# Tags

ಉದ್ಯಾವರ: ಕೇವಲಾ ಒಂದು ದಿನದ ಅಂತರದಲ್ಲಿ ಸಾವಿನಲ್ಲೂ ಒಂದಾದ ಪತಿ-ಪತ್ನಿ (A Husband and Wife united even in death)

ಉದ್ಯಾವರ: ಕೇವಲಾ ಒಂದು ದಿನದ ಅಂತರದಲ್ಲಿ ಸಾವಿನಲ್ಲೂ ಒಂದಾದ ಪತಿ-ಪತ್ನಿ (Uduavara) ಉದ್ಯಾವರ: ಜೀವನ ಪರ್ಯಂತ ಒಟ್ಟೊಟ್ಟಿಗೆ ಇರುತ್ತೇವೆ ಚರ್ಚ್‌ನಲ್ಲಿ ದಂಪತಿಗಳಾದ ಸತಿ, ಪತಿ ಕೇವಲಾ ಒಂದು ದಿನದ ಅಂತರದಲ್ಲಿ ತಮ್ಮ ಮರಣದಲ್ಲೂ ಒಂದಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಘಟಿಸಿದೆ.   ಕಾರ್ಕಳ ತಾಲೂಕು ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್ ರೆಬೆಲ್ಲೋ (56)ಅವರು ನ. 27ರಂದು ನಿಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ .ಪಂ. ಹಾಲಿ ಸದಸ್ಯ ಲಾರೆನ್ಸ್ […]

ಮಜೂರು ಗ್ರಾಪಂನಲ್ಲಿ ಆರೋಗ್ಯದ ಕುರಿತಾದ ತರಬೇತಿ ಕಾರ್ಯಕ್ರಮ (Health Program at Majuru Grama Panchayath)

ಮಜೂರು ಗ್ರಾಪಂನಲ್ಲಿ ಆರೋಗ್ಯದ ಕುರಿತಾದ ತರಬೇತಿ ಕಾರ್ಯಕ್ರಮ (Majuru) ಮಜೂರು: ಮಜೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಆರೋಗ್ಯ ಕಾರ್ಯಪಡೆ ಸದಸ್ಯರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮವನ್ನು ಮಜೂರು ಗ್ರಾಮ ಪಂಚಾಯತ್‌ ಅಧ್ಯಕ್ಷ  ಪ್ರಸಾದ್‌ ಶೆಟ್ಟಿ ವಳದೂರುರವರು ಉದ್ಘಾಟಿಸಿದರು. ಶ್ರೀಮತಿ ಚಂದ್ರಕಲಾ, BHEO ರವರು ಆರೋಗ್ಯದ ಕುರಿತಾಗಿ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಆಚಾರ್ಯ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿಲಾಸಿನಿ, ಸದಸ್ಯರಾದ ಶ್ರೀಮತಿ ಸಹನಾ ತಂತ್ರಿ, ಶ್ರೀಮತಿ ಜ್ಯೋತಿ, ಕು. ವನಿತಾ, […]

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೀಪೋತ್ಸವದ ಸಂಭ್ರಮ (Deepothsava Celebration at Uchila Sri Mahalaxmi Temple)

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೀಪೋತ್ಸವದ ಸಂಭ್ರಮ PHOTO CREDIT : SACHIN UCHILA (Uchila) ಉಚ್ಚಿಲ: ಉಚ್ಚಿಲ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ದೀಪೋತ್ಸವ ನೆರವೇರಿತು.   ದೇವಳದ ಪ್ರಧಾನ ಅರ್ಚಕ ಕೆ ವಿ ರಾಘವೇಂದ್ರ ಉಪಾಧ್ಯಾಯರವರು ಪೂಜಾ ವಿಧಿ ವಿಧಾನ ಪೂರೈಸಿದ ಬಳಿಕ ದೀಪೋತ್ಸವ ಸಂಪನ್ನಗೊಂಡಿತು.  ದೇವಳವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ದೇವಳದ ಸುತ್ತಲೂ ಹಚ್ಚಿದ ಹಣತೆಯ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುವಂತಿತ್ತು.   ದೀಪೋತ್ಸವದ ಪ್ರಯುಕ್ತ ಕೋದಂಡರಾಮ […]

“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ (Second place for Sachin Uchila in ʼDasara Vaibhavaʼ Photo Contest)

“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ (Mangaluru) ಮಂಗಳೂರು: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫಸ್೯ ಅಸೋಸಿಯೇಷನ್ (ರಿ.) ಮಂಗಳೂರು ವಲಯದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ “ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಉಚ್ಚಿಲ ದಸರಾದ ಛಾಯಾಚಿತ್ರಕ್ಕೆ ಕಾಪು  ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.  ಮಂಗಳೂರು ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ ಅಂಡ್ ಗೈಡ್ಸ್ ಸಭಾಭವನದಲ್ಲಿ ಜರಗಿದ “ಕಿಡ್ಸ್ ಫೋಟೋ ಫೆಸ್ಟ್” […]

ಉಚ್ಚಿಲ ಸರಸ್ವತಿ ಮಂದಿರ ಶಾಲಾ ವಾರ್ಷಿಕ ಕ್ರೀಡೋತ್ಸವ (Uchila Saraswathi Mandira School  annual sports festival)

