ಉಡುಪಿ ಎಸ್ಪಿ ವಿರುದ್ಧ ಐವರು ಬಿಜೆಪಿ ಶಾಸಕರು ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ (Protest by Five MLAʼs and Hindu Organisations Against Udupi SP)
ಉಡುಪಿ ಎಸ್ಪಿ ವಿರುದ್ಧ ಐವರು ಬಿಜೆಪಿ ಶಾಸಕರು ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ (Udupi) ಉಡುಪಿ: ಉಡುಪಿ ಎಸ್ಪಿ ವಿರುದ್ಧ ಜಿಲ್ಲೆಯ ಐವರು ಬಿಜೆಪಿ ಶಾಸಕರು ಮತ್ತು ಹಿಂದೂ ಸಂಘಟನೆಗಳ ಸದಸ್ಯರು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಬಿಜೆಪಿಯ ಐವರು ಶಾಸಕರು ಭಾಗಿಯಾಗಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿ ಎಸ್ಪಿ ಕಚೇರಿಯೆದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು.ಈ ಹಿನ್ನೆಲೆಯಲ್ಲಿ ಎಸ್ ಪಿ ಕಚೇರಿ ಮುಂಭಾಗದಲ್ಲಿ ಭಾರಿ ಭದ್ರತೆ ಮಾಡಲಾಯಿತು. ಹಿಂದೂ ಜಾಗರಣ ವೇದಿಕೆ ಈ ಪ್ರತಿಭಟನೆ ನೇತೃತ್ವ ವಹಿಸಿತ್ತು. […]