# Tags

 ಮಾಸ್ಟರ್ ಅಥ್ಲೆಟಿಕ್ ಪಟುಗೆ ಅಮೃತೇಶ್ವರಿ ದೇವಸ್ಥಾನದಲ್ಲಿ ಗೌರವ

 ಕೋಟ: ಮಲೇಷಿಯಾದಲ್ಲಿ  ನಡೆದ ಜೋಹಾರ್ ಸಿಂಗಾಪುರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೋಟದ ದಿನೇಶ್ ಗಾಣಿಗ ಒಂದು ಬೆಳ್ಳಿ, ಕಂಚಿನ ಪದಕ ವಿಜೇತರಾಗಿ ಹುಟ್ಟೂರಿಗೆ ಮರಳಿದ್ದಾರೆ. ಈ ಹಿನ್ನಲ್ಲೆಯಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನದ ವತಿಯಿಂದ ಸ್ವಾಗತಿಸಿ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಟ್ರಸ್ಟಿ ಚಂದ್ರ ಪೂಜಾರಿ, ಮಾಜಿ ಟ್ರಸ್ಟಿ ಚಂದ್ರ ಆಚಾರ್ಯ, ಪ್ರದಾನ ಅರ್ಚಕ ಪ್ರಕಾಶ್ ಜೋಗಿ, ಪಂಚವರ್ಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಕೋಟ ಹಿಂದು ಜಾಗರಣಾ ವೇದಿಕೆಯ ಮಾಜಿ ಅಧ್ಯಕ್ಷ ಸುರೇಶ್ ಸಮತಾ, […]

ಶೋಭಾ ಕರಂದ್ಲಾಜೆಯವರ ಹೇಳಿಕೆ ಕೀಳು ಮಟ್ಟದ್ದಾಗಿದೆ- ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ

ಉಡುಪಿ: ಭಾರತವನ್ನು ಅಸ್ಥಿರಗೊಳಿಸಲು ಬಯಸುತ್ತಿರುವ ವಿದೇಶಿ ಶಕ್ತಿಗಳು ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ಆರ್ಥಿಕ ನೆರವು ನೀಡುತ್ತಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಕೀಳು ಮಟ್ಟದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆಯವರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಬರುವ ವಿಚಾರವನ್ನು ಜನರ ಮುಂದೆ ಹೇಳಿಕೆಯಾಗಿ ನೀಡಬಾರದು. ಮೊದಲು ಕೂಲಂಕಷವಾಗಿ ಚರ್ಚೆ ಮಾಡಿ ನಂತರ ಹೇಳಿಕೆಯನ್ನು ಕೊಡಬೇಕು.    ಕೇಂದ್ರದ ಎಲ್ಲ ತನಿಖಾ ಸಂಸ್ಥೆಗಳು ಇವರ […]

ಪರಿಸರ ಉಳಿದರೆ ಮಾತ್ರ ಮನುಕುಲದ ಶ್ರೀರಕ್ಷೆ ಸಾಧ್ಯ- ಅಜಿತ್ ದೇವಾಡಿಗ

ಕೋಟ: ಪ್ರಕೃತಿ ಉಳಿದರೆ ಮಾತ್ರ ಮನುಕುಲ ಉಳಿಯಬಹುದು, ಆದರೆ ಅದೇ ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ ಎಸೆದರೆ ಮನುಕುಲದ ಶ್ರೀರಕ್ಷೆ ಹೇಗೆ ಸಾಧ್ಯ ಎಂದು ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಪ್ರಶ್ನಿಸಿದರು. ಕೋಟದ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ 166ನೇ ವಾರದ ಪರಿಸರಸ್ನೇಹಿ ಅಭಿಯಾನದ ಹಿನ್ನಲ್ಲೆಯಲ್ಲಿ ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್, ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್, […]

