ಗೋರೆಗಾಂವ್ ಕರ್ನಾಟಕ ಸಂಘ: ವಿ.ಕೆ. ಸುವರ್ಣರವರಿಗೆ ಕರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಪ್ರದಾನ (Goregav Karnataka Sangha : VK Suvarna got Kare Sanjiva Shetty endowment Fund)
ಗೋರೆಗಾಂವ್ ಕರ್ನಾಟಕ ಸಂಘ: ವಿ.ಕೆ. ಸುವರ್ಣರವರಿಗೆ ಕರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಪ್ರದಾನ
ಸನ್ಮಾನದಿಂದ ಇನ್ನಷ್ಟು ಸಮಾಜ ಸೇವೆಗೆ ಪ್ರೋತ್ಸಾಹ – ವಿ.ಕೆ.ಸುವರ್ಣ
(Mumbai) ಮುಂಬಯಿ ಡಿ. 23 : ಗೋರೆಗಾಂ ಕರ್ನಾಟಕ ಸಂಘದ ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಸಭಾಗೃಹದಲ್ಲಿ ಅಡ್ವಕೇಟ್ ಕಟ್ಟೆರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕ, ನೆರುಲ್ ಶನಿ ಮಂದಿರದ ಹಾಗೂ ನೆರುಲ್ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್‌ನ ಗೌ. ಪ್ರ. ಕಾರ್ಯದರ್ಶಿ, ಬಿಲ್ಲವರ ಎಸೋಸಿಯೇಷನ್ ನವಿ ಮುಂಬಯಿ ಸ್ಥಳೀಯ ಕಚೇರಿಯ ಸ್ಥಾಪಕ ಸದಸ್ಯ, 15 ವರ್ಷ ಗೌರವ ಕಾರ್ಯದರ್ಶಿಯಾಗಿ, ಮಾಜಿ ಉಪಕಾರ್ಯಧ್ಯಕ್ಷರಾದ ಸಂಘಟಕ ವಿ. ಕೆ. ಸುವರ್ಣ ಪಡುಬಿದ್ರಿಯವರಿಗೆ ಗೊರೇಗಾವ್ ಕರ್ನಾಟಕ ಸಂಘ ನೀಡುವ ದಿ. ನ್ಯಾ. ಕಟ್ಕರೆ ಸಂಜೀವ ಶೆಟ್ಟಿ ಸ್ಮಾರಕ ಶ್ರೇಷ್ಠ ಸಮಾಜ ಸೇವಕ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಗೌ.ಪ್ರ.ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಎಲ್ಲರನ್ನೂ ಸ್ವಾ ಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಉಳಾವಾರ ಹಾಗೂ ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿಯವರ ಅನುಪಸ್ಥಿತಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಮತ್ತು ಮಾಜಿ ಪಾರುಪತ್ಯಗಾರರಾದ ರಮೇಶ್ ಶೆಟ್ಟಿ ಪಯ್ಯಾರು ಅವರು ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದರು.
ಸೀಮಾ ಕುಲಕರ್ಣಿ ಹಾಗೂ ಶಾಂತಾ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
ಮಾಜಿ ಉಪಾಧ್ಯಕ್ಷೆ ಪದ್ಮಜಾ ಮಣ್ಣೂರರು ಸಂಘದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷರಾದ ರಮೇಶ್ ಶೆಟ್ಟಿ ಹಯಾರು ಅವರು, ಮುಖ್ಯ ಅತಿಥಿಯವರಾದ ವಿ.ಕೆ. ಸುವರ್ಣ, ಪಾರುಪತ್ಯಗಾರರಾದ ಸುರೇಂದ್ರ ಸಾಲಿಯಾನ್, ದೇವಲ್ಕುಂದ ಭಾಸ್ಕರ್ ಶೆಟ್ಟಿ, ಸಂಘದ ಗಣ್ಯರಾದ ಯು.ಎಸ್. ಕಾರಂತ್, ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಮಾಜಿ ಉಪಾಧ್ಯಕ್ಷೆ ಪದ್ಮಜಾ ಮಣ್ಣೂರ, ಕೋಶಾಧಿಕಾರಿ ಎಮ್.ಆನಂದ ಶೆಟ್ಟಿ ಹಾಗೂ ಗೌ.ಪ್ರ. ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಸಂಜೀವ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಟ್ಟೆರೆ ಸಂಜೀವ ಶೆಟ್ಟಿಯವರ ಪರಿಚಯವನ್ನು ಪಾರುಪತ್ಯಗಾರ ದೇವಲ್ಕುಂದ ಭಾಸ್ಕರ್ ಶೆಟ್ಟಿಯವರು ನೆರವೇರಿಸಿದರು.
