# Tags
#ನಿಧನ

ಕುಂದಾಪುರ : ಯೋಧ ಅನೂಪ್ ಪೂಜಾರಿ ನಿಧನ ಮನೆಯಲ್ಲಿ ಶೋಕ – ನಾಳೆ ಅಂತ್ಯಸಂಸ್ಕಾರ (Kundapura : Havaldar Anup Poojary death, Tomorrow cremation)

(Kundapura) ಕುಂದಾಪುರ : ಯೋಧ ಅನೂಪ್ ಪೂಜಾರಿ ನಿಧನ ಮನೆಯಲ್ಲಿ ಶೋಕ ನಾಳೆ ಅಂತ್ಯಸಂಸ್ಕಾರ

 ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಯೋಧ

(Kundapura) ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿಜಾಡಿಯ ಯೋಧ ಅನೂಪ್ ಪೂಜಾರಿ ಕಾಶ್ಮೀರದಲ್ಲಿ ಮೃತಪಟ್ಟಿದ್ದು, ಕುಟುಂಬ ಕಣ್ಣೀರ ಕೋಡಿಯನ್ನು ಹರಿಸುತ್ತಿದೆ.

 20 ದಿನಗಳ ರಜೆ ಮುಗಿಸಿ ಶನಿವಾರವಷ್ಟೆ ಕಾಶ್ಮೀರಕ್ಕೆ ಅನೂಪ್ ವಾಪಾಸ್ಸಾಗಿದ್ದರು. ಮೂರು ವರ್ಷಗಳ ಹಿಂದೆ   ಮದುವೆಯಾಗಿದ್ದ, ಅನೂಪ್ ದಂಪತಿಗೆ ಪುಟ್ಟ ಮಗು ಇದೆ.

ಪತಿಯ ಸಾವಿನ ಸುದ್ದಿ ತಿಳಿದು ಪತ್ನಿ ತವರಿನಿಂದ ಮನೆಗೆ ವಾಪಸ್ ಆಗುತ್ತಿದ್ದಾರೆ. ಅನೂಪ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಇಬ್ಬರು ಸಹೋದರಿಯರು ಮತ್ತವರ ಕುಟುಂಬ ಘಟನೆಯಿಂದ ಕಣ್ಣೀರಾಗಿದೆ. ಕ್ರಿಸ್ಮಸ್ ದಿನವೇ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

 ಹವಾಲ್ದಾರ್ ಅನೂಪ್ ಪೂಜಾರಿ ಮೃತದೇಹದ ಅಂತ್ಯ ಸಂಸ್ಕಾರ ನಾಳೆ (ಗುರುವಾರ) ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮೆರವಣಿಗೆ ಮಾಡಿ ಬಿಜಾಡಿ ಪಡು ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ.

 ಬೀಜಾಡಿ ಬೀಚ್ ಸಮೀಪ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರದ ಪ್ರಕ್ರಿಯೆಗಳು ನಡೆಯಲಿವೆ. ಈ ಬಗ್ಗೆ ಕುಟುಂಬಸ್ಥರು ಗ್ರಾಮಸ್ಥರು ಪೊಲೀಸರು ಸಭೆಗಳನ್ನು ನಡೆಸಿ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2