# Tags
#PROBLEMS

(Karkala) ಕಾರ್ಕಳ: ಬೆಂಕಿ ಹತ್ತಿಕೊಂಡು ಸುಟ್ಟುಕರಕಲಾದ ಟೂರಿಸ್ಟ್ ವಾಹನ

(Karkala) ಕಾರ್ಕಳ: ಬೆಂಕಿ ಹತ್ತಿಕೊಂಡು ಸುಟ್ಟುಕರಕಲಾದ ಟೂರಿಸ್ಟ್ ವಾಹನ

ಕಾರ್ಕಳ : ಟೂರಿಸ್ಟ್ ವಾಹನ‌ವೊಂದು (ಟಿಟಿ) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ‌ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ಶನಿವಾರ ಸಂಭವಿಸಿದೆ‌.

ಉಡುಪಿಯ ಟೂರಿಸ್ಟ್ ವಾಹನದಲ್ಲಿ ಕಾರ್ಕಳ ಮಾಳ ಮಾರ್ಗವಾಗಿ ಕುದುರೆಮುಖದ ಮೂಲಕ ಕಳಸದ ಕಡೆಗೆ ಹನ್ನೊಂದು ಮಂದಿ ಪ್ರಯಾಣಿಸುತ್ತಿದ್ದರು. ಕುದುರೆಮುಖ ಸಮೀಪಿಸುತ್ತಿದ್ದಂತೆ ಟೂರಿಸ್ಟ್ ವಾಹನದಲ್ಲಿ ಏಕಾಏಕಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ವಾಹನ ತುಂಬಾ ವ್ಯಾಪಿಸಿದೆ‌.
ಅದೃಷ್ಟವಶಾತ್ ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿಯ ಕೆನ್ನಾಲಗೆ ಇಡೀ ವಾಹನಕ್ಕೆ ವ್ಯಾಪಿಸಿದ ಪರಿಣಾಮ ಸಂಪೂರ್ಣ ವಾಹನ ಸುಟ್ಟುಹೋಗಿದೆ‌‌.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ಬೆಂಕಿ ನಂದಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2