# Tags
#CONGARTULATIONS

ಸಹಕಾರ ರತ್ನ ಕೊಡವೂರು ನಾರಾಯಣ ಬಲ್ಲಾಳ್‌ರವರಿಗೆ ನಾಗರಿಕ ಅಭಿನಂದನೆ (Sahakari Rathna Kodavuru Narayana Ballal got Civil Congaratulations)

ಸಹಕಾರ ರತ್ನ ಕೊಡವೂರು ನಾರಾಯಣ ಬಲ್ಲಾಳ್‌ರವರಿಗೆ ನಾಗರಿಕ ಅಭಿನಂದನೆ

(Udup̧I Kodavuru) ಉಡುಪಿ, ಕೊಡವೂರು : ಸಹಕಾರ ರತ್ನ ಪುರಸ್ಕಾರ ದೊರೆತ ಸಂಧರ್ಭದಲ್ಲಿ ಅಭಿನಂದನಾ ಸಮಿತಿಯ ವತಿಯಿಂದ ನಾಗರಿಕ ಅಭಿನಂದನೆಯು ಶನಿವಾರದಂದು ಕೊಡವೂರು ಶಾಲಾ ವಠಾರದಲ್ಲಿ ನಡೆಯಿತು.

 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿಯವರು ಮಾತನಾಡಿ, ವಾಣಿಜ್ಯ ಸಂಸ್ಥೆಗಳಿಗಿಂತ ಸಹಕಾರಿ ಸಂಸ್ಥೆಗಳು ಜನ ಸಾಮಾನ್ಯರ ಅಗತ್ಯತೆಗಳಿಗೆ ಬಹು ವೇಗವಾಗಿ, ಉತ್ತಮವಾಗಿ ಸ್ಪಂದಿಸಿ ಅವರ ಆರ್ಥಿಕ ಅವಶ್ಯಕತೆಗಳಿಗೆ ಪರಿಹಾರ ನೀಡುವ ಕಾರಣ ಇದೀಗ ಸಹಕಾರಿ ಕ್ಷೇತ್ರ ಉತ್ತುಂಗದಲ್ಲಿದೆ.  ಅದಕ್ಕೆ ನಾರಾಯಣ ಬಲ್ಲಾಳ್ ರಂತಹ ಸಹಕಾರಿ ಧುರೀಣರು ಹಾಗೂ ಸಿಬ್ಬಂದಿಗಳು ಕಾರಣ ಎಂದು ಶ್ಲಾಘಿಸಿ, ತಮ್ಮ ಹುಟ್ಟೂರಲ್ಲಿಯೇ ಆತ್ಮೀಯರ ಮಧ್ಯೆ ಇಂತಹ ಸನ್ಮಾನ ಅರ್ಥಪೂರ್ಣ ಎಂದರು.

  ಸಹಕಾರಿ ಧುರೀಣ ಮೋಹನ ಉಪಾಧ್ಯ, ಖ್ಯಾತ ದಸ್ತಾವೇಜು ಬರಹಗಾರ ರತ್ನಕುಮಾರ್, ಅಭಿನಂದನಾ ಸಮಿತಿಯ ಅಧ್ಯಕ್ಷ ಸಾಧು ಸಾಲಿಯನ್, ಅಶೋಕ್ ಕುಮಾರ್ ಮೆರ್ಮಾಡಿ, ಅರುಣ್ ಕುಮಾರ್ ಶೆಟ್ಟಿ, ನಾಗರತ್ನ ಬಲ್ಲಾಳ್, ಹರೀಶ್ ಕೊಡವೂರು, ದೀಪಕ್ ಕೊಡವೂರು, ಸಂದೇಶ್, ಜೀವನ್ ಕುಮಾರ್ ಪಾಳೆಕಟ್ಟೆ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.

 ಸಾಹಿತಿ ಪೂರ್ಣಿಮಾ ಜನಾರ್ದನ್ ಅಭಿನಂದನಾ ಮಾತುಗಳನ್ನು ಆಡಿದರು.

ನಗರಸಭಾ ಸದಸ್ಯ ಹಾಗೂ ಅಭಿನಂದನಾ ಸಮಿತಿಯ ಸಂಚಾಲಕ ವಿಜಯ ಕೊಡವೂರು ಪ್ರಸ್ತಾವನೆಯ ಮಾತುಗಳನ್ನಾಡಿದರು.

 ಶೃತಿ ಸುಕುಮಾರ್ ಪ್ರಾರ್ಥಿಸಿದರು. ಪ್ರಭಾತ್ ಕೊಡವೂರು ಸ್ವಾಗತಿಸಿದರು. ಸತೀಶ್ ಕೊಡವೂರು ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ಜನಾರ್ದನ ಕೊಡವೂರು  ಧನ್ಯವಾದವಿತ್ತರು.

  ಅಭಿನಂದನಾ ಕಾರ್ಯಕ್ರಮದ ಬಳಿಕ ರಂಗತರಂಗ ಕಾಪು ಇವರಿಂದ ಸಾಮಾಜಿಕ, ಹಾಸ್ಯಮಯ ತುಳು ನಾಟಕ “ಕುಟ್ಟಿಯಣ್ಣನ ಕುಟುಂಬ” ನೆರವೇರಿತು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2