ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರಿಂದ ಸಿಇಟಿ ಮತ್ತು ನೀಟ್ ಶೈಕ್ಷಣಿಕ ಪುಸ್ತಕ ಲೋಕಾರ್ಪಣೆ (Dharmasthala Dharmadhikari Dr. D. Veerendra Hegde launches CET and NEET educational book)
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರಿಂದ ಸಿಇಟಿ ಮತ್ತು ನೀಟ್ ಶೈಕ್ಷಣಿಕ ಪುಸ್ತಕ ಲೋಕಾರ್ಪಣೆ
(Dharmasthala) ಧರ್ಮಸ್ಥಳ: ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಶೈಕ್ಷಣಿಕ ಹೊತ್ತಿಗೆ ಹೊರ ತಂದಿರುವ ನೆಸ್ಟ್ ಪ್ರಕಾಶನದ ಗಣಿತ ಹಾಗೂ ವಿಜ್ಞಾನದ 4 ಪುಸ್ತಕಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆ ಗೈದರು.
ಈಸಂದರ್ಭ ಮಾತನಾಡಿದ ಅವರು, ಕಳೆದ ಬಾರಿ ನೆಸ್ಟ್ ಪ್ರಕಾಶನದ ಸಿಇಟಿ ಮಾರ್ಗದರ್ಶನದ ಗಣಿತ ಪುಸ್ತಕವು ಸಾವಿರಾರು ವಿದ್ಯಾರ್ಥಿಗಳಿಗೆ ಅಮೂಲ್ಯ ಕೊಡುಗೆ ನೀಡಿದೆ. ನೀಟ್ ಮತ್ತು ಸಿಇಟಿ ಬರೆಯುವ ರಾಜ್ಯದ ಒಳಗೂ ಹಾಗೂ ಹೊರಗಿನ ವಿದ್ಯಾರ್ಥಿಗಳಿಗಾಗಿ ಸುಮಾರು 2 ವರ್ಷಗಳ ಕಾಲ ಪ್ರಯತ್ನ ಮತ್ತು ತಪಶ್ಚರ್ಯ ದಿಂದ ತಯಾರಾದ ನೆಸ್ಟ್ ಪ್ರಕಾಶನದ ಪ್ರಯತ್ನ ಕ್ಕೆ ಮಂಜುನಾಥ ದೇವರ ಕೃಪೆ ಇರಲಿ.
ಈ ಪುಸ್ತಕಗಳು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನಲ್ಲಿ ಪ್ರಕಾಶ ಬೀರಲಿ. ನೆಸ್ಟ್ ಪ್ರಕಾಶನದ ಈ ಪ್ರಯತ್ನ ಕನ್ನಡದ ಶೈಕ್ಷಣಿಕ ಚರಿತ್ರೆಯಲ್ಲಿ ಸ್ಮರಣೀಯವಾದುದು ಎಂದರು.
ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎನ್. ಜನಾರ್ದನ, ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯ ಸತೀಶ್ ಶೆಟ್ಟಿಗಾರ್, ಆಸರೆ ಹಿರಿಯ ನಾಗರಿಕರ ಸೇವಾ ಸಂಸ್ಥೆಯ ವ್ಯವಸ್ಥಾಪಕರಾದ ಪೆನ್ವೆಲ್ ಸೋನ್ಸ್, ಉಸಿರಿಗಾಗಿ ಹಸಿರು ಸಂಘಟನೆಯ ಸಂಸ್ಥಾಪಕ ಸಂತೋಷ್ ಎಂ ಶೆಟ್ಟಿಗಾರ್, ನೆಸ್ಟ್ ಪ್ರಕಾಶನದ ಉಪನ್ಯಾಸಕ ರಕ್ಷಿತ್ ಕುಮಾರ್, ಅಭಿಷೇಕ್, ಶೇಖರ್ ಪೂಜಾರಿ ಕೊಪ್ಪ ಉಪಸ್ಥಿತರಿದ್ದರು.