ಉಚ್ಚಿಲ ಸರಸ್ವತಿ ಮಂದಿರ ಶಾಲೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಚ್ಚಿಲದಲ್ಲಿ ಕೆಸರು ಗದ್ದೆ ಕ್ರೀಡಾಕೂಟ (Uchila Saraswathi Mandir school Old Students Association Conducts Mud Fields Games)
ಉಚ್ಚಿಲ ಸರಸ್ವತಿ ಮಂದಿರ ಶಾಲೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಚ್ಚಿಲದಲ್ಲಿ ಕೆಸರು ಗದ್ದೆ ಕ್ರೀಡಾಕೂಟ
(Uchila) ಉಚ್ಚಿಲ : ಶತಮಾನವನ್ನು ಪೂರೈಸುತ್ತಿರುವ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಭಾನುವಾರ ಉಚ್ಚಿಲ ಬದ್ದಿಂಜೆ ಮಠದ ಬಳಿಯ ಗದ್ದೆಯಲ್ಲಿ ಆಯೋಜಿಸಲಾಯಿತು.
ಕ್ರೀಡಾಕೂಟವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧ್ಯುಮಣಿ ಆರ್ ಭಟ್ ಮತ್ತು ಗಣ್ಯರು ದೀಪ ಪ್ರಜ್ವಲಿಸಿ, ಕೆಸರು ಗದ್ದೆಗೆ ಹಾಲು, ಸೀಯಾಳ, ನೀರು ಹಾಗೂ ದೇವರ ಪ್ರಸಾದವನ್ನು ಹಾಕುವ ಮೂಲಕ ಚಾಲನೆ ನೀಡಲಾಯಿತು.
ಉಚ್ಚಿಲ ಸರಸ್ವತಿ ಮಂದಿರ ಕನ್ನಡ ಶಾಲೆ ಹಾಗೂ ಸ್ಥಳೀಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಮುಕ್ತ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ನೂರು ಮೀಟರ್ ಓಟ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಮ್ಯೂಸಿಕಲ್ ಚಯರ್, ರಿಲೇ ಸಹಿತ ಹತ್ತು ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಉಚ್ಚಿಲ ಸರಸ್ವತಿ ಮಂದಿರ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಲಾಲ್ ಮತ್ತು ವಿದ್ಯಾಪ್ರಭೋಧಿನಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಕ್ರೀಡೆಯಲ್ಲಿ ಸಹಕರಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಧ್ಯುಮಣಿ ಭಟ್, ಪ್ರಾಥಮಿಕ ಶಾಲಾ ಸಂಚಾಲಕ ಮೋಹನದಾಸ ಶೆಟ್ಟಿ, ಗೌರವಾಧ್ಯಕ್ಷರುಗಳಾದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಧೀರಜ್ ಹುಸೈನ್, ಲಕ್ಷ್ಮೀ ಟೀಚರ್, ಸರಸ್ವತಿ ಮಂದಿರ ಪ್ರೌಡ ಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಮಾಜಿ ತಾಪಂ ಉಪಾಧ್ಯಕ್ಷ ಯುಸಿ ಸೇಕಬ್ಬ, ಲಕ್ಷ್ಮೀಶ ಭಟ್, ಸಂಘಟನಾ ಕಾರ್ಯದರ್ಶಿ ಕಾಂತಿ ಆಚಾರ್ಯ, ಕಾರ್ಯದರ್ಶಿ ಸತೀಶ್ ಕುಲಾಲ್, ಕೋಶಾಧಿಕಾರಿ ಅನಿತ್ ಸಾಲ್ಯಾನ್ ಮತ್ತಿತರು ವೇದಿಕೆಯಲ್ಲಿದ್ದರು.
ಚಂದ್ರಶೇಖರ ಶೆಟ್ಟಿ ಪೊಲ್ಯ ಸ್ವಾಗತಿಸಿ ನಿರೂಪಿಸಿದರು. ಸತೀಶ್ ಕುಲಾಲ್ ವಂದಿಸಿದರು.