ಉಚ್ಚಿಲ ಸರಸ್ವತಿ ಮಂದಿರ ಶಾಲಾ ವಾರ್ಷಿಕ ಕ್ರೀಡೋತ್ಸವ  (Uchila) ಉಚ್ಚಿಲ : ಉಚ್ಚಿಲ ಸರಸ್ವತಿ ಮಂದಿರ ಶಾಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟ ಶನಿವಾರ ಜರಗಿತು.  ಕ್ರೀಡಾಕೂಟವನ್ನು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನರವರು ಕ್ರೀಡಾ ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.  ಅವರು ಈ ಸಂದರ್ಭ ಮಾತನಾಡಿ, ಕ್ರೀಡೆಯಲ್ಲಿ ಬಹುಮಾನ ಸಿಗುವುದೆಂದು ಭಾಗವಹಿಸದೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ. ಸೋಲು, ಗೆಲುವು ಎರಡು ನಾಣ್ಯದ ಮುಖದಂತಿದೆ. ಕ್ರೀಡೆಗೆ ಗೌರವ ನೀಡಿ ಭಾಗವಹಿಸಿ ಎಂದರು. ಪ್ರೌಡ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ […]

 ಅರಣ್ಯ ಇಲಾಖಾ ಕಚೇರಿಯಲ್ಲಿ‌ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತ್ಯು‌ (Died after collapsing while on duty in the forest department office)

ಅರಣ್ಯ ಇಲಾಖಾ ಕಚೇರಿಯಲ್ಲಿ‌ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತ್ಯು‌ (Bantwala) ಬಂಟ್ವಾಳ: ರಾತ್ರಿ ಪಾಳಿಯ  ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವರು ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮಜ್ಜೋನಿ ನಿವಾಸಿ ಜಯರಾಮ‌ ಮೂಲ್ಯ ಮೃತಪಟ್ಟವರೆಂದು ಗುರುತಿಸಲಾಗಿದೆ.   ಕಳೆದ ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಅರಣ್ಯ ಇಲಾಖೆಯಲ್ಲಿ ಶುಕ್ರವಾರ ರಾತ್ರಿ ಪಾಳಿಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆ ಸುತ್ತು ಬರುವ ಬಗ್ಗೆ ಇಲಾಖೆಯ […]

ಅಕ್ರಮ ಮರಳುಗಾರಿಕೆಗೆ ಸಹಕಾರ – ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಅಮಾನತು (Cooperation if illegal sand mining –  Kaup Sub Station Officer Abdul khader suspended)

ಅಕ್ರಮ ಮರಳುಗಾರಿಕೆಗೆ ಸಹಕಾರ – ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಅಮಾನತು (Kaup) ಕಾಪು: ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಅಮಾನತುಗೊಂಡಿದ್ದಾರೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು‌ ದಾಖಲಾಗಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಠಾಣಾಧಿಕಾರಿಯವರನ್ನು  ಅಮಾನತುಗೊಳಿಸಿದ್ದರು.  ಆದರೆ ಅಕ್ರಮ ಮರಳುಗಾರಿಕೆ ನಡೆಸಲು ಕಾಪು ಠಾಣಾಧಿಕಾರಿಯವರು ಸಹಕರಿಸಿದ್ದಾರೆ ಎಂಬುದನ್ನು ತಿಳಿಸುವ ಆಡಿಯೋವೊಂದು ಎಸ್ಪಿ ಡಾ. […]

ಕೈ ರುಚಿ.. ರುಚಿ ರುಚಿಯಾದ ಅತಿ ರಸ ಅತ್ರಾಸ ತಯಾರಿ (Teasty athrasa …Athrasa)

 ಕೈ ರುಚಿ.. ರುಚಿ ರುಚಿಯಾದ ಅತಿ ರಸ ಅತ್ರಾಸ ತಯಾರಿ  ಚಿತ್ರ, ಬರಹ: ಸೌಮ್ಯ ಪೆರ್ನಾಜೆ  (Putturu) ಪುತ್ತೂರು : ಮನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತದೆ. ಆಹಾರದ ಬಗ್ಗೆ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ. ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್ ಯಾಕೆ…! ಇಂತಹ ಸಾತ್ವಿಕ ಆಹಾರ ಸವಿ ಸವಿ ರುಚಿಯ ದಿಡೀರಾಗಿ ಅತಿರಸ ಎಂದಾಗಲೇ ಬಾಯಿಯಲ್ಲಿ ನೀರೂರಿಸುವ […]

ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ (Vikram Gauda encounter is not fake : Dist. Minister Laxmi hebbalkar clarifies)

ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ   ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ: ಅವಶ್ಯವಿದ್ದರೆ ಸಿಎಂ, ಗೃಹ ಸಚಿವರೊಂದಿಗೆ ಚರ್ಚೆ  (Udupi) ಉಡುಪಿ: ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ನಕಲಿ ಅಲ್ಲ. ಎನ್‌ಕೌಂಟರ್ ನಕಲಿ ಎಂದು ಅನುಮಾನ ಪಡುವುದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.  ಉಡುಪಿಯ ಗೃಹ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಚಿವರು, ಎನ್ ಕೌಂಟರ್ […]

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆಯವರಿಗೆ ಅಭಿನಂದನೆ (Congratulation to DK Dist. Rajyothava award winner Padmanabha Skettigar)

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆಯವರಿಗೆ ಅಭಿನಂದನೆ (Mulki) ಮುಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯತ್  ವತಿಯಿಂದ ಪಂಚಾಯತ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ರವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.  ಸಭೆ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಮಯ್ಯದ್ಧಿ ವಹಿಸಿ ಮಾತನಾಡಿ, ಯಕ್ಷಗಾನ ದಿಗ್ಗಜರಾಗಿ ನಾಡಿಗೆ ಕಲಾವಿದರಾದ ಪದ್ಮನಾಭ ಶೆಟ್ಟಿಗಾರ ರವರ ಕಲೆಯ ಕೊಡುಗೆ ಅನನ್ಯ ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಲೀಲಾ  ಕೃಷ್ಣಪ್ಪ, […]