್ ವಿರುದ್ಧ ಅಹೋರಾತ್ರಿ ಧರಣಿ

ಇನ್ನಾದಲ್ಲಿ ಅದಾನಿ ವಿದ್ಯುತ್ ಟವರ್ ನಿರ್ಮಾಣದ ವಿರುದ್ದ ಅಹೋರಾತ್ರಿ ಧರಣಿ ಪ್ರಾರಂಭ ಇನ್ನಾ :ಇನ್ನಾ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಎಲ್ಲೂರು ಅದಾನಿ ಪವರ್ ಪ್ರಾಜೆಕ್ಟ್ ವಿದ್ಯುತ್ ಟವರ್ ನಿರ್ಮಾಣ ಕಾಮಗಾರಿಯ ಮುನ್ಸೂಚನೆ ದೊರೆಯುತ್ತಿದ್ದಂತೆ ಗುರುವಾರ ಸಂಜೆಯಿಂದ ಬೃಹತ್ ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಟವರ್ ನಿರ್ಮಾಣ ವಿರೋದಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಗ್ರಾಮಸ್ಥರ ವಿರೋಧದ ನಡುವೆ ಕಾಮಗಾರಿ ಆರಂಭಿಸುವುದು ಖಂಡನೀಯ, […]

ಉಡುಪಿ : ಕಾರು ಪಲ್ಟಿ, ಹಿರಿಯ ನಾಗರಿಕರಿಗೆ ಗಾಯ (Udupi accident)

(Udupi)ಉಡುಪಿ: ಕಾರು ಪಲ್ಟಿಯಾಗಿ ಹಿರಿಯ ನಾಗರಿಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕಡಿಯಾಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಕೆ ಎ 19 ನೋಂದಣಿಯ ಸ್ವಿಫ್ಟ್ ಕಾರು ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿತ್ತು. ಕಡಿಯಾಳಿ ಬಳಿ ಅತೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ದಿಢೀರ್ ಬ್ರೇಕ್ ಹಾಕಿದ್ದರಿಂದ ಸ್ವಿಫ್ಟ್ ಕಾರು ಪಲ್ಟಿಯಾಗಿದೆ. ಈ ವೇಳೆ ರಸ್ತೆ ಬದಿ ತಮ್ಮ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ವೃದ್ದರಿಗೆ ಮತ್ತು ಮತ್ತೊಂದು ಕಾರಿಗೆ ಶಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ […]

ಮೂಳೂರು ನಾರಾಯಣ ಗುರು ಸಂಘದ ರುದ್ರಭೂಮಿಗೆ ಧರ್ಮಸ್ಥಳ ಯೋಜನೆಯಿಂದ ಸಹಕಾರ (Cooperation from Dharmasthala to Rudhrabhoomi of Mooluru Billawa Sangha)

  ಮೂಳೂರು ನಾರಾಯಣ ಗುರು ಸಂಘದ ರುದ್ರಭೂಮಿಗೆ ಧರ್ಮಸ್ಥಳ ಯೋಜನೆಯಿಂದ ಸಹಕಾರ  (Mooluru) ಮೂಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಹಿಂದೂ ರುದ್ರ ಭೂಮಿ ಅಭಿವೃದ್ಧಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆದೇಶದಂತೆ ಸಿಲಿಕಾನ್ ಚೇಂಬರ್ ನಿರ್ಮಾಣಕ್ಕಾಗಿ 1,52,000 ರೂ ಮಂಜೂರು ಮಾಡಲಾಗಿದೆ. ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ  ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಹಾಗೂ ತಾಲೂಕು […]

ಪಡುಬಿದ್ರಿ ಪಟ್ರಾಮ ಕೃಷ್ಣಾನಂದ ರಾವ್ ನಿಧನ (Padubidri Patrama Krishnananda Rap Passes away)

ಪಡುಬಿದ್ರಿ ಪಟ್ರಾಮ ಕೃಷ್ಣಾನಂದ ರಾವ್ ನಿಧನ   (Padubiddri) ಪಡುಬಿದ್ರಿ, ಡಿ. 5: ಬೇಂಗ್ರೆ ಮಧ್ವ ನಗರದ ನಿವಾಸಿ ಪಟ್ರಾಮ ಕೃಷ್ಣಾನಂದ ರಾವ್(72) ಹೃದಯಾಘಾತದಿಂದ ಡಿ. 5ರಂದು ನಿಧನ ಹೊಂದಿದರು.  ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೊಯಮತ್ತೂರಿನಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಅವರು, ಪಡುಬಿದ್ರಿಯಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದರು. ಕೃಷಿಕರಾಗಿ ಸಾವಯವ ಕೃಷಿಗೆ ಒತ್ತುಕೊಟ್ಟು, ಇಂದಿಗೂ ಬೇಸಾಯವನ್ನು ಮಾಡುತ್ತಿದ್ದರು.   ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್‌ನ ಟ್ರಸ್ಟಿಯಾಗಿ ಕೆಲ ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದ್ದರು. ಎಳೆವೆಯಿಂದಲೇ […]

