ಆಳ್ವಾಸ್ ಕಾಲೇಜಿನ ಸುಕನ್ಯಾ ಅವರಿಗೆ ಡಾಕ್ಟರೇಟ್ ಪದವಿ
ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಶ್ಲೇಷಣಾತ್ಮಕ ರಾಸಾಯನ ಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಕನ್ಯಾ ಸಲ್ಲಿಸಿದ ‘ವೋಲ್ಟಾಮ್ಮೆಟ್ರಿಕ್ ಸ್ಟಡೀಸ್ ಆಫ್ ಸಮ್ ಬಯೋಲಾಜಿಕಲ್ ಇಂಪಾಟೆAðಟ್ ಆರ್ಗಾನಿಕ್ ಕಂಪೌAಡ್ಸ್ ಎಟ್ ಡಿಫರೆಂಟ್ ಮೋಡಿಫೈಡ್ ಇಲೆಕ್ಟ್ರೋಡ್ಸ್’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಕುವೆಂಪು ವಿಶ್ವವಿದ್ಯಾಲಯದ ಕೈಗಾರಿಕಾ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ. ಇ.ಕುಮಾರಸ್ವಾಮಿರವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಸುಕನ್ಯಾ ಅವರು ವೇಣೂರಿನ ಲಿಂಗಪ್ಪ ದೇವಾಡಿಗ ಹಾಗೂ ಕುಮುದಿನಿ ಅವರ ಪುತ್ರಿ ಹಾಗೂ ದುಬೈಯಲ್ಲಿ ಉದ್ಯೋಗಿಯಾಗಿರುವ ಸಂತೋಷರವರ ಪತ್ನಿ.