ಉಡುಪಿ: ಅಯೋಧ್ಯಾ ಶಿಲ್ಪಿಯಿಂದ ಗೀತಾ ಲೇಖನ ದೀಕ್ಷೆ ಸ್ವೀಕಾರ (Udupi : Initiation of Geetha article by Ayodhya Shilpi)
ಉಡುಪಿ: ಅಯೋಧ್ಯಾ ಶಿಲ್ಪಿಯಿಂದ ಗೀತಾ ಲೇಖನ ದೀಕ್ಷೆ ಸ್ವೀಕಾರ
(Udupi) ಉಡುಪಿ: ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಶ್ರೀ ಯೋಗೀರಾಜ್ ಅವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಕೃಷ್ಣಮಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಪುತ್ತಿಗೆ ಶ್ರೀ ಪಾದದ್ವಯರನ್ನು ಭೇಟಿ ಮಾಡಿದರು.
ಪರ್ಯಾಯ ಪುತ್ತಿಗೆ ಶ್ರೀಪಾದರು ಯೋಗೀರಾಜ್ ಅವರನ್ನು ಗೌರವಿಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಯೋಗೀರಾಜ್ ಅವರು ಪರ್ಯಾಯ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ವಿಷಯ ತಿಳಿದು ಸ್ವಯಂ ಪ್ರೇರಿತರಾಗಿ ಗೀತಾಲೇಖನ ದೀಕ್ಷೆ ಸ್ವೀಕರಿಸಿದರು.