# Tags

ತೊಕ್ಕೊಟ್ಟು:  ಶ್ರೀ ಸೋಮೇಶ್ವರಿ ಸೌ. ಸ. ಸಂಘಕ್ಕೆ ಅಧ್ಯಕ್ಷರಾಗಿ ಉಮಾನಾಥ ನಾಯಕ್ ಪುನರಾಯ್ಕೆ (Tokkottu : Sri Someshwari Sauhardha sangha : Umanath Naik was re-elected AS THE President of the Society

ತೊಕ್ಕೊಟ್ಟು: ಶ್ರೀ ಸೋಮೇಶ್ವರಿ ಸೌ. ಸ. ಸಂಘಕ್ಕೆ ಅಧ್ಯಕ್ಷರಾಗಿ ಉಮಾನಾಥ ನಾಯಕ್ ಪುನರಾಯ್ಕೆ (Ullala) ಉಳ್ಳಾಲ: ತೊಕ್ಕೊಟ್ಟು ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿ. ದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಸಮಿತಿಗೆ ನೂತನಅಧ್ಯಕ್ಷರಾಗಿ ಉಮಾನಾಥ ನಾಯಕ್ ಉಳ್ಳಾಲ್ ಹಾಗೂ ಉಪಾಧ್ಯಕ್ಷರಾಗಿ ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ ಅವರು ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ.   ನಿರ್ದೇಶಕರಾಗಿ ಜೆ. ರವೀಂದ್ರನಾಯಕ್, ನರಸಿಂಹ ನಾಯಕ್ ಹರೇಕಳ, ಮುರಳೀಧರ ನಾಯಕ್ ಚೆಂಬುಗುಡ್ಡೆ, ಎಸ್ .ಯು. ಲಕ್ಷ್ಮಣ ನಾಯಕ್ ಸಂತೋಷ್ ನಗರ, ಯೋಗೀಶ್ […]

ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್‌ನ ಉದ್ಘಾಟನೆ (padubidri Gyana Mandira : Inauguration of Bhima Water Purifier)

 ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್‌ನ ಉದ್ಘಾಟನೆ (Padubidri) ಪಡುಬಿದ್ರಿ, ಡಿ.9 : ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸರ್ವೋಚ್ಚ ಸಂಸ್ಥೆ ಶ್ರೀ ವನದುರ್ಗಾ ಟ್ರಸ್ಟ್ ಆಡಳಿತದ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿ ಭೀಮ ಜ್ಯುವೆಲ್ಲರ್ಸ್‌ ಸಂಸ್ಥೆಯು ಸಾರ್ವಜನಿಕ ಸೇವೆಗಾಗಿ ಹಸ್ತಾಂತರಿಸಿದ ಸುಮಾರು 1.5 ಲಕ್ಷ ರೂ. ಅಂದಾಜು ಮೌಲ್ಯದ ವಾಟರ್ ಪ್ಯೂರಿಫಯರ್‌ಅನ್ನು ಲೋಕಾರ್ಪಣೆಗೈಯ್ಯಲಾಯಿತು. ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಸುರೇಶ್ ರಾವ್ ಅವರು ಘಟಕವನ್ನು ಉದ್ಘಾಟಿಸಿದರು. ಭೀಮಾ ಜ್ಯುವೆಲ್ಲರ್ಸ್‌ನ ಸೇಲ್ಸ್ ಆ್ಯಂಡ್ ಆಪರೇಶನ್ ಮ್ಯಾನೇಜರ್ ಗುರುಪ್ರಸಾದ್ […]

ದ.ಕ ಜಿಲ್ಲಾ ಪಿಯು ಕಾಲೇಜುಗಳ ಅನುದಾನಿತ ನೌಕರರ ಸಂಘ :  ವಿ.ಪ ಸದಸ್ಯ ಮಂಜುನಾಥ ಭಂಡಾರಿ ಭೇಟಿ

ದ.ಕ. ಜಿಲ್ಲಾ ಪಿಯು ಕಾಲೇಜುಗಳ ಅನುದಾನಿತ ನೌಕರರ ಸಂಘ – ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಅನುದಾನಿತ ನೌಕರರ ಸಂಘದ ನಿಯೋಗ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ ಅವರು ಭೇಟಿಯಾಗಿ ಅಹವಾಲು ಮಂಡಿಸಿ, ಮನವಿ ಸಲ್ಲಿಸಿತು.ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಘದ ನಿಯೋಗ ಮಂಜುನಾಥ ಭಂಡಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಇದೇ ಸಂದರ್ಭದಲ್ಲಿ […]

