ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಗಗನ ಬಿ. ಗೆ ಡಾಕ್ಟರೇಟ್ ಪದವಿ (Alvas Biotecnlogy and Reserch centers Gagana B got Doctoral digree)
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಗಗನ ಬಿ. ಗೆ ಡಾಕ್ಟರೇಟ್ ಪದವಿ
(Moodabidre) ಮೂಡುಬಿದಿರೆ: ಆಳ್ವಾಸ್ ಕಾಲೇಜಿನ (Alvas Collge Moodabidre)ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮೊದಲ ಡಾಕ್ಟರೇಟ್ ಪದವೀಧರೆಯಾಗಿ ಗಗನ ಬಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಆಳ್ವಾಸ್ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಗಗನ ಬಿ ಮಂಡಿಸಿದ ‘’ಸ್ಕ್ರೀನಿಂಗ್ ಆಫ್ ಪೈಟೋಕೆಮಿಕಲ್ ಕಾನ್ಟಿಟ್ಯೂಯೆಂಟ್ಸ್ ಆ್ಯಂಡ್ ಇವ್ಯಾಲ್ಯೇವೇಷನ್ ಆಫ್ ಆ್ಯಂಟಿಕ್ಯಾನ್ಸ್ರಸ್ ಪ್ರೋರ್ಪಾಟೀಸ್ ಆಫ್ ಜಿಮ್ನಾಕ್ರಾಂಥೆರಾ ರ‍್ಕೋಹೆರಿಯನಾ (ಹುಕ್. ಎಫ್ ಆ್ಯಂಡ್ ಥಾಮ್ಸ್) ವಾರ್ಬ್ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ.
ಮೂಲತಃ ತರೀಕೆರೆಯವರಾದ ಇವರು ಬಿವಿ ಬಸವರಾಜ್ ಹಾಗೂ ಹೆಚ್‌ಒ ಪ್ರಭಾವತಿ ದಂಪತಿಗಳ ಪುತ್ರಿ.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಾಮ ಭಟ್ ಪಿ ಯವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಸಂಶೋಧನೆಯ ಹಂತದಲ್ಲಿ ಇವರು ಮೌಖಿಕವಾಗಿ ಪ್ರಸ್ತುತ ಪಡಿಸಿದ ೬ ಅಂತರಾಷ್ಟ್ರೀಯ ಹಾಗೂ ಒಂದು ರಾಷ್ಟ್ರೀಯ ಪೇಪರ್‌ಗಳಿಗೆ ಅತ್ಯುತ್ತಮ ಪ್ರಸ್ತುತಿಯ ಗೌರವಕ್ಕೆ ಪಾತ್ರವಾಗಿದ್ದು, ಮೂರು ಸಂಶೋಧನಾ ಪೇಪರ್‌ಗಳು ಪ್ರಕಟಗೊಂಡಿವೆ.