# Tags

ಕನ್ನಡ ಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಮೂಡಬೇಕು: ಜನಾರ್ದನ್ ಕೊಡವೂರು ​(Love of Kannda language should be everyone : Janardhan Kodavuru)

ಕನ್ನಡ ಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಮೂಡಬೇಕು: ಜನಾರ್ದನ್ ಕೊಡವೂರು ​ ಉಡುಪಿ: ಕನ್ನಡ ಭಾಷೆಯ ಬಗೆಗಿನ ಒಲವು ಸಾಹಿತ್ಯ ಸಂಸ್ಕೃತಿಯ ಅಭಿಮಾನ ಎಲ್ಲರಲ್ಲೂ ಮೂಡಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ, ಭಾರತ ಸ್ಕೌಟ್ ಜಿಲ್ಲಾ ಆಯುಕ್ತ ಜನಾರ್ದನ್ ಕೊಡ​ವೂರು ತಿಳಿಸಿದರು.  ಅವರು ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಮಾಸದ  ಸಂಭ್ರಮಾಚರಣೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ […]

ಮುಂಬೈಯಲ್ಲಿ ಡಿ. 7 ರಂದು ವಿಶ್ವಬಂಟರ ಸಮಾಗಮ,  ಕಟೀಲು ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ (Dec 7th “Vishwa Banta Samagama” at Mumbai :  Invitation letter released in Kateelu temple)

ಮುಂಬೈಯಲ್ಲಿ ಡಿ. 7 ರಂದು ವಿಶ್ವಬಂಟರ ಸಮಾಗಮ,  ಕಟೀಲು ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ  (Kateelu) ಕಟೀಲು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಡಿ. 7 ರಂದು ಮುಂಬೈಯಲ್ಲಿ  ನಡೆಯುವ ವಿಶ್ವಬಂಟರ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ಬಿಡುಗಡೆ ಗೊಳಿಸಿದರು.  ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಂತೋಷ್ ಕುಮಾರ್ […]

ಉಡುಪಿ: ಜನಾರ್ದ​ನ್  ಕೊಡವೂರು, ಪೂರ್ಣಿಮಾ  ಜನಾರ್ದನ್  ದಂಪತಿಗಳಿಗೆ ಅಭಿನಂದನೆ (Udupi : Congratulations to Janardhana Kodavooru and Poornima Janardhan couple)

ಉಡುಪಿ:ಜನಾರ್ದ​ನ್  ಕೊಡವೂರು, ಪೂರ್ಣಿಮಾ  ಜನಾರ್ದನ್  ದಂಪತಿಗಳಿಗೆ ಅಭಿನಂದನೆ (Udupi) ಉಡುಪಿ: ಭಾರ​ತ್  ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​ ಸ್ಕೌಟ್   ಆಯುಕ್ತರಾಗಿ ಆಯ್ಕೆಯಾದ ಜನಾರ್ದ​ನ್ ಕೊಡವೂರು ಹಾಗೆಯೇ ಅಂಚೆ ಇಲಾಖೆಯ ಶ್ರೇಷ್ಠ​ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್​ ಆಗಿ ಪುರಸ್ಕೃತಗೊಂಡ ಪೂರ್ಣಿಮಾ ಜನಾರ್ದನ್ ದಂಪತಿಗಳನ್ನು ಗೌರವಿಸಲಾಯಿತು​. ​ ಈ  ಸಂದರ್ಭದಲ್ಲಿ​ನಾಡೋಜ ಡಾ. ಕೆ. ಪಿ. ರಾವ್ ​, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ​, ​ಪ್ರಭಾವತಿ ಶೆಣೈ, ಅಧ್ಯಕ್ಷ ಪ್ರೊ. ಶಂಕರ್​, ಡಾ. ಗಣನಾಥ್ ಎಕ್ಕಾರ್, ಮಲಬಾರ್ […]

ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಸುರತ್ಕಲ್ ಬಂಟರ ಸಂಘದಿಂದ ಸನ್ಮಾನ

ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಸುರತ್ಕಲ್ ಬಂಟರ ಸಂಘದಿಂದ ಸನ್ಮಾನ(Surathkal) ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಕರ್ನಾಟಕ ಸುವರ್ಣ ಪ್ರಶಸ್ತಿ ಪುರಸ್ಕೃತರಾದ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಸುರತ್ಕಲ್ ಬಂಟರ ಸಂಘವು ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಅವರ ನೇತೃತ್ವದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ […]