 ಸುದ್ದಿಗಾಗಿ ಹಣದಿಂದ ಪತ್ರಿಕೋದ್ಯಮದ ಪಾವಿತ್ರ್ಯತೆಗೆ ಧಕ್ಕೆ : ಡಾ.ಮೋಹನ್ ಆಳ್ವ (Sancitity of journalism thtreatend by money for news :Dr. Mohan Alva)   

ಸುದ್ದಿಗಾಗಿ ಹಣದಿಂದ ಪತ್ರಿಕೋದ್ಯಮದ ಪಾವಿತ್ರ್ಯತೆಗೆ ಧಕ್ಕೆ : ಡಾ.ಮೋಹನ್ ಆಳ್ವ     ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5 ನೇ జిಲ್ಲಾ ಸಮ್ಮೇಳನ ಉದ್ಘಾಟನೆ: (Mangalore) ಮಂಗಳೂರು: ಸುದ್ದಿಗಾಗಿ ಹಣಸಂಸ್ಕೃತಿ  ಪತ್ರಿಕೋದ್ಯಮದ  ಪಾವಿತ್ರ್ಯತೆಗೆ ಧಕ್ಕೆ ತರುವ ಅಪಾಯ ಇದೆ. ಸತ್ಯ ಸಂಗತಿಗಳನ್ನು ಮರೆಮಾಚುವ ಮತ್ತು ಸುಳ್ಳನ್ನು ವೈಭವೀಕರಿಸುವ ಸ್ಥಿತಿ ಉಂಟಾಗಿದೆ ಎಂದು ಮೂಡಬಿದಿರೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ‌ ದಕ್ಷಿಣ ಕನ್ನಡ […]

ಉಡುಪಿ : ಮಂಗಳೂರು ಪೋಲಿಸ್ ಕಮೀಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೆ ಆಗ್ರಹಿಸಿ ಧರಣಿ

(Udupi)ಉಡುಪಿ ; ಮಂಗಳೂರು ಪೋಲಿಸ್ ಕಮೀಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೆ ಆಗ್ರಹಿಸಿ ಧರಣಿ(Udupi) ಉಡುಪಿ: ಜನ ವಿರೋಧಿ, ಸರ್ವಾಧಿಕಾರಿ ಧೋರಣೆಯ ಮಂಗಳೂರು ಪೋಲಿಸ್ ಕಮೀಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ ಸಿಪಿಐಎಂ, ದಲಿತ ಸಂಘರ್ಷ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಧರಣಿ ನಡೆಸಲಾಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಪಿಐಎಂ ಮುಖಂಡರ ಮೇಲೆ ಹಾಕಿರುವ ಕೇಸನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ […]

ಕಟಪಾಡಿ : ಅಪರಿಚಿತ ಗಂಡಸಿನ ಮೃತದೇಹ ಪತ್ತೆ (Un identified Dead body Found at Katapadi)

ಕಟಪಾಡಿ : ಅಪರಿಚಿತ ಗಂಡಸಿನ ಮೃತದೇಹ ಪತ್ತೆ (Katapadi) ಕಟಪಾಡಿ : ಕಾಪು ಠಾಣಾ ವ್ಯಾಪ್ತಿಯ ಏಣಗುಡ್ಡೆ ಗ್ರಾಮದ ಪಾಪನಾಶಿನಿ ಹೊಳೆಯಲ್ಲಿ ಓರ್ವ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.  ಫಾರೆಸ್ಟ್ ಗೇಟ್ ಹಿಗ್ಗಿನ್ ರೋಡ್ರಿಗಸ್ ರವರ ರಿವರ್ ವಿವ್ ಮನೆಯ ಅನತಿ ದೂರದಲ್ಲಿ ಪತ್ತೆಯಾಗಿದೆ.   ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ದೋಣಿಯ ಸಹಾಯದಿಂದ ಏಣಗುಡ್ಡೆಯ ನೇವಿ ಎನ್.ಸಿ.ಸಿ ಬೋಟ್ ಮೂಲಕ ಮೇಲೆ ತರಲಾಯಿತು.  ಸುಮಾರು 40 ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಇದಾಗಿದ್ದು,  […]

ಉಡುಪಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನಾ ಜಾಥಾ (Udupi : Massive protest march against against violence against Hinhus in Bhangladesh)

violence ಉಡುಪಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನಾ ಜಾಥಾ (Udupi) ಉಡುಪಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇಸ್ಕಾನ್‌ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದೂ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿಯಲ್ಲಿ ಬೃಹತ್‌ ಪ್ರತಿಭಟನಾ ಜಾಥಾ ನಡೆಯಿತು.   ಉಡುಪಿ ಜೋಡುಕಟ್ಟೆಯಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು.   ಅಲ್ಲಿಂದ ಆರಂಭಗೊಂಡ ಜಾಥವು ಸರ್ವಿಸ್‌, ಸಿಟಿ ಬಸ್‌ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಸಾಗಿಬಂದು ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ಸಮಾಪ್ತಿಗೊಂಡಿತು.  ಜಾಥಾದಲ್ಲಿ ಸಾವಿರಾರು […]