ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ : ಉಚ್ಚಿಲ ಸರಸ್ವತಿ ಮಂದಿರ ಶಾಲಾ ವಿದ್ಯಾರ್ಥಿ ಸಿರಾಜುದ್ದಿನ್ ರಾಜ್ಯಮಟ್ಟಕ್ಕೆ ಆಯ್ಕೆ(Uchila Saraswathi Mandira School student Sirajuddin selected State level for special need)
ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ : ಉಚ್ಚಿಲ ಸರಸ್ವತಿ ಮಂದಿರ ಶಾಲಾ ವಿದ್ಯಾರ್ಥಿ ಸಿರಾಜುದ್ದಿನ್ ರಾಜ್ಯಮಟ್ಟಕ್ಕೆ ಆಯ್ಕೆ
(Uchila) ಉಚ್ಚಿಲ : ಕಿದಿಯೂರು ಶ್ರೀ ವಿದ್ಯಾ ಸಮುದ್ರತೀರ್ಥ ಪ್ರೌಢಶಾಲೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ 14 ರ ವಯೋಮಾನದಲ್ಲಿ ಸರಸ್ವತಿ ಮಂದಿರ ಪ್ರೌಢ ಶಾಲೆಯ 8ನೇ ತರಗತಿಯ ಶೇಕ್ ಸಿರಾಜುದ್ದಿನ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಸಿರಾಜುದ್ದೀನ್ ಗುಂಡು ಎಸೆತ ದ್ವಿತೀಯ, 50 ಮೀ ಓಟ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾನೆ.
ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಶಾಲಾ ಕ್ರೀಡಾ ಶಿಕ್ಷಕ ಸುರೇಶ್ ಕುಲಾಲ್ ವಿದ್ಯಾರ್ಥಿ ಸಿರಾಜುದ್ದೀನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.