ಮೂಳೂರು ರಾಹೆ ೬೬ರಲ್ಲಿ ತೂಫಾನ್ ವಾಹನದಲ್ಲಿ ಪ್ರವಾಸಿಗರ ಬೇಜವಾಬ್ದಾರಿ ವರ್ತನೆ ; ಸಾರ್ವತ್ರಿಕ ಆಕ್ರೋಶ
ಮೂಳೂರು ರಾಹೆ ೬೬ರಲ್ಲಿ ಶುಕ್ರವಾರ ಉಡುಪಿ ಕಡೆ ಸಾಗುತ್ತಿದ್ದ ತೂಫಾನ್ ವಾಹನದಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿರುವ ದೃಷ್ಯ ಈಗ ವೈರಲ್ ಆಗಿದೆ.
ತೂಫಾನ್ ವಾಹನದ ಒಳಗಡೆ ಪ್ರವಾಸಿಗರು ತುಂಬಿ ತುಳುಕಾಡಿದ್ದು, ಟಾಪ್‌ನಲ್ಲಿಯೂ ಕುಳಿತಿದ್ದುದು ಕಂಡು ಬಂದಿದೆ. ಅಂತೆಯೇ ಸ್ಟೆಪ್ನಿಟಯರ್ ಮೇಲೂ ಅಪಾಯಕಾರಿಯಾಗಿ ನೇತಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.
ಈ ರೀತಿಯ ಪ್ರಯಾಣ ಅತ್ಯಂತ ಅಪಾಯಕಾರಿ ಆಗಿದ್ದು, ಈ ಬಗ್ಗೆ ಪೋಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.