ಕುಮಾರ ಪೆರ್ನಾಜೆ ಕುಟುಂಬ ಜೇನಿನೊಂದಿಗೆ ಸರಸ,  ಜೇನಿನ ಜೊತೆಗಾರ  (Kumar Pernaje Family with honey)

ಕುಮಾರ ಪೆರ್ನಾಜೆ ಕುಟುಂಬ ಜೇನಿನೊಂದಿಗೆ ಸರಸ, ಜೇನಿನ ಜೊತೆಗಾರ ಜೇನು ಕುಟುಂಬ ಬಗ್ಗೆ ಸವಿತಾ ಕೊಡಂದೂರುರವರ ವಿಶೇಷ ವರದಿ. (Putturu) ಪುತ್ತೂರು: ದಕ ಜಿಲ್ಲೆಯ ಪುತ್ತೂರು ತಾಲೂಕಿನ ಮೂಡ್ನರು ಗ್ರಾಮದ ಕುಮಾರ ಪೆರ್ನಾಜೆ ಕುಟುಂಬವು ಜೇನಿನೊಂದಿಗೆ ಸರಸ ಆಡುತ್ತಿದ್ದು, ಜೇನಿನ ಜೊತೆಗಾರನಾಗಿದೆ.   ಜೇನುತುಪ್ಪ ತಿನ್ನಲು ಮಾತ್ರ ತುಂಬಾ ಸಿಹಿ ಆದರೆ ಜೇನುನೊಣಗಳು ಮಾತ್ರ ತುಂಬಾ ಅಪಾಯಕಾರಿ. ಜೇನ್ನೊಣಗಳು ಕಚ್ಚಿದರೆ ಅದರಿಂದ ವಿಪರೀತ ನೋವಾಗುವುದು ಸಹಜ, ಆದರೆ ಇಂತಹ ಜೇನುನೊಣಗಳು ಮುಖದ ಮೇಲೆ ಗಡ್ಡದಂತೆ ಕುಳಿತು ಬಿಟ್ಟರೆ ಆಶ್ಚರ್ಯಪಡಬೇಡಿ. […]

ಉದ್ಯಾವರ : ಹಿರಿಯ ಉದ್ಯಮಿ ರಘುನಾಥ್ ಎನ್ ಸಾಲಿಯನ್ ನಿಧನ (Udyavara : Businessman Raghunath N Salian Passes away)

ಉದ್ಯಾವರ : ಹಿರಿಯ ಉದ್ಯಮಿ ರಘುನಾಥ್ ಎನ್ ಸಾಲಿಯನ್ ನಿಧನ (Udyavara) ಉದ್ಯಾವರ : ಬಾಲಾಜಿ ಬಾರ್ ಮತ್ತು ನವೀನ್ ಬಾರ್ ಇದರ ಮಾಲಕ ರಘುನಾಥ ಎಂ ಸಾಲಿಯಾನ್ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.  ಬೊಳ್ಜೆ ಬ್ರಹ್ಮ ಬೈದರ್ಕಳ ಗರಡಿ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕೇದಾರ್ ಬ್ರಹ್ಮಲಿಂಗೇಶ್ವರ ಕಲಾಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ಇಬ್ಬರು ಪುತ್ರರು, ನಾಲ್ಕು ಪುತ್ರಿಯಂದಿರು ಮತ್ತು ಅಪಾರ ಬಂಧು ಬಳಗದವರನ್ನು […]

ನವೆಂಬರ್ 24 : ಉದ್ಯಾವರದಲ್ಲಿ ಎಚ್‌ಪಿಆರ್‌ ಫಿಲಂಸ್  ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆ (“Ideal Couple” Cometition Sponsored by HPR Flms at Udyavara)

