# Tags
#PROBLEMS

 ಕಟಪಾಡಿ : ಶಿಥಿಲಾವಸ್ಥೆಯಲ್ಲಿದ್ದ ಓವರ್‌ಹೆಡ್ ಟ್ಯಾಂಕ್‌ ತೆರವು (Katapadi : Clearing of dilapidated tank)

ಕಟಪಾಡಿ : ಶಿಥಿಲಾವಸ್ಥೆಯಲ್ಲಿದ್ದ ಓವರ್‌ಹೆಡ್ ಟ್ಯಾಂಕ್‌ ತೆರವು

 ಕಟಪಾಡಿ,ಅ.೨೩:ಕಟಪಾಡಿ ಪೇಟೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕುಡಿಯುವ ನೀರು ಸರಬರಾಜು ಮಾಡುವ ಓವರ್‌ಹೆಡ್ ಟ್ಯಾಂಕ್‌ನ್ನು ಸುರಕ್ಷಿತವಾಗಿ ಧರೆಗುರುಳಿಸಲಾಗಿದೆ.

ಈ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ  ಬಿದ್ದು, ಅಪಾಯ ಆಗುವ ಸಾಧ್ಯತೆ ಇತ್ತು

  ಬಹಳಷ್ಟು ಪ್ರಯೋಜನಕಾರಿಯಾಗಿದ್ದ ಈ ನೀರು ಸರಬರಾಜು ಮಾಡುವ 1 ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಸಂಪರ್ಕ ಕಳೆದುಕೊಂಡು ಪಳೆಯುಳಿಕೆಯಾಗಿತ್ತು. ಈ ಟ್ಯಾಂಕ್‌ನ  ಅಡಿ ಭಾಗದಲ್ಲಿ  ಸಿಮೆಂಟ್ ಇಲ್ಲದೆ ಕಬ್ಬಿಣದ ಸರಳುಗಳು ಕಾಣುವಂತಾಗಿದೆ. ಅಳವಡಿಸಲಾದ ಪಿಲ್ಲರ್‌ಗಳೂ ಕೂಡಾ ಬಿರುಕು ಬಿಟ್ಟಿತ್ತು.

ಕಟಪಾಡಿ ಪೇಟೆಯ ಜನನಿಬಿಡ ಸ್ಥಳದಲ್ಲಿ ಇರುವ ಈ ಶಿಥಿಲಾವಸ್ಥೆಯಲ್ಲಿರುವ ಈ ಓವರ್ ಹೆಡ್ ಟ್ಯಾಂಕ್‌ನಿಂದಾಗಿ ಯಾವುದೇ ಕ್ಷಣದಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತು, ಈ ಓವರ್‌ ಹೆಡ್‌ ಟ್ಯಾಂಕನ್ನು ಯಶಸ್ವಿಯಾಗಿ ಧರೆಗೆ ಉರುಳಿಸಿದ್ದಾರೆ.

 ಕಳೆದ ಭಾನುವಾರ ಬೆಳಗ್ಗೆ 8-15 ರಿಂದ 8-45 ರ ನಡುವೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.

ಕಾರ್ಯಾಚರಣೆಯ ಸಂದರ್ಭ ಮೆಸ್ಕಾಂ, ಪೊಲೀಸ್ ಇಲಾಖೆ ಸಹಕಾರ ಪಡೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯರಿಗೆ ನೋಟೀಸ್ ನೀಡಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು.   

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2