ಡ್ರಗ್ಸ್ ಜಾಲ ಮಟ್ಟಹಾಕಲು ಎಲ್ಲ ಇಲಾಖೆಗಳು ಕೈಜೋಡಿಸಬೇಕು: ಜಿಲ್ಲಾಧಿಕಾರಿ ಖಡಕ್ ಸೂಚನೆ

ಡ್ರಗ್ಸ್ ಜಾಲ ಮಟ್ಟಹಾಕಲು ಎಲ್ಲ ಇಲಾಖೆಗಳು ಕೈಜೋಡಿಸಬೇಕು: ಜಿಲ್ಲಾಧಿಕಾರಿ ಖಡಕ್ ಸೂಚನೆ (Mangaluru) ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಗಾಂಜಾವನ್ನು ಸಂಪೂರ್ಣವಾಗಿ ನಿಷೇಧಿಸಲು ಎಲ್ಲಾ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಮುಲ್ಲೈ ಮುಗಿಲನ್ ಎಂ.ಪಿ. ಖಡಕ್ ಸೂಚನೆ ನೀಡಿದರು.ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಡ್ರಗ್ಸ್ ಚಟಕ್ಕೆ ವಿದ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಬೀಳುತ್ತಿರುವುದು ಕಳವಳಕಾರಿಯಾಗಿದೆ. ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ […]

ಕಾಪು : ಮೋಟೋರೈಸ್ಡ್ ಟ್ರೈಸಿಕಲ್ ವಿತರಣೆ

ಕಾಪು : ಮೋಟೋರೈಸ್ಡ್ ಟ್ರೈಸಿಕಲ್ ವಿತರಣೆ (Kaup)ಕಾಪು : ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನರಿಗೆ ನೀಡುವ ಮೋಟೋರೈಸ್ಡ್ ಟ್ರೈಸಿಕಲನ್ನು ಶುಕ್ರವಾರ ಶಾಸಕರ ಕಚೇರಿಯಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಫಲಾನುಭವಿ ನಫ್ರಿಶಾತ್ತುಲಾ ಮಿಶ್ರಿಯಾ ಅವರಿಗೆ ವಿತರಿಸಲಾಯಿತು. ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಮತ್ತು ಕೈ ಸ್ವಾಧೀನವಿರುವ ಮಾನಸಿಕವಾಗಿ ಸ್ವಸ್ಥರಿರುವವರಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಓರ್ವ ಫಲಾನುಭವಿಗೆ ಮೋಟೋರೈಸ್ಡ್ ಟ್ರೈಸಿಕಲ್ […]

ಡಾ. ಬಿ.ಆರ್ ಅಂಬೇಡ್ಕರ್‌ರವರ 68 ನೇ ಪರಿನಿರ್ವಾಣ : ಉಡುಪಿ ಜಿಲ್ಲಾಧಿಕಾರಿಯವರಿಂದ ಪುತ್ಥಳಿಗೆ ಮಾಲಾರ್ಪಣೆ (Dr BR Ambedkars’s 68th death anniversary : Udupi DC garlands the statue)

ಡಾ. ಬಿ.ಆರ್ ಅಂಬೇಡ್ಕರ್‌ರವರ 68 ನೇ ಪರಿನಿರ್ವಾಣ : ಉಡುಪಿ ಜಿಲ್ಲಾಧಿಕಾರಿಯವರಿಂದ ಪುತ್ಥಳಿಗೆ ಮಾಲಾರ್ಪಣೆ (Udupi) ಉಡುಪಿ: ಡಾ. ಬಿ.ಆರ್ ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ, ಶುಕ್ರವಾರ ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಸಂಕರ್ಣದ ಆವರಣದ ಮುಂಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಮಾಲಾರ್ಪಣೆ ಗೈದರು. ಈ ಸಂಧರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ […]

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಟಲ್ ಟಂಕರಿಂಗ್ ಕಾರ್ಯಾಗಾರ (ATL Mentoring Session by Students of SMVITM)

