ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯಿಂದ ದಿ. ಕೆ. ಲೀಲಾಧರ ಶೆಟ್ಟಿ ಪುಣ್ಯ ಸ್ಮರಣ
(Kaup) ಕಾಪು ; ಕರಂದಾಡಿಯ ದಿ.ಲೀಲಾಧರ ಶೆಟ್ಟಿ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರ ತಂಡ ಅರ್ಥಪೂರ್ಣವಾಗಿ ಆಚರಿಸಿತು. ಡಿಸೆಂಬರ್ 12 ರಂದು ಸಂತೆಕಟ್ಟೆಯ ಪ್ರಗತಿನಗರದಲ್ಲಿರುವ ಸ್ಪಂದನಾ ದಿವ್ಯಾಂಗರ ಸಂರಕ್ಷಣಾ ಸಂಸ್ಥಗೆ ಭಜನಾ ಮಂಡಳಿಯ ಸದಸ್ಯರು ತೆರಳಿ, ಆ ಸಂಸ್ಥೆಗೆ ಉಪಯುಕ್ತವೆನಿಸುವ ಸಾವಿರಾರು ರೂಪಾಯಿ ಮೌಲ್ಯದ ಹೊದಿಕೆ, ಸಾಬೂನು, ಬಕೆಟು, ಫಿನಾಯಿಲ್ ಮೊದಲಾದ ಇನ್ನಿತರ ವಸ್ತುಗಳನ್ನು ನೀಡಿ, ಲೀಲಾಧರ ಶೆಟ್ಟಿ ಅವರಿಗೆ ಅತ್ಯಂತ ಪ್ರಿಯವಾದ ಕುಣಿತ ಭಜನೆಯನ್ನೂ ನಡೆಸಿ ಅಲ್ಲಿನ […]