# Tags
#ಶಾಲಾ ಕಾಲೇಜು

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಭರವಸೆಯ ನುಡಿ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಭರವಸೆಯ ನುಡಿ

 ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು

ವಿದ್ಯಾಗಿರಿ: ‘ಆಳ್ವಾಸ್ ಪದವಿ ಪೂರ್ವಕಾಲೇಜಿನ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಸರ್ಕಾರಿ ಕೋಟಾದ ಅಡಿಯಲ್ಲಿ ವೈದ್ಯಕೀಯ ಸೀಟು ಪಡೆಯುವ ಭರವಸೆ ಇದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಆಳ್ವಾಸ್ ಪದವಿ ಪೂರ್ವಕಾಲೇಜು  ಹಮ್ಮಿಕೊಂಡ ಪೋಷಕ- ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಗುರಿ ಸಾಧಿಸಲು ನಿರೀಕ್ಷೆ ಮತ್ತು ಕನಸು ಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ. ಆದರೆ, ಇನ್ನೊಬ್ಬರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ವ್ಯಕ್ತಿಯೂ ಅನನ್ಯ. ಅದಕ್ಕಾಗಿ ಗುರಿಯೆಡೆಗಿನ ನಡೆಗೆ ನಿಮ್ಮ ಸಮಯ ಮೀಸಲಿಡಿ’ಎಂದು ಹಿತವಚನ ಹೇಳಿದರು.

‘ವಿದ್ಯಾರ್ಥಿ ಜೀವನವು ಅತ್ಯಮೂಲ್ಯ ಸಮಯವಾಗಿದ್ದು, ಗಾಸಿಪ್ ಆಲಿಸಿಕೊಂಡು ವ್ಯರ್ಥ ಮಾಡಬೇಡಿ. ನಿಮಗೆ ಮಾರ್ಗದರ್ಶನ ಮಾಡಲು, ಸಂಯೋಜಕರು, ಉಪನ್ಯಾಸಕರು ಇದ್ದಾರೆ. ಅವರ ಮಾತು ಕೇಳಿ’ಎಂದು ಸಲಹೆ ನೀಡಿದರು.

‘ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವ ಬದಲಾಗಿ ಪ್ರೋತ್ಸಾಹಿಸಬೇಕು. ಪ್ರೋತ್ಸಾಹವು ಮಕ್ಕಳಿಗೆ ಹುರುಪು ನೀಡುತ್ತದೆ. ಗುರಿಯೆಡೆಗಿನ ಪಯಣ ಸರಳವಾಗುತ್ತದೆ’ ಎಂದರು.

‘ಪ್ರಯತ್ನಕ್ಕೆ ಎಲ್ಲವೂ ಸಾಧ್ಯ’ಎಂದ ಅವರು, ‘ಎಸ್ಸೆಸ್ಸಲ್ಸಿಗಿಂತ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಬೇಕು. ಎನ್‌ಸಿಆರ್‌ಟಿ ಪಠ್ಯಕ್ರಮ, ಫೌಂಡೇಷನ್ ಕೋರ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಗಮನ ಹರಿಸಿ ಎಂದರು.

ಅಪರಾಹ್ನ ಪೋಷಕರು ತಮ್ಮ ಮಕ್ಕಳ  ಪ್ರಗತಿಯ ಕುರಿತು ಶಿಕ್ಷಕರುಗಳ ಜೊತೆ ಸಮಾಲೋಚನೆ ನಡೆಸಿದರು. ದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ೧೪೫೦ಕ್ಕೂ ಅಧಿಕ ಪೋಷಕರುಗಳಿಗೆ ಸಂಸ್ಥೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಆಳ್ವಾಸ್ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್,  ವಿವಿಧ ಸಂಯೋಜಕರುಗಳು ಇದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2