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಟಲ್ ಟಂಕರಿಂಗ್ ಕಾರ್ಯಾಗಾರ   (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪ್ರಥಮ್‌ ಕಾಮತ್, ನಿಶಿತಾ ರಾವ್ ಮತ್ತು ಕೀರ್ತನಾ ಹೆಬ್ಬಾರ್ ಇವರುಗಳು ಆರ್ಡಿನೊ ಪ್ರೊಗ್ರಾಮಿಂಗ್ ಮತ್ತು ಪ್ರಾಜೆಕ್ಟ್‌ ತಯಾರಿಕೆ ಕುರಿತಾಗಿ ಪ್ರಾಯೋಗಿಕ ಕಲಿಕಾ ಮಾರ್ಗದರ್ಶನ ಕಾರ್ಯಾಗಾರವನ್ನು ಕಾರ್ಕಳ ಬೈಲೂರಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅಟಲ್‌ಟಿಂಕರಿಂಗ್ ಲ್ಯಾಬ್‌ನಲ್ಲಿ ನಡೆಸಿಕೊಟ್ಟರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸೆನ್ಸಾರ್‌ಗಳು, ಸರ್ವೋ ಮೋಟಾರ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳ […]

ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಕಡಲ ತೀರದ ಸ್ವಚ್ಚತಾ ಅಭಿಯಾನ(Cleaning Drive from the students of SMVITM)

 ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಕಡಲ ತೀರದ ಸ್ವಚ್ಚತಾ ಅಭಿಯಾನ (Bantakal) ಬಂಟಕಲ್‌ ; ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನದ ಅಂಗವಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್‌ ಕ್ರಾಸ್‌ ಘಟಕ, ರೋಟರಾಕ್ಟ್‌ ಘಟಕ ಇದರ ಜಂಟಿ ಆಶ್ರಯದಲ್ಲಿ ಮಲ್ಪೆ ಕಡಲ ತೀರದಲ್ಲಿ ಸ್ವಚ್ಚತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಸ್ವಚ್ಚತಾ ಅಭಿಯಾನದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರಾದ  ರಘುನಾಥ್, ಜಯರಾಮ್ ನಾಯಕ್ […]

ಎಲ್ಲೂರು : ಮನೆ ಅಂಗಳದಿಂದ ನಾಯಿ ಹೊತ್ತೊಯ್ದ ಚಿರತೆ : ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆ (Yelluru : Leopard carrying dog from the house yard : Scene cought by CC Cemera)

ಎಲ್ಲೂರು : ಮನೆ ಅಂಗಳದಿಂದ ನಾಯಿ ಹೊತ್ತೊಯ್ದ ಚಿರತೆ : ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆ (Yelluru) ಎಲ್ಲೂರು: ಎಲ್ಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಣಿಯೂರಿನಲ್ಲಿ ಗುರುವಾರ ರಾತ್ರಿ ಮನೆಯಂಗಳಕ್ಕೆ ಬಂದ ಚಿರತೆಯೊಂದು ಮನೆ ನಾಯಿಯನ್ನು ಹೊತ್ತೊಯ್ದ ಘಟನೆ ಘಟಿಸಿದೆ. ಪಣಿಯೂರಿನ ಮುರಳಿ ಶೆಟ್ಟಿ ಅವರು ಎಲ್ಲೂರಿನ ಮಾಣಿಯೂರಿನಲ್ಲಿ ನೂತನ ಮನೆ ಕಟ್ಟಿಸಿದ್ದರು. ಗುರವಾರ ರಾತ್ರಿ 9.30 ರ ಸುಮಾರಿಗೆ ಮನೆ ನಾಯಿ ಜೋರಾಗಿ ಬೊಗಳುತ್ತಿತ್ತು. ಹೊರ ಬಂದು ನೋಡಿದಾಗ ಏನೂ ಕಂಡಿಲ್ಲ. ಮತ್ತೆ ಬೊಗಳ ಹತ್ತಿದ […]

ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದು: ಮಂಜುನಾಥ್ ಎಸ್.ಕೆ (Responsibility for every Cooperative with Board of Directors : Manjunatha SK)

ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದು: ಮಂಜುನಾಥ್ ಎಸ್.ಕೆ (Udupi) ಉಡುಪಿಃ  ಸೌಹಾರ್ದ ಸಹಕಾರಿ ಬೆಳವಣಿಗೆಯಲ್ಲಿ ಸಹಕಾರಿಯ ಆಡಳಿತ ಮಂಡಳಿಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದಾಗಿರುತ್ತದೆ ಎಂದು  ಕರ್ನಾಟಕ ರಾಜ್ಯ  ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲಾ ನಿರ್ದೇಶಕ ಮಂಜುನಾಥ್ ಎಸ್.ಕೆ. ಹೇಳಿದ್ದಾರೆ.  ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಉಡುಪಿ ಡಯಾನ ಹೊಟೇಲಿನ ಸಭಾಭವನದಲ್ಲಿ ಉಡುಪಿ ಜಿಲ್ಲೆಯ  ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ […]