# Tags
#ಸಂಘ, ಸಂಸ್ಥೆಗಳು

ಮುಲ್ಕಿ : ವಿಜಯ ರೈತ ಸೇವಾ ಸಹಕಾರಿ ಸಂಘದ 2025-29ರ ಸಾಲಿನ ನೂತನ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಆಯ್ಕೆ(Mulki: Ranganath Shetty elected as new president of Vijaya Raitha Seva Sahakari Sangha for 2025-29)

ಮುಲ್ಕಿ : ವಿಜಯ ರೈತ ಸೇವಾ ಸಹಕಾರಿ ಸಂಘದ 2025-29 ಸಾಲಿನ ನೂತನ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಆಯ್ಕೆ

(Mulki) ಮುಲ್ಕಿ: ಪ್ರತಿಷ್ಠಿತ ಮುಲ್ಕಿ  ವಿಜಯ ರೈತ ಸೇವಾ ಸಹಕಾರಿ ಸಂಘದ 2025-29ರ ಸಾಲಿನ ನೂತನ ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ರಂಗನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ

ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಹಾಗೂ ನಿರ್ದೇಶಕರುಗಳಾಗಿ ಗಂಗಾಧರ ವಿ ಶೆಟ್ಟಿ, ನರಸಿಂಹ ಪೂಜಾರಿ, ದೇವಪ್ರಸಾದ್ ಕೆಂಪುಗುಡ್ಡೆ, ಅಶೋಕ್ ಕುಮಾರ್ ಚಿತ್ರಾಪು, ನಂಜುಂಡ ಆರ್ ಕೆ, ರಾಮ ನಾಯ್ಕ್, ರಾಜೇಶ್ ಶೆಟ್ಟಿ ಉಳೆಪಾಡಿ, ಪದ್ಮಿನಿ ವಿಜಯ ಶೆಟ್ಟಿ ಶಿಮಂತೂರು, ಮಮತಾ ಡಿ ಪೂಂಜ, ಪ್ರಭಾಕರ ದೇವಾಡಿಗ, ಸಚಿನ್ ಹೆಗ್ಡೆ(ಶಾಖಾಧಿಕಾರಿ, ಬ್ಯಾಂಕ್ ಆಫ್ ಬರೋಡ ಮುಲ್ಕಿ) ಆಯ್ಕೆಯಾಗಿದ್ದಾರೆ.

ಆಡಳಿತ ನಿರ್ದೇಶಕ  ಶಿವರಾಮ ಶೆಟ್ಟಿ, ಪ್ರಬಂಧಕ ಚಂದ್ರಕಾಂತ ಶೆಟ್ಟಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ರಂಗನಾಥ ಶೆಟ್ಟಿ ಮತ್ತು ಸಂಘದ ನಿರ್ದೇಶಕರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ, ಮೂಲ್ಕಿ – ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಹರ್ಷರಾಜ ಶೆಟ್ಟಿ, ಸುಭಾಷ್ ಶೆಟ್ಟಿ, ವಿಶ್ವನಾಥ್ ಬಪ್ಪನಾಡು, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್, ಮಾಜೀ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಡಾ.ಹರೀಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ನ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಗೌತಮ್ ಜೈನ್ ಮುಲ್ಕಿ ಅರಮನೆ, ಉದಯ ಅಮೀನ್ ಮಟ್ಟು, ಕಿಶೋರ್ ಶೆಟ್ಟಿ ಬಪ್ಪನಾಡು, ನ್ಯಾಯವಾದಿ ರವೀಶ್ ಕಾಮತ್, ರಾಜೇಶ್ ಅಮೀನ್ ಕಿಲ್ಪಾಡಿ, ಮಂಜುನಾಥ ಆರ್ ಕೆ ಎಸ್ ರಾವ್ ನಗರ, ಮಂಜುನಾಥ ಶೆಟ್ಟಿ ಕಡವಿನಬಾಗಿಲು, ಮುಲ್ಕಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶಿವರಾಮ್ ಜಿ ಅಮೀನ್, ಮುಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನಿಶಾಂತ್ ಶೆಟ್ಟಿ, ಸದಸ್ಯರಾದ ಹರೀಶ್ ಹೆಜ್ಮಾಡಿ, ಪುನೀತ್ ಕೃಷ್ಣ, ರಘುನಾಥ ಕಾಮತ್ ಕೆಂಚನಕೆರೆ, ಉದಯ ಪೂಂಜ ಮತ್ತಿತರರು ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2