ಕಾಪು : ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆ (Kaup: Crime Prevention Month celebration led by Kaup Circle Police)
ಕಾಪು : ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆ
ಜನ ಜಾಗೃತಿ ಮಾಹಿತಿ ಅಭಿಯಾನ ಜಾಥ
(Kaup) ಕಾಪು : ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪ ವಿಭಾಗ ಹಾಗೂ ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಕಾಪು ವಿದ್ಯಾನಿಕೇತನ ಶಾಲಾ ಮೈದಾನದಿಂದ ಕಾಪು ಪೇಟೆಯಾದ್ಯಂತ ಬೃಹತ್ ಜನ ಜಾಗೃತಿ ಮಾಹಿತಿ ಅಭಿಯಾನ ಜಾಥಾ ನಡೆಯಿತು.
ಈ ಸಂದರ್ಭ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾತನಾಡಿ, ಅಪರಾಧ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ಅಪರಾಧ ಪ್ರಕರಣಗಳು ನಡೆಯುವ ಮೊದಲೇ ನಾವು ಎಚ್ಚೆತ್ತುಕೊಂಡಲ್ಲಿ ಕಳಂಕ ರಹಿತ ಸಮಾಜ ನಿರ್ಮಾಣ ಸಾಧ್ಯವಿದೆ. ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್., ಕಾಪು ಪೊಲೀಸ್ ಠಾಣಾಧಿಕಾರಿ ತೇಜಸ್ವಿ, ಕ್ರೈಂ ಎಸ್ಸೈ ರಮೇಶ್ ನಾಯ್ಕ್, ಪಡುಬಿದ್ರಿ ಉಪನಿರೀಕ್ಷಕ ಪ್ರಸನ್ನ ಕುಮಾರ್, ಶಿರ್ವ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಶಕ್ತಿವೇಲು, ಕ್ರೈಂ ಎಸ್ಸೈ ಅನಿಲ್ ಕುಮಾರ್ ಹಾಗೂ ವಿವಿಧ ಠಾಣೆಯ ಸಿಬ್ಬಂದಿಗಳು, ರೋಟರಿ ಪದಾಧಿಕಾರಿಗಳು, ಕಾಪು ಪರಿಸರದ ವಿವಿಧ ಶಾಲಾ ಕಾಲೇಜುಗಳ ನೂರಾರು ಮಂದಿ ವಿದ್ಯಾರ್ಥಿಗಳು, ಶಾಲಾ ಮುಖ್ಯ ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡರು.