ಖ್ಯಾತ ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಡಿಲಿಗೆ ಶ್ರೀ ಮಿತ್ರ ವೈಭವ ಪ್ರಶಸ್ತಿ (Usha Hebbar got Shri Mithra Vaibhava Award)
ಖ್ಯಾತ ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಡಿಲಿಗೆ ಶ್ರೀ ಮಿತ್ರ ವೈಭವ ಪ್ರಶಸ್ತಿ
(Udupi) ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ, ಪ್ರತಿಷ್ಠಿತ ಯಕ್ಷರಂಗ ಕಲಾ ಸಂಸ್ಥೆ, ಶ್ರೀ ಮಿತ್ರ ಯಕ್ಷಗಾನ ಮಂಡಳಿ ಸರಳೇ ಬೆಟ್ಟು, ಶ್ರೀಮಿತ್ರ ಕಲಾನಿಕೇತನ ಟ್ರಸ್ಟ್, ಸರಳೇ ಬೆಟ್ಟು, ಶ್ರೀ ಯಕ್ಷ ಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಸಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರದಾನ ಮತ್ತು 41ನೇ ವಾರ್ಷಿಕೋತ್ಸವ ಸಂಮಾರಂಭವು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ತೋನ್ಸೆ ಗೀತಾ ಮಂಜುನಾಥ ಪೈ ಸ್ಮಾರಕ ಶ್ರೀಮಿತ್ರ ವೈಭವ ಪ್ರಶಸ್ತಿಯನ್ನು ಖ್ಯಾತ ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ ಇವರಿಗೆ ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಳ್ಳಿ ಕಿಶನ್ ಹೆಗ್ಡೆ, ತಲ್ಲೂರು ಶಿವರಾಮ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಎಚ್. ಪ್ರಕಾಶ್ ಶಾನ್ ಭಾಗ್, ಎಸ್ ವಿ ಉದಯಕುಮಾರ್ ಶೆಟ್ಟಿ, ಡಾ. ಅಣ್ಣಪ್ಪ ಕುಡ್ವ, ಎಸ್ ಉಪೇಂದ್ರ ನಾಯಕ್, ಹರೀಶ್ ಜೋಶಿ, ಅಶೋಕ್ ನಾಯಕ್, ಬಾಬು ನಾಯ್ಕ ಶಂಕರ ನಾಯಕ ಮೊದಲಾದವರು ಉಪಸ್ಥಿತರಿದ್ದರು.