ಜೊತೆಕಾರ್ಯದರ್ಶಿ ಶಾಂತಾ ಶೆಟ್ಟಿಯವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಗಣ್ಯರಾದ ಯು.ಎಸ್. ಕಾರಂತ್, ಪಾರುಪತ್ಯಗಾರರು, ಮಾಜಿ ಅಧ್ಯಕ್ಷರು, ನಿತ್ಯಾನಂದ ಡಿ. ಕೋಟ್ಯಾನ್ ರವರು ಪ್ರಶಸ್ತಿ ಫಲಕ ಓದಿ ಹೇಳಿದರು.
ವಿಶ್ವನಾಥ್ ಕೆ. ಸುವರ್ಣರವರು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ, ಗೋರೆಗಾಂ ಕರ್ನಾಟಕ ಸಂಘದಲ್ಲಿ ಕೆಲವರ ಪರಿಚಯ ಇತ್ತು. ಸಂಘದ ಸಂಬಂಧವಿರಲಿಲ್ಲ. ನನ್ನ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದ ಬಗ್ಗೆ ಹೆಮ್ಮೆ ಎನಿಸಿದೆ. ಇದರಿಂದ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ಪ್ರೋತ್ಸಾಹ ಸಿಕ್ಕಿದೆ. ಸಂಘದ ಎಲ್ಲಾ ಪದಾಧಿಕಾರಿಗಳಿಗೆ ನಾನು ಚಿರಋಣಿಯಾಗಿದ್ದೇನೆ. ನಾನು ಪ್ರಾಮಾಣಿಕತೆಯಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ಎಂಬ ಆತ್ಮವಿಶ್ವಾಸ ನನಗಿದೆ. ಅದರ ಪ್ರೀತಿ, ಪ್ರೇಮ, ಮನುಷ್ಯನನ್ನು ಸೆಳೆಯುತ್ತದೆ.
ಸಂಜೀವ ಶೆಟ್ಟಿಯವರ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿದ ಅವರ ಪತ್ನಿ ಹಾಗೂ ಮಕ್ಕಳನ್ನು ಅಭಿನಂದಿಸಿ, ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಮನಃಪೂರ್ವಕ ನಮನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಮೇಶ್ ಶೆಟ್ಟಿ ಪದ್ಮಾರು ಮಾತನಾಡಿ, ವಿ.ಕೆ ಸುವರ್ಣರವರ ಪರಿಚಯ ಬಹಳ ವರ್ಷಗಳಿಂದ ನನಗಿದೆ. 2013ರಲ್ಲಿ ವೀರಕೇಸರಿಯಲ್ಲಿ ಅಧ್ಯಕ್ಷನಾಗಿದ್ದಾಗ ಕೂಡ ಅವರನ್ನು ಸನ್ಮಾನ ಮಾಡಿದ್ದೇವೆ. ಇಂತಹ ಗಣ್ಯ ವ್ಯಕ್ತಿಗಳಿಗೆ ನಮ್ಮ ಸಂಘದಿಂದ ಪ್ರಶಸ್ತಿ ನೀಡಿ ಸನ್ಮಾನಿಸುವುದು ಹೆಮ್ಮೆಯ ಸಂಗತಿ ಹಾಗೂ ಗೌರವದ ವಿಷಯವಾಗಿದೆ.
ಸಂಘದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸುವುದು ಇಂದು ನನಗೆ ಬಯಸದೇ ಬಂದ ಭಾಗ್ಯ ವಾಗಿದೆ ಎಂದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜೊತೆ ಕೋಶಾಧಿಕಾರಿ ಸಹಾನಿ ಶೆಟ್ಟಿಯವರು ವಂದಿಸಿದರು.