ಉಚ್ಚಿಲ: ಮಹಿಳೆಗೆ ಕಾರು ಡಿಕ್ಕಿ: ಗಂಭೀರ (Women hit by jeep: serious)
ಉಚ್ಚಿಲ: ಮಹಿಳೆಗೆ ಕಾರು ಡಿಕ್ಕಿ: ಗಂಭೀರ
( Uchila) ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಬದಿ ನಿಂತಿದ್ದ ಮಹಿಳೆಯೊರ್ವರಿಗೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ತೀವ್ರ ಗಾಯಗೊಂಡ ಘಟನೆ ಬುದವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಪಡುಬಿದ್ರಿಯ ನಿವಾಸಿ ಶ್ರೀಮತಿ ಸುಶೀಲ ಶೆಟ್ಟಿ (70) ಎಂದು ಗುರುತಿಸಲಾಗಿದೆ.
ಅವರು ಉಚ್ಚಿಲ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹೆದ್ದಾರಿಯಲ್ಲಿ ಪೂರ್ವ ಬದಿ ಹೋಗಲು ನಿಂತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸರಕಾರಿ ಇಲಾಖಾ ಜೀಪು ಡಿಕ್ಕಿ ಹೊಡೆದಿದೆ.
ತೀವ್ರ ಗಾಯಗೊಂಡ ಅವರನ್ನು ಸ್ಥಳೀಯರ ನೆರವಿನೊಂದಿಗೆ ಎಸ್ಡಿಪಿಐ ಆಂಬುಲೆನ್ಸ್ ನಲ್ಲಿ ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.