ನವೆಂಬರ್ 24 : ಉದ್ಯಾವರದಲ್ಲಿ ಎಚ್‌ಪಿಆರ್‌ ಫಿಲಂಸ್  ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆ (Udyavara) ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಾರ್ಷಿಕ ವಿವಿಧ ಸೇವಾ ಮತ್ತು ಸಾಮಾಜಿಕ ಚಟುವಟಿಕೆಗಳ ಸಹಾಯಾರ್ಥವಾಗಿ ಎಚ್‌ಪಿಆರ್‌ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆ ನವಂಬರ್ 24ರಂದು ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ.   25 ಸ್ಪರ್ಧಿಗಳು ಭಾಗವಹಿಸುತ್ತಿರುವ  ಈ ಸ್ಪರ್ಧೆಯು ಮೂರು ಸುತ್ತುಗಳಲ್ಲಿ ನಡೆಯಲಿದ್ದು, ಕ್ಷಣ ಕ್ಷಣಕ್ಕೂ ಕುತೂಹಲದೊಂದಿಗೆ ಸಂಗೀತ ಸುಧೆ, ಹಾಸ್ಯ ಲಹರಿ, ಸಾಂಸ್ಕೃತಿಕ ವೈಭವದೊಂದಿಗೆ […]

 ನ. 27: ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ (Shirva Nadibettu Soorya – Chandra “Kambala”)

 ನ. 27: ಶಿರ್ವ ನಡಿಬೆಟ್ಟು ಸೂರ್ಯ –ಚಂದ್ರ ಜೋಡುಕೆರೆ ಕಂಬಳ   (Shirva) ಶಿರ್ವ : ಇತಿಹಾಸ ಪ್ರಸಿದ್ದ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳವು ನವೆಂಬರ್  27ನೇ  ಬುಧವಾರ  (27-11-2024)ರಂದು ಬೆಳಿಗ್ಗೆ 9 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಲಿದೆ.  ಹಗ್ಗ ಕಿರಿಯ(ಜೂನಿಯರ್) ಮತ್ತು ಹಗ್ಗ ಅತೀ ಕಿರಿಯ (ಸಬ್ ಜೂನಿಯರ್) ವಿಭಾಗದ ಕೋಣಗಳಿಗೆ ಮಾತ್ರ ಸ್ಪರ್ಧೆ ನಡೆಯಲಿದೆ. ಎಲ್ಲಾ ಕಂಬಳ ಅಭಿಮಾನಿಗಳಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಇದೆ […]

ಉಡುಪಿ: ಜಿಲ್ಲಾಧಿಕಾರಿ ಹೆಸರಲ್ಲಿ ಫೇಕ್ ಫೇಸ್ ಬುಕ್ ಅಕೌಂಟ್- ದೂರು ದಾಖಲು

ಉಡುಪಿ: ಜಿಲ್ಲಾಧಿಕಾರಿ ಹೆಸರಲ್ಲಿ ಫೇಕ್ ಫೇಸ್ ಬುಕ್ ಅಕೌಂಟ್- ದೂರು ದಾಖಲು (Udupi) ಉಡುಪಿ: ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರ ಹೆಸರಲ್ಲಿ  ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದ್ದು ಈ ಬಗ್ಗೆ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಿಸಿ , ಪೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋ ದುರ್ಬಳಕೆ ಮಾಡಿಕೊಂಡು ಪೇಸ್‌ಬುಕ್‌ ಖಾತೆ ಸೃಜಿಸಿ Friend request  ಕಳುಹಿಸಿ ಹಣದ ಬೇಡಿಕೆ ಸಲ್ಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. […]

ಹೆಜಮಾಡಿ: ವಿಷದ ಹಾವು ಕಚ್ಚಿ ಕೃಷಿಕ ಜಯಕರ ಬಂಗೇರ ಸಾವು (Hejamadi : Death of farmer Jayakara Bangera after being bitten by a poisonous snake)

ಹೆಜಮಾಡಿ: ವಿಷದ ಹಾವು ಕಚ್ಚಿ ಕೃಷಿಕ ಜಯಕರ ಬಂಗೇರ ಸಾವು (Hejamady) ಹೆಜಮಾಡಿ : ನ. 21: ಹೆಜಮಾಡಿ ಗ್ರಾಮದ ಎಸ್‌ಎಸ್ ರಸ್ತೆ ನಿವಾಸಿ, ಕೃಷಿಕ ಜಯಕರ ಬಂಗೇರ (66) ಅವರು ಬುಧವಾರ ಸಂಜೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಯಾವುದೋ ವಿಷದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.  ಜಯಕರ ಬಂಗೇರ ಅವರನ್ನು ಚಿಕಿತ್ಸೆಗಾಗಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.