ಶಿಮಂತೂರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರಫುಲ್ಲ ಸಿ ಶೆಟ್ಟಿ ಆಯ್ಕೆ(Prafulla C Shetty elected as President of Shimanthur Women Milk Producers Cooperative Association)
ಶಿಮಂತೂರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರಫುಲ್ಲ ಸಿ ಶೆಟ್ಟಿ ಆಯ್ಕೆ
(Mulki) ಮುಲ್ಕಿ: ಶಿಮಂತೂರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ 2025-30 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಫುಲ್ಲ ಸಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವನಿತಾ ವಿ ಶೆಟ್ಟಿ, ನಿರ್ದೇಶಕರಾಗಿ ಪದ್ಮಿನಿ. ವಿ ಶೆಟ್ಟಿ, ಶಾಂತ ವಿ ಶೆಟ್ಟಿ, ಶೋಭಾ ವಿ ಶೆಟ್ಟಿ, ಶೋಭಾ ಎ ಶೆಟ್ಟಿ, ಲೀಲಾ ಎಸ್ ಶೆಟ್ಟಿ, ಜಯಶ್ರೀ ಡಿ ಶೆಟ್ಟಿ, ಬೇಬಿ. ಕೆ ಪೂಜಾರಿ, ಗುಲಾಬಿ ಕೆ ಪೂಜಾರಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕಾವ್ಯ ಪಿ.ಕೆಯವರು ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಸಂಘದ ಕಾರ್ಯನಿರ್ವಣಾಧಿಕಾರಿ ಮಮತಾ. ಎ ಶೆಟ್ಟಿ ಹಾಲು ಪರೀಕ್ಷಕಿ ಅಶ್ವಿನಿ. ಪಿ ಭಂಡಾರಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ, ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಚಂದ್ರಹಾಸ ಶೆಟ್ಟಿ, ಉದಯಕುಮಾರ್ ಶೆಟ್ಟಿ ಮುಂಬೈ, ಬಾಬಾ ರಂಜನ್ ಶೆಟ್ಟಿ ಮಜಲಗುತ್ತು, ಅತಿಕಾರಿಬೆಟ್ಟು ಗ್ರಾ ಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್ , ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ವಿಕಾಸ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಗೋಪಿನಾಥ ಪಡಂಗ , ಜಯಕರ ಶೆಟ್ಟಿ, ಮುಂಬೈ , ಸತೀಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಕೆಂಚನಕೆರೆ, ಶಿಮಂತೂರು ಯುವಕ ಮಂಡಲ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.