ಮಿಸೆಸ್ ಇಂಡಿಯಾ-2023: ಅಂತಿಮ ಸುತ್ತಿಗೆ ಆಯ್ಕೆಯಾದ ಉಡುಪಿಯ ದೀಪ್ತಿ ಹೆಗ್ಡೆ

ಕಾರ್ಕಳ – ಉಡುಪಿ:  2023ರ ಹೌಟ್ ಮೊಂಡೆ ಮಿಸಸ್ ಇಂಡಿಯಾ ಅಂತಿಮ ಸುತ್ತಿಗೆ ಉಡುಪಿ ನಿವಾಸಿ ಶ್ರೀಮತಿ ದೀಪ್ತಿ ಹೆಗ್ಡೆ ಆಯ್ಕೆಯಾಗಿದ್ದಾರೆ. ಈ ಮೂಲಕ ತುಳುನಾಡಿಗೆ ಹೊಸ ಗರಿ ಮೂಡಿಸಿದಂತಾಗಿದೆ. ಯುವತಿಯರಿಗೆ ಮಿಸ್ ಯೂನಿವರ್ಸ್ ಇದ್ದಂತೆಯೇ ಮಹಿಳೆಯರಿಗೆ ಮಿಸಸ್ ಯೂನಿವರ್ಸ್ ಆಯೋಜನೆ ಮಾಡಲಾಗುತ್ತದೆ. ಕಾರ್ಕಳದ ಕಡ್ತಲ ಕಂಟೆಬೆಟ್ಟು ಸಂತೋಷ್ ಹೆಗ್ಡೆಯವರ ಪತ್ನಿ ದೀಪ್ತಿ ಹೆಗ್ಡೆರವರು ತಮ್ಮ 6 ವರ್ಷದ ಮಗಳು ಸಂಸ್ಕೃತಿ ಹೆಗ್ಡೆಯೊಂದಿಗೆ ಈ ತಿಂಗಳಲ್ಲಿ ವಿದೇಶದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದಕ್ಷಿಣ ಭಾರತ ವಲಯವನ್ನು ಪ್ರತಿನಿಧಿಸಲಿದ್ದಾರೆ. ಇವರು […]

ಇಂದಿನಿಂದ  ಎರಡು ತಿಂಗಳು ಮರಳುಗಾರಿಕೆ ನಿಷೇಧ

ಉಡುಪಿ: ಜಿಲ್ಲೆಯಲ್ಲಿ ಮಳೆಗಾಲ ಅವಧಿ ಮೀನು ಮರಿ ಉತ್ಪಾದನೆ ಕಾರಣಕ್ಕೆ ನಾನ್‌ ಸಿಆರ್‌ಝಡ್‌ ಮರಳುಗಾರಿಕೆಗೆ ಜೂ. 5ರಿಂದ ಅಕ್ಟೋಬರ್‌ 15ರ ವರೆಗೆ ನಿಷೇಧ ಇರಲಿದೆ. ಸಿಆರ್‌ಝಡ್‌ ವಲಯದ ಮರಳುಗಾರಿಕೆ ಜೂನ್‌, ಜುಲೈ ಎರಡು ತಿಂಗಳು ನಿರ್ಬಂಧ ಇರಲಿದೆ. ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಮರಳು ತೆಗೆಯಲು ಸುಪ್ರೀಂ ಕೋರ್ಟ್‌ ಆದೇಶವಾದರೂ ಮಳೆಗಾಲ ಮುಗಿಯುವವರೆಗೆ ಕಾಯಬೇಕಿದೆ. ಸಿಆರ್‌ಝಡ್‌ ಮರಳು ದಿಬ್ಬ ತೆರವಿಗೆ ನಿಷೇಧ ಹೇರಿದ್ದ ರಾಷ್ಟ್ರೀಯ ಹಸುರು ಪ್ರಾಧಿಕಾರದ (ಎನ್‌ಜಿಟಿ) ಆದೇಶದ ವಿರುದ್ಧ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ಗೆ ಮೊರೆ […]

ಮಾಜಿ ಸಚಿವ, ಶಾಸಕ, ಸುನಿಲ್ ಕುಮಾರ್ ಬಸ್‌ರೂಟ್ ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಲಿ- ಸುಂದರ ಮಾಸ್ತರ್

ಉಡುಪಿ: ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್‌ಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ, ಅನುಕಂಪ ಇದ್ದರೆ, ಖಾಸಗಿ ಬಸ್‌ಗಳಲ್ಲೂ ಉಚಿತ ಪ್ರಯಾಣಕ್ಕಾಗಿ ಒತ್ತಾಯ ಮಾಡುವ ಬದಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಸ್ ರೂಟ್‌ಗಳನ್ನು ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಲಿ. ಅವರೊಂದಿಗೆ ನಾವೂ ಕೂಡ ಹೋಗುತ್ತೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ. ಕೇವಲ ನಾಟಕೀಯ ಕೂಗಾಟ ಬಿಟ್ಟು ಅವಿಭಜಿತ […]

  ಮುಂಡ್ಕೂರು- ಚಿಕಿತ್ಸೆಗಾಗಿ ನೆರವು

ಕಾರ್ಕಳ: ಸಾಮಾಜಿಕ ಕಳಕಳಿಯ ಕಾರ್ಕಳ ತಾಲೂಕಿನ ನಮ್ಮ ಫ್ರೆಂಡ್ (ರಿ. ) ಮುಂಡ್ಕೂರು ಇದರ ವತಿಯಿಂದ 40ನೇ ಹೆಜ್ಜೆಯ ಅಂಗವಾಗಿ ಮುಂಡ್ಕೂರು ಜೇಪೆ ಮನೆ ಕುಮಾರಿ ಪ್ರತಿಕ್ಷಾ ಅವರು ಹೃದಯ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ನೆರವಿನ ಚೆಕ್ ನ್ನು ನಮ್ಮ ಫ್ರೆಂಡ್ಸ್‌ನ ಸಂಚಾಲಕ ಆನಂದ ಸಾಲ್ಯಾನ್ ವಿತರಿಸಿದರು. ಈ ಸಂದರ್ಭದಲ್ಲಿ ನಮ್ಮ ಫ್ರೆಂಡ್ಸಿನ ಗೌರವ ಅಧ್ಯಕ್ಷ ಜಗದೀಶ್ ಶೆಟ್ಟಿ ಪುಣೆ, ಅಧ್ಯಕ್ಷ ಅರುಣ್ ರಾವ್, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್, ಗೌರವ ಸಲಹೆಗಾರ ಪ್ರಭಾಕರ್ […]

ಒಂದೇ ಸೀರೆಯಲ್ಲಿ ಅಕ್ಕ, ತಂಗಿ ನೇಣಿಗೆ ಶರಣು.!

ಧಾರವಾಡ: ಸೀರೆಯೊಂದಕ್ಕೆ ಅಕ್ಕ, ತಂಗಿ ಇಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದ ಕಲಘಟಗಿ ಪಟ್ಟಣದಲ್ಲಿ ನಡೆದಿದೆ. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಹೋದರಿಯರು ಮನೆಯಲ್ಲಿ ತಾಯಿ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ಹಡಪದ (19) ಹಾಗೂ ಭೂಮಿಕಾ ಹಡಪದ (17) ಎಂಬುವರೇ ಆತ್ಮಹತ್ಯೆಗೆ ಶರಣಾದ ಸಹೋದರಿಯರು. ಈ ಬಗ್ಗೆ ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ನಂತರ ಸಹೋದರಿಯರು ಆತ್ಮಹತ್ಯೆಗೆ ಕಾರಣ ಏನು ಎಂಬುದು […]

ಲಯನ್ಸ್ ಕ್ಲಬ್ ಕುರ್ಕಾಲ್ – ವಿಶ್ವ ಪರಿಸರ ದಿನಾಚರಣೆ

ಲಯನ್ಸ್ ಕ್ಲಬ್ ಕುರ್ಕಾಲ್, ಉಡುಪಿ ಜಿಲ್ಲಾ ನರ್ಸರಿಮೆನ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಕುರ್ಕಾಲ್ ಪರಿಸರದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಲಯನ್ಸ್ ಅಧ್ಯಕ್ಷ ಡಿ. ಆರ್. ಕೋಟ್ಯಾನ್, ಕಾರ್ಯದರ್ಶಿ ಡೋಮಿಯನ್ ನೊರೋಹ್ನಾ, ಖಜಾಂಜಿ ವಿಕ್ಟರ್ ಮಿನೇಜಸ್, ನಿಯೋಜಿತ ಅಧ್ಯಕ್ಷ ಸ್ಟೀವನ್ ಕ್ಯಾಸ್ತಲಿನೋ,  ನಿಯೋಜಿತ ಕಾರ್ಯದರ್ಶಿ  ಹಾಗೂ ನರ್ಸರಿಮೆನ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಕುರ್ಕಾಲ್, ವನಸುಮ ವೇದಿಕೆ ಅಧ್ಯಕ್ಷ ಬಾಸುಮ ಕೊಡಗು ಉಪಸ್ಥಿತರಿದ್ದರು.

ಗೋಹತ್ಯೆ ನಿಷೇಧ ಹಿಂಪಡೆದರೆ ಉಗ್ರ ಹೋರಾಟ: ಮುತಾಲಿಕ್

ಬೆಳಗಾವಿ: ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು? ಎಂದು ಹೇಳಿದ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ವಿರುದ್ಧ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಈ ಹೇಳಿಕೆ ಸಂಬಂಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈಗ ಈ ಹೇಳಿಕೆ ಕೊಡಲು ಪ್ರಣಾಳಿಕೆ ಕಾರಣವಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ಕಾಯಿದೆ ಹಿಂಪಡಿತೀವಿ ಎಂದು ಕಾಂಗ್ರೆಸ್ ಹೇಳಿದೆ.  ಮುಸ್ಲಿಂ ಓಲೈಕೆಗಾಗಿ ಈ ರೀತಿ ಮಾಡ್ತಿದ್ದಾರೆ. ಸಾಧು, ಸಂತರು, ಋಷಿ ಮುನಿಗಳು ಗೋ ಸಂರಕ್ಷಣೆ ಆಗಬೇಕು […]