# Tags
#ಧಾರ್ಮಿಕ

ನೆರುಲ್ : ವಿಜೃಂಭಣೆಯಿಂದ ಸಂಪನ್ನಗೊಂಡ 32ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ (Nerul : 32nd Annual Sri ayyappa Swami Maha pooja)

 ನೆರುಲ್ : ವಿಜೃಂಭಣೆಯಿಂದ ಸಂಪನ್ನಗೊಂಡ 32ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

 ನವಿ ಮುಂಬಯಿ,ಡಿ.23: ನೆರುಲ್ ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್(ರಿ) ಇದರ 32 ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು  ನೆರುಲ್ ಶ್ರೀ ಶನೀಶ್ವರ ಮಂದಿರದ ವಠಾರದಲ್ಲಿ ವಿಜೃಂಭಣೆಯಿಂದ ಜರಗಿತು.

   ಶ್ರೀ ಮಹಾಗಣಪತಿ ಹೋಮ, ಶ್ರೀ ಅಯ್ಯಪ್ಪ ಸ್ವಾಮಿ ಸಹಸ್ರನಾಮಾರ್ಚನೆ, ಸಾಯಂಕಾಲ  ಕಲಶ ಪ್ರತಿಷ್ಠಾಪನೆ, ಆ ಬಳಿಕ ಭಜನೆ ನೆರವೇರಿತು.

 ರಾತ್ರಿ ಶ್ರೀ ಅಯ್ಯಪ್ಪ ಸ್ವಾಮಿಯ ಪುಷ್ಪಾಲಂಕೃತ ಮಂಟಪಕ್ಕೆ ಗುರುಸ್ವಾಮಿ ಅನಿಲ್ ಹೆಗ್ಡೆ ಪೆರ್ಡೂರು ಅವರು ಮಹಾ ಆರತಿ ಬೆಳಗಿಸಿದರು. ನಂತರ ತೀರ್ಥ ಪ್ರಸಾದ ಹಾಗೂ ಸಾರ್ವಜನಿಕ ಅನ್ನಪ್ರಸಾದ ವಿತರಣೆ ಜರಗಿತು.‌

ಮಹಾಪೂಜೆಯ ಸಂದರ್ಭದಲ್ಲಿ 18ನೇ ಬಾರಿಗೆ ಹಾಗೂ 25 ನೇ ಬಾರಿಗೆ ಶ್ರೀ ಶಬರಿಮಲೆ ಯಾತ್ರೆಗೈಯುತ್ತಿರುವ ಸ್ವಾಮಿಗಳನ್ನು ಗೌರವಿಸಲಾಯಿತು.

  ಮಹಾಪೂಜೆಯಲ್ಲಿ ಪಾಲ್ಗೊಂಡ  ನೆರುಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಮ್. ಪೂಜಾರಿ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರುಲ್ ಇದರ ಅಧ್ಯಕ್ಷ  ದಾಮೋದರ್ ಶೆಟ್ಟಿ, ಪುರೋಹಿತರಾದ ಸೂರಜ್ ಭಟ್, ದಿನೇಶ್ ಚಡಗ,  ಮಾಜಿ ನಗರ ಸೇವಕಿ ಮೀರಾ ಪಾಟೀಲ್ ಇವರನ್ನು ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಕಾರ್ಯಾಧ್ಯಕ್ಷ ಎನ್.ಕೆ. ಪೂಜಾರಿ, ಅನಿಲ್ ಹೆಗ್ಡೆ ಗುರುಸ್ವಾಮಿ, ವಿ ಕೆ ಸುವರ್ಣ, ಗುರುಸ್ವಾಮಿಯವರು ